ಮನುಷ್ಯನಿಗೆ ಭತ್ತದ ಚೀಲ, ರಾಗಿ ಚೀಲದಂತಹ ಭಾರವಾದ ವಸ್ತುಗಳನ್ನ ತಲೆ ಮೇಲೆ ಹೊತ್ತುಕೊಂಡು ಹೋಗುವುದು ಮೊದಲಿಂದ ರೂಢಿ. ಇಲ್ಲವಾದ್ರೆ ಊರಿಗೆ ಹೋಗುವಾಗ ಬ್ಯಾಗ್ ಅನ್ನ ಕ್ಯಾರಿ ಮಾಡಿರುತ್ತೀವಿ. ಆದ್ರೆ ಇಲ್ಲೊಬ್ಬ ವ್ಯಕ್ತಿ ಬೈಕ್ ಅನ್ನು ತಲೆ ಮೇಲೆ ಹೊತ್ತು ಅದನ್ನ ಬಸ್ ಮೇಲೆ ಇಳಿಸಿದ್ದಾನೆ.
ಸದ್ಯ ವ್ಯಕ್ತಿಯೊಬ್ಬರು ಬೈಕ್ ಅನ್ನು ತಲೆ ಮೇಲೆ ಹೊತ್ತುಕೊಂಡು ಬಸ್ ಮೇಲೆ ಇಳಿಸಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ. ಬೈಕ್ ಹೊತ್ತುಕೊಂಡ ವ್ಯಕ್ತಿಯನ್ನ ಎಲ್ರೂ ಸೂಪರ್ ಮ್ಯಾನ್ ಎನ್ನುತ್ತಿದ್ದಾರೆ. ಇನ್ನು ಕೆಲವರಂಥೂ ರಿಯಲ್ ಬಾಹುಬಲಿ ಎಂದು ಕರೆದಿದ್ದಾರೆ.
ಈ ವಿಡಿಯೋವನ್ನ ಗುಲ್ಜಾರ್ ಸಾಹೇಬ್ ಎನ್ನುವವರು ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೋಸ, ಕಳ್ಳತನದಂತ ಕೆಲಸಗಳನ್ನ ಮಾಡುವುದು ಬಿಟ್ಟು ಹೊಟ್ಟೆ ಪಾಡಿಗಾಗಿ ಇಂತಹ ಕಷ್ಟದ ಕೆಲಸ ಮಾಡಿದ್ರೆ ಜನ ಮೆಚ್ಚುತ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ ಎನ್ನಬಹುದು.
ಜಾರ್ಖಂಡ್ನ ಬಸ್ ನಿಲ್ದಾಣದಲ್ಲಿ ವ್ಯಕ್ತಿವೊಬ್ಬರು ಬೈಕ್ ಅನ್ನು ತಲೆ ಮೇಲೆ ಹೊತ್ತುಕೊಂಡು ಬಸ್ಗೆ ಇಟ್ಟಿರುವ ಏಣಿಯಿಂದ ಮೇಲೆ ಏರಿ ಬೈಕ್ ಇಳಿಸಿದ್ದಾರೆ. ಸದ್ಯ ಈ ವಿಡಿಯೋವನ್ನ 90 ಸಾವಿರ ಜನ ವೀಕ್ಷಣೆ ಮಾಡಿದ್ದು 5 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಬೈಕ್ ಹೊತ್ತುಕೊಂಡ ವ್ಯಕ್ತಿಯನ್ನ ಎಲ್ರೂ ಸೂಪರ್ ಮ್ಯಾನ್ ಎನ್ನುತ್ತಿದ್ರೆ ಇನ್ನು ಕೆಲವರಂತೂ ರಿಯಲ್ ಬಾಹುಬಲಿ ಎಂದು ಕರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
They are really super human 👏🔥❤️ pic.twitter.com/kNruhcRzE1
— ज़िन्दगी गुलज़ार है ! (@Gulzar_sahab) November 25, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post