ಸೈತಾನ್ಗೆ ಸೈತಾನ್ನೇ ಪ್ರೇರಣೆ ಆಗಬೇಕು. ಅದು ಬಿಟ್ಟು ಸಭ್ಯಸ್ಥ ಸೂಫಿ ಸಂತರು ಸ್ಪೂರ್ತಿ ಆಗಲು ಹೇಗೆ ಸಾಧ್ಯ? ಮತಿಗೆಟ್ಟ ಈ ಬಣ್ಣಗೇಡಿಗಳಿಗೆ ಎಲ್ಲೋ ಕುಳಿತು ಆಡುವ ಮಾತಿಗೆ ಸೊಪ್ಪು ಹಾಕುವ ಪಿಶಾಚಿಗಳಿಗೆ ನೈಜತೆ, ವಾಸ್ತವದ ಅರಿವಿರಲ್ಲ. ತಲೆತುಂಬಾ ಧರ್ಮದ ದುರಾಭಿಮಾನ ತುಂಬಿಕೊಂಡ ಶಂಕಿತ ಉಗ್ರ ಶಾರೀಕ್ಗೆ ಪ್ರಚೋದಿಸಿದ್ದು, ದೇಶಭ್ರಷ್ಟ ಝಾಕೀರ್ ಮಾತುಗಳು. ಇದು ಕುಕ್ಕರ್ ಕಿರಾತಕನ ಬೆನ್ನತ್ತಿರುವ ಪೊಲೀಸರಿಗೆ ಸಿಕ್ಕ ಬೆಚ್ಚಿಬೀಳಿಸಿದ ಸುದ್ದಿ.
ಮಂಗಳೂರು ಸ್ಪೋಟ ರೂವಾರಿ ಶಂಕಿತ ಉಗ್ರ ಶಾರೀಕ್‌ನ ನಂಟು ಬಗೆದಷ್ಟು ಹೊರಬರ್ತಿದೆ. ಪ್ರಕರಣ ಎನ್ಐಎಗೆ ವರ್ಗಾವಣೆ ಆಗಿದ್ದು, ಎಫ್‌ಐಆರ್ ದಾಖಲಿಸಿಕೊಂಡ ಅಧಿಕಾರಿಗಳಿಗೆ ಆತನ ಮೊಬೈಲ್‌ನಲ್ಲಿ ಸಿಕ್ಕ 50ಕ್ಕೂ ಹೆಚ್ಚು ವಿಡಿಯೋಗಳು ಆತಂಕ ಸೃಷ್ಟಿಸಿದೆ. ಹಿಂದೂ ದೇವಾಲಯಗಳು ಮಾತ್ರವಲ್ಲದೆ ಪೊಲೀಸರೂ ಟಾರ್ಗೆಟ್ ಆಗಿದ್ರು ಅನ್ನೋ ಆಘಾತಕಾರಿ ಮಾಹಿತಿಯೂ ಹೊರಬಿದ್ದಿದೆ.
ಶಂಕಿತ ಉಗ್ರ ಶಾರೀಕ್ಗೆ ಧರ್ಮಾಂದ ಝಾಕಿರ್ ಸ್ಫೂರ್ತಿ!
ಶಾರೀಕ್ ಮೊಬೈಲ್ ವಿಡಿಯೋ ಕಂಡು ಬೆಚ್ಚಿದ ಎನ್ಐಎ!
ಮಂಗಳೂರು ಆಟೋ ಬ್ಲಾಸ್ಟ್ ಪ್ರಕರಣ ಎನ್ಐಎಗೆ ಹಸ್ತಾಂತರವಾಗಿದೆ. ಸದ್ಯ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ವಶಪಡಿಸಿಕೊಂಡ ಶಾರೀಕ್‌ನ ಮೊಬೈಲ್ ಬೆಚ್ಚಿಬೀಳಿಸುತ್ತಿದೆ. ಮೊಬೈಲ್ ಪರಿಶೀಲನೆ ವೇಳೆ, ಹಲವು ಸ್ಪೋಟಕ ಮಾಹಿತಿಗಳು ಬಯಲಾಗಿದೆ. ಭಾರತದಿಂದ ನಿಷೇಧಕ್ಕೆ ಒಳಗಾದ ದೇಶಭ್ರಷ್ಟ ಇಸ್ಲಾಂ ಮೂಲಭೂತವಾದಿ ಝಾಕೀರ್ ನಾಯ್ಕ್‌ನ ಸಾಕಷ್ಟು ಭಾಷಣಗಳು, ಶಾರೀಕ್ಗೆ ಪ್ರಚೋದನೆ ನೀಡಿದ ಸಂಗತಿ ಬಹಿರಂಗವಾಗಿದೆ.
ಇಸ್ಲಾಂ ಮೂಲಭೂತವಾದದ ಬಗ್ಗೆ ಝಾಕೀರ್ ನಾಯ್ಕ್ ಸಾಕಷ್ಟು ಭಾಷಣಗಳನ್ನ ಮಾಡಿದ್ದು, ಶಾರೀಕ್ ಈತನ ಭಾಷಣಕ್ಕೆ ಪ್ರಭಾವಿತನಾಗಿದ್ದ.. ಈ ಧರ್ಮಾಂದ ಝಾಕೀರ್ ನಾಯ್ಕ್‌ನನ್ನು ದಿ ರಿಯಲ್ ಇನ್ಸ್‌ಪಿರೇಷನ್ ಅಂತ ಹೇಳ್ಕೊಂಡು ಈ ಶಾಕೀರ್ ಸ್ಪೆಲ್ಫಿ ವಿಡಿಯೋ ಕೂಡ ಮಾಡಿದ್ದನಂತೆ.
ಸೈತಾನ್ ಭಾಷಣ ಸ್ಫೂರ್ತಿ!
ಮುಸ್ಲಿಂ ಮೂಲಭೂತವಾದಿ ಝಾಕೀರ್ ನಾಯ್ಕ್, ಈ ಹಿಂದೆನೇ ಭಾರತದಿಂದ ನಿಷೇಧಕ್ಕೆ ಒಳಗಾಗಿದ್ದಾನೆ. ಈ ಝಾಕೀರ್ ನಾಯ್ಕ್‌ನ ಭಾಷಣಗಳಿಂದ ಶಾರೀಕ್ ಸಾಕಷ್ಟು ಪ್ರಭಾವಿತನಾಗಿದ್ದ. ಇದಕ್ಕೆ ಉದಾಹರಣೆ ಶಾರೀಕ್‌ನ ಮೊಬೈಲ್‌ನಲ್ಲಿ ಸಿಕ್ಕ 50ಕ್ಕೂ ಹೆಚ್ಚು ಝಾಕೀರ್ ವಿಡಿಯೋಗಳು.. ಶಂಕಿತ ಉಗ್ರ ಶಾರೀಕ್‌ನ ಮೊಬೈಲ್‌ನಲ್ಲಿ ಸೆಲ್ಫಿ ಫೋಟೋಗಳು ಸಿಕ್ಕುವೆ. ಅಲ್ಲದೆ, ಶಾರೀಕ್ ಫೋನ್ನಲ್ಲಿ ಬಾಂಬ್ ತಯಾರಿಸೋ ವಿಡಿಯೋಗಳಿವೆ.. ಟೋರ್ ಬ್ರೌಸರ್ ಮೂಲಕ ಡಾರ್ಕ್ ವೆಬ್ ಬಳಸ್ತಿದ್ನಂತೆ ಈ ಶಂಕಿತ ಶಾರೀಕ್.
ಇನ್ನು, ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಹೊಸ ಉಗ್ರ ಸಂಘಟನೆಯೊಂದು ಮೊಳಕೆ ಒಡೆದಿದೆ ಅನ್ನೋ ಆಘಾತಕಾರಿ ಅಂಶ, ಕೇಂದ್ರ ತನಿಖಾ ಸಂಸ್ಥೆಗಳ ಉನ್ನತ ಮೂಲದಿಂದ ಬಯಲಾಗಿದೆ.. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸ್ಥಾಪಿಸಿದ್ದ ಭಟ್ಕಳ್ ಬ್ರದರ್ಸ್ ರೀತಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಕೆಲಸ ಮಾಡುವ ಗುರಿ ಹೊಂದಿತ್ತಾ ಅನ್ನೋ ಅನುಮಾನ ಹುಟ್ಟಿಸಿದೆ.
ಉಗ್ರ ಸಂಘಟನೆಗೆ ಜನ್ಮ?
ಇದೇ ಮೊದಲ ಬಾರಿಗೆ ಐಆರ್‌ಸಿ ಸಂಘಟನೆ ಹೆಸರು ಬಹಿರಂಗವಾಗಿದೆ. ಈ IRC ಮೂಲವನ್ನ ಪೊಲೀಸರು, ತನಿಖಾ ಸಂಸ್ಥೆಗಳು ಹುಡುಕುತ್ತಿವೆ.. ತೀರ್ಥಹಳ್ಳಿ ಮೂಲದವರಿಂದ ಸಂಘಟನೆ ಶುರುವಾದ ಬಗ್ಗೆ ಸಂಶಯ ಜನ್ಮತಾಳಿದೆ.. ಅರಾಫತ್ ಅಲಿ, ಮತೀನ್, ಶಾರೀಕ್ ಎಲ್ಲರೂ ಇದರಲ್ಲಿ ಸಕ್ರಿಯರಾದ ಬಗ್ಗೆ ಡೌಟ್ ಇದೆ.. ಮಲೆನಾಡು, ಕರಾವಳಿಯಿಂದ ಹಲವರನ್ನು ನೇಮಿಸಿರುವ ಶಂಕೆ ಇದ್ದು, IRC ಜಾಡನ್ನ ಪೊಲೀಸರು, ರಾಷ್ಟ್ರೀಯ ತನಿಖಾದಳ ಬೆನ್ನತ್ತಿದೆ.
ಒಟ್ಟಾರೆ, ಶಾಂತಿತೋಟ ಕರ್ನಾಟಕದಲ್ಲಿ ಈ ಸೈತಾನ್ ಸಂಘ, ಕೊಳ್ಳಿ ಇಡುವ ಕೆಲಸಕ್ಕೆ ಕೈಹಾಕಿದೆ.. ಇದಕ್ಕೆ ಸಾಕ್ಷಿ ಎಂಬಂತೆ ಶಾರೀಕ್‌ನ ಪ್ಲಾನ್ ದೊಡ್ಡ ಮಟ್ಟದಲ್ಲೇ ಇತ್ತು ಎನ್ನುವದಕ್ಕೆ ಸಿಕ್ಕ ವಿಡಿಯೋಗಳು.. ಸದ್ಯ ಈ ರಕ್ಕಸ ಚೇತರಿಸಿಕೊಂಡ್ರೆ, ನಿಜವಾದ ಉಗ್ರ ಕೃತ್ಯ, ಪ್ಲಾನ್, ಸಹಕರಿಸಿದವರು ಎಲ್ಲವೂ ಹೊರ ಬೀಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post