ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಕಿರುತೆರೆಗೆ ಮತ್ತೆ ಕಮ್ಬ್ಯಾಕ್ ಮಾಡೋ ವಿಷಯ ಎಲ್ಲರಿಗೂ ಗೊತ್ತೆ ಇದೆ. ಈ ನಡುವೆ ಮೋಹಕತಾರೆ ರಮ್ಯಾ ಸ್ವಲ್ಪ ದಪ್ಪ ಆದರು ಎಂದು ಫ್ಯಾನ್ಸ್ ಯೋಚಿಸುತ್ತಿದ್ದಾರೆ. ಹತ್ತು ವರ್ಷದ ಹಿಂದೆ ಇದ್ದ ರಮ್ಯಾಗೂ ಈಗಿನ ರಮ್ಯಾಗೂ ತುಂಬಾ ವ್ಯತ್ಯಾಸವಿದೆ. ಸಿನಿಮಾ ಬಿಟ್ಟ ಮೇಲೆ ರಮ್ಯಾ ಸ್ವಲ್ಪ ದಪ್ಪ ಆಗಿದ್ರು.
ವರ್ಕೌಟ್, ಡಯಟ್ ಕಡೆ ಜಾಸ್ತಿ ಇಂಟ್ರೆಸ್ಟ್ ಕೊಡದ ರಮ್ಯಾ ಆರಾಮಾಗಿ ಲೈಫ್ ಲೀಡ್ ಮಾಡ್ತಿದ್ರು. ಫಿಸಿಕಲಿ ದಪ್ಪ ಆಗಿದ್ರು ಅದರ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಮತ್ತೆ ಸಿನಿಮಾ ಮಾಡ್ತಿರೋದ್ರಿಂದ ದಪ್ಪ ಆಗಿರುವ ಬಗ್ಗೆ ಫೀಲ್ ಮಾಡ್ತಿದ್ದಾರೆ. ಮತ್ತೆ ಸಣ್ಣ ಆಗ್ಬೇಕು ಅಂತ ಮನಸ್ಸು ಮಾಡಿ ಫಿಟ್ನೆಸ್ ಕಡೆ ಫೋಕಸ್ ಮಾಡ್ತಿದ್ದಾರೆ.
ವರ್ಕೌಟ್ ಶುರು ಮಾಡಿರೋ ರಮ್ಯಾ, ಮೋಹಕ ತಾರೆ ಕಟ್ಟುನಿಟ್ಟು ಡಯೆಟ್..!
ಧನಂಜಯ್ ನಟನೆಯ ‘ಉತ್ತರಕಾಂಡ’ ಚಿತ್ರಕ್ಕೆ ರಮ್ಯಾ ನಾಯಕಿ. ಈಗಾಗಲೇ ಸಿನಿಮಾ ಸೆಟ್ಟೇರಿದ್ದು ಮುಹೂರ್ತದಲ್ಲಿ ಕೂಡ ಭಾಗವಹಿಸಿದ್ದರು. ಫೀಮೇಲ್ ಒರಿಯೆಂಟೆಡ್ ಸ್ಕ್ರಿಪ್ಟ್ ಆಗಿದ್ರೆ ಹೆಂಗಿದ್ರು ಓಕೆ ಆಗ್ತಿತ್ತೇನೋ? ಒಬ್ಬ ಕಮರ್ಷಿಯಲ್ ಹೀರೋ ಜೊತೆ, ಫಿಟ್ ಅಂಡ್ ಸ್ಟೈಲಿಶ್ ನಟನ ಜೊತೆ ತೆರೆ ಹಂಚಿಕೊಳ್ಳುವಾಗ ರಮ್ಯಾನೂ ಸ್ವಲ್ಪ ಸ್ಲಿಮ್ ಆದ್ರೆ ಚೆನ್ನಾಗಿರುತ್ತೆ ಅಂತ ಅವರ ಅಭಿಮಾನಿಗಳಿಗೆ ಅನಿಸ್ತಿತ್ತು. ಅಭಿಮಾನಿಗಳ ಆಸೆಯಂತೆ ರಮ್ಯಾ ಅದಾಗಲೇ ವರ್ಕೌಟ್ ಸ್ಟಾರ್ಟ್ ಮಾಡಿದ್ದಾರೆ. ಸ್ಲಿಮ್ ಆಗೋಕೆ ನಿರ್ಧರಿಸಿ ಅದಕ್ಕೆ ತಕ್ಕಂತೆ ಡಯೆಟ್ ಪ್ಲ್ಯಾನ್ ಕೂಡ ಹಾಕಿಕೊಂಡಿದ್ದಾರೆ.
ಇದಕ್ಕೂ ಮುಂಚೆ ಹೆಡ್ಬುಷ್ ಸಿನಿಮಾದ ಪ್ರಮೋಷನ್ಗಾಗಿ ದಾವಣೆಗೆರೆಗೆ ಭೇಟಿ ಕೊಟ್ಟಾಗ ಬೆಣ್ಣೆ ದೋಸೆ ಸವಿಯಲು ಹೋಟೆಲ್ಗೆ ಹೋಗಿದ್ರು. ಆಗಲೂ ತಮ್ಮ ಫಿಟ್ನೆಸ್ ಹಾಗೂ ಡಯೆಟ್ ಬಗ್ಗೆ ಕಾಳಜಿ ತೋರಿಸಿದ್ದ ರಮ್ಯಾ ಒಂದೇ ದೋಸೆ ಸಾಕು ಅಂತ ರುಚಿ ನೋಡಿದ್ರು. ಜನವರಿಯಿಂದ ಉತ್ತರಕಾಂಡ ಸಿನಿಮಾದ ಚಿತ್ರೀಕರಣದಲ್ಲಿ ರಮ್ಯಾ ಪಾಲ್ಗೊಳ್ಳುತ್ತಿದ್ದಾರೆ.
ಅಷ್ಟರಲ್ಲಿ ಸೈಜ್ ಮತ್ತು ವೇಯ್ಟ್ ರೆಡ್ಯೂಸ್ ಮಾಡೋ ಪ್ಲ್ಯಾನ್ನಲ್ಲಿದ್ದು, ತೆರೆಮೇಲೆ ಎಲ್ಲರಿಗೂ ಸರ್ಪ್ರೈಸ್ ಕೊಡೋಕೆ ರೆಡಿಯಾಗ್ತಿದ್ದಾರೆ. ಹತ್ತು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದ ರಮ್ಯಾ ಮತ್ತೆ ವಾಪಸ್ ಬಂದಿದ್ದಾರೆ. ಇಷ್ಟು ವರ್ಷ ಗ್ಯಾಪ್ ಆದ್ರು ರಮ್ಯಾ ಮೇಲಿನ ಪ್ರೀತಿ-ಅಭಿಮಾನ ಒಂದಿಷ್ಟು ಕಮ್ಮಿಯಾಗಿಲ್ಲ. ಈ ಅಭಿಮಾನದ ಜೊತೆ ರಮ್ಯಾ ಮತ್ತಷ್ಟು ಸ್ಲಿಮ್ ಆದ್ರೆ ಅವ್ರ ಫ್ಯಾನ್ಸ್ಗೆ ಇದಕ್ಕಿಂತ ಖುಷಿ ಬೇಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post