ಈತ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್. ಪಂದ್ಯ ಪಂದ್ಯಕ್ಕೂ ಅದ್ಭುತ ಪ್ರದರ್ಶನ ನೀಡೋ ಮೂಲಕ, ಗಮನ ಸೆಳೆದ ಆಟಗಾರ. ಆದ್ರೂ, ಟಿ20 ವರ್ಲ್ಡ್ಕಪ್ಗೆ ಟಿಕೆಟ್ ಸಿಗ್ಲಿಲ್ಲ. ಹಾಗಂತ ಆತ ನಿರಾಶನಾಗಿಲ್ಲ. ಸದ್ಯ ಈತನ ಗುರಿ ಏಕದಿನ ವಿಶ್ವಕಪ್!
ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಮಕಾಡೆ ಮಲಗಿದೆ. ಆದ್ರೆ, ಮುಖಭಂಗದ ಹೊರತಾಗಿಯೂ ಶೈನಿಂಗ್ ಸ್ಟಾರ್ ಶ್ರೇಯಸ್ ಅಯ್ಯರ್ ಆಟ, ಎಲ್ಲರ ಗಮನ ಸೆಳೆದಿದೆ. ಅವರ ಬೊಂಬಾಟ್ ಆಟ, ಮೆನ್ ಇನ್ ಬ್ಲೂ ಬಲ ಹೆಚ್ಚಿಸಿದೆ. ಏಕದಿನ ವಿಶ್ವಕಪ್ ತಯಾರಿಯಲ್ಲಿರೋ ಭಾರತಕ್ಕೆ, ಆಟಗಾರರ ಭರ್ಜರಿ ಪ್ರದರ್ಶನ ಪಾಸಿಟಿವ್ ಎನರ್ಜಿ ತುಂಬಿದೆ.
ಟಿ20 ಕ್ರಿಕೆಟ್ಗೆ ಸೂರ್ಯಕುಮಾರ್ ಡಾನ್..!
ಏಕದಿನ ತಂಡಕ್ಕೆ ಶ್ರೇಯಸ್ ಅಯ್ಯರ್ ಬಾದ್ ಶಾ.!
ಹೌದು.! ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್, ಅಬ್ಬರಿಸಿದ್ದಾರೆ. ದೇಶ-ವಿದೇಶದಲ್ಲೂ ರನ್ ಮಳೆ ಸುರಿಸಿದ್ದಾರೆ. ಆ ಮೂಲಕ ಟೀಮ್ ಇಂಡಿಯಾದ ಟಿ20 ಕ್ರಿಕೆಟ್ ಡಾನ್ ಪಟ್ಟ ಅಲಂಕರಿಸಿದ್ದಾರೆ. ಸೂರ್ಯ ಟಿ20ಗೆ ಆದ್ರೆ, ಅಯ್ಯರ್ ಏಕದಿನಕ್ಕೆ ಬಾದ್ಶಾ ಆಗಿದ್ದಾರೆ. ಈ ವರ್ಷ ಪೂರ್ತಿ ಏಕದಿನದಲ್ಲಿ ಅಬ್ಬರಿಸಿರುವ ಈ ಬಲಗೈ ಬ್ಯಾಟರ್ ರನ್ ಶಿಖರ ಕಟ್ಟಿದ್ದಾರೆ. ಆದ್ರೆ, ಈ ಪ್ರದರ್ಶನ ಮ್ಯಾನೇಜ್ಮೆಂಟ್ ತಲೆಬಿಸಿ ಹೆಚ್ಚಿಸಿ ಬಿಟ್ಟಿದೆ.
ಟೀಮ್ ಇಂಡಿಯಾದಲ್ಲಿ ಪ್ರತಿ ಸ್ಲಾಟ್ಗೂ ಪೈಪೋಟಿ ಇದೆ. ರೆಸ್ಟ್ನಲ್ಲಿರೋ ಸೀನಿಯರ್ಸ್ ಕಮ್ಬ್ಯಾಕ್ ಮಾಡಿದ್ರೆ ಜೂನಿಯರ್ಸ್ ಔಟ್ ಆಗಲೇಬೇಕು. ಸದ್ಯ 3 ಕ್ರಮಾಂಕದಲ್ಲಿ ಅಬ್ಬರಿಸಿರೋ ಶ್ರೇಯಸ್ ಕೂಡ ಕೊಹ್ಲಿ ದಾರಿ ಮಾಡಿಕೊಡಬೇಕು. ಹೀಗಾಗಿ ಶ್ರೇಯಸ್ ಕಣ್ಣಿರೋದು 4ನೇ ಕ್ರಮಾಂಕದ ಮೇಲೆ. ಆದ್ರೆ, ಅಲ್ಲಿ ಸದ್ಯ ಆಡ್ತಿರೋದು ಸೂರ್ಯ ಕುಮಾರ್. ಈಗ ಸೂರ್ಯನಿಗೆ ಕೊಕ್ ಕೊಡಬೇಕಾ.? ಶ್ರೇಯಸ್ಗೆ ಸ್ಥಾನ ನೀಡಬೇಕಾ.? ಅನ್ನೋ ಗೊಂದಲ ಮ್ಯಾನೇಜ್ಮೆಂಟ್ದು.
Lots to improve upon. See you Sunday 🇮🇳 pic.twitter.com/Knjfs2lGPX
— Shreyas Iyer (@ShreyasIyer15) November 25, 2022
ಕೊಹ್ಲಿ-ಧೋನಿ ಬಳಿಕ 50ರ ಸರಾಸರಿ ದಾಟಿದ ಅಯ್ಯರ್..
ಅಯ್ಯರ್ ಏಕದಿನ ಕ್ರಿಕೆಟ್ಗೆ ಡೆಬ್ಯೂ ಮಾಡಿದ್ದು, 2017ರಲ್ಲಿ… ಅಂದಿನಿಂದ ಈವರೆಗೂ 34 ಏಕದಿನ ಪಂದ್ಯಗಳನ್ನಾಡಿರುವ ಅಯ್ಯರ್, ಈಗ ಸರಾಸರಿ 50ರ ಗಡಿ ದಾಟಿದ್ದು, 1379 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಏಕದಿನದಲ್ಲಿ ಸರಾಸರಿ 50ರ ಗಡಿ ದಾಟಿದ ಭಾರತದ 3ನೇ ಬ್ಯಾಟರ್ ಎನಿಸಿದ್ದಾರೆ. ಮೊದಲ ಸ್ಥಾನದಲ್ಲಿ ಕೊಹ್ಲಿ, 57.68 ಸರಾಸರಿ ಹೊಂದಿದ್ರೆ, ಧೋನಿ 50.58 ಸರಾಸರಿ ಹೊಂದಿದ್ದು, 2ನೇ ಸ್ಥಾನದಲ್ಲಿದ್ದಾರೆ.
ಈ ವರ್ಷ ಅಬ್ಬರಿಸಿ ಬೊಬ್ಬಿರಿದ ಅಯ್ಯರ್.!
ನ್ಯೂಜಿಲೆಂಡ್ ತಂಡವನ್ನ ಬೆಂಡೆತ್ತಿದ ಮುಂಬೈಕರ್..!
ಅದ್ಭುತ ಫಾರ್ಮ್ನಲ್ಲಿರುವ ಅಯ್ಯರ್, ಟೀಮ್ ಇಂಡಿಯಾದಲ್ಲಿ ಭಾರೀ ಭರವಸೆ ಮೂಡಿಸಿದ್ದಾರೆ. ಈ ವರ್ಷ ಟಿ20 ತಂಡದಲ್ಲಿ ಹೆಚ್ಚು ಚಾನ್ಸ್ ಪಡೆಯದಿದ್ರೂ, ODIನಲ್ಲಿ ಧೂಳೆಬ್ಬಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧವೂ ಖದರ್ ತೋರಿಸಿದ್ದಾರೆ. ಕಿವೀಸ್ ವಿರುದ್ಧ 4 ಪಂದ್ಯಗಳನ್ನಾಡಿರುವ ಅಯ್ಯರ್, 1 ಶತಕ, 3 ಅರ್ಧಶತಕ ದಾಖಲಿಸಿದ್ದಾರೆ. 74.25 ಸರಾಸರಿಯಲ್ಲಿ 297 ರನ್ ಗಳಿಸಿ ಔಟ್ಸ್ಟಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ.
ಈ ವರ್ಷ ಅಯ್ಯರ್ ಸಾಧನೆ..
ಈ ವರ್ಷ 11 ಏಕದಿನ ಇನ್ನಿಂಗ್ಸ್ ಆಡಿರುವ ಶ್ರೇಯಸ್, 62.88ರ ಸರಾಸರಿಯಲ್ಲಿ 566 ರನ್ ಸಿಡಿಸಿದ್ದಾರೆ. 5 ಅರ್ಧಶತಕ, 1 ಶತಕವನ್ನೂ ಚಚ್ಚಿದ್ದಾರೆ.
Shreyas Iyer in last 8 innings in ODI format:
80(111)
54(57)
63(71)
44(34)
50(37)
113*(111)
28*(23)
80(76)This is ridiculous consistency. pic.twitter.com/MjTn6XP99I
— Johns. (@CricCrazyJohns) November 25, 2022
ಏಕದಿನ ವಿಶ್ವಕಪ್ ಟಿಕೆಟ್ ಯಾವ ಕಾರಣಕ್ಕೂ ಮಿಸ್ ಆಗಲ್ಲ.!
ದುರಾದೃಷ್ಟ ಎಂಬಂತೆ, ಶ್ರೇಯಸ್ ಅಯ್ಯರ್ಗೆ ಟಿ20 ವಿಶ್ವಕಪ್ ಟಿಕೆಟ್ ಸಿಕ್ಕಿರಲಿಲ್ಲ. T20ಯಲ್ಲಿ ಅದ್ಭುತವಾಗಿ ಆಡಿದ್ರೂ, ವರ್ಲ್ಡ್ಕಪ್ಗೆ ಸೆಲೆಕ್ಟ್ ಮಾಡದೇ ಇದ್ದದ್ದು, ಅಚ್ಚರಿ ಮೂಡಿಸಿತ್ತು. ಈಗ ಕಿವೀಸ್ ವಿರುದ್ಧ ಮತ್ತು ಈ ವರ್ಷ ಅಯ್ಯರ್ ಏಕದಿನದಲ್ಲಿ ಆಡಿದ ಆಟ ನೋಡ್ತಿದ್ರೆ, ಮುಂಬರುವ ಏಕದಿನ ವಿಶ್ವಕಪ್ಗೆ ಟಿಕೆಟ್ ಮಿಸ್ಸೇ ಇಲ್ಲ ಎನ್ನಲಾಗ್ತಿದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಸ್ಲಾಟ್ಗಳ ಪೈಪೋಟಿ ಜೋರಾಗಿರೋದು ಓಪನ್ ಸೀಕ್ರೆಟ್.! ಸೀನಿಯರ್ಸ್ ತಂಡಕ್ಕೆ ಎಂಟ್ರಿಕೊಟ್ರೆ, ಯಾರಿಗೆ ಯಾವ ಸ್ಲಾಟ್ ಸಿಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ.. ಹೀಗಾಗಿ ಶ್ರೇಯಸ್ ಅಯ್ಯರ್ ಏಕದಿನ ಭವಿಷ್ಯ ಏನಾಗುತ್ತೆ ಅನ್ನೋ ಸದ್ಯಕ್ಕಿರೋ ಕುತೂಹಲವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post