ಕೆ.ಎಲ್ ರಾಹುಲ್ ಒಬ್ಬ ಐಪಿಎಲ್ ಪ್ಲೇಯರ್. ಟೀಮ್ ಇಂಡಿಯಾ ಪರ ಪ್ಲಾಫ್ ಆಗ್ತಾರೆ ಅನ್ನೋ ಒಂದು ಕಾರಣಕ್ಕೆ ಮಾತ್ರ ಈ ಮಾತನ್ನ ಹೇಳ್ತಿಲ್ಲ. ಅದಕ್ಕೆ ಇನ್ನೊಂದು ಕಾರಣ ಇದೆ. ರಾಹುಲ್ ಲೆಕ್ಕಾಚಾರದ ಕಂಪ್ಲೀಟ್ ಕಥೆ ಇಲ್ಲಿದೆ.
ಐಸಿಸಿ ಟ್ರೋಫಿ ಬರ ನೀಗುತ್ತೆ ಅನ್ನೋ ಅಭಿಮಾನಿಗಳ ಕನಸು ಕನಸಾಗೇ ಉಳಿದಿದೆ. ಇಂಗ್ಲೆಂಡ್ ವಿರುದ್ಧದ ಹೀನಾಯ ಪ್ರದರ್ಶನ ಕೋಟಿ ಕೋಟಿ ಅಭಿಮಾನಿಗಳ ಕನಸನ್ನ ನುಚ್ಚು ನೂರು ಮಾಡಿದೆ. ಇದರ ಜೊತೆಗೆ ಟೀಮ್ ಇಂಡಿಯಾದಲ್ಲಿ ಹಲ ಆಟಗಾರರ ಭವಿಷ್ಯವೂ ಅತಂತ್ರಕ್ಕೆ ಸಿಲುಕಿದೆ. ಟಿ20 ಫಾರ್ಮೆಟ್ನಲ್ಲಿ ಸೀನಿಯರ್ ಆಟಗಾರರ ಕರಿಯರ್ ಖತಂ ಆಗೋದು ಕನ್ಫರ್ಮ್.
ಮುಗೀತು ರಾಹುಲ್ T20 ಭವಿಷ್ಯ, IPLಗಷ್ಟೇ ಸೀಮಿತ.!
ಸಿಕ್ಕೆಲ್ಲಾ ಅವಕಾಶಗಳನ್ನ ಕೈ ಚೆಲ್ಲಿದ ಕೆಎಲ್ ರಾಹುಲ್ T20 ಭವಿಷ್ಯ ಬಹುತೇಕ ಖತಃ. ಈಗಾಗಲೇ ಬಿಸಿಸಿಐ ಬಾಸ್ಗಳು ಟಿ20 ಫಾರ್ಮೆಟ್ಗೆ ಸ್ಪೆಷಲಿಸ್ಟ್ ಪ್ಲೇಯರ್ಗಳ ಟೀಮ್ ಕಟ್ಟೋಕೆ ಮುಂದಾಗಿದ್ದಾರೆ. ಸ್ಥಾನಕ್ಕಾಗಿ ಸಾಮರ್ಥ್ಯ ಪ್ರೂವ್ ಮಾಡಿರೋ ಯಂಗ್ಸ್ಟರ್ಗಳು ಕ್ಯೂ ನಿಂತಿದ್ದಾರೆ. ಹೀಗಾಗಿ ಪ್ಲಾಫ್ ಸ್ಟಾರ್ ಕೆಎಲ್ ರಾಹುಲ್ಗೆ ಟೀಮ್ ಇಂಡಿಯಾ ಪರ ಟಿ20 ತಂಡದಲ್ಲಿ ಸ್ಥಾನ ಸಿಗೋದು ಡೌಟ್. ಐಪಿಎಲ್ಗಷ್ಟೇ ರಾಹುಲ್ ಸೀಮಿತರಾಗೋದು ಬಹುತೇಕ ಕನ್ಫರ್ಮ್.
ಪಕ್ಕಾ IPL ಪ್ಲೇಯರ್ ಕೆಎಲ್ ರಾಹುಲ್..
ಇದರಲ್ಲಿ ಡೌಟೇ ಬೇಡ.. ಟೀಮ್ ಇಂಡಿಯಾ ಪರ ಟಿ20ಯಲ್ಲಿ ರಾಹುಲ್ ಆಡೋದಕ್ಕೂ, ಐಪಿಎಲ್ನಲ್ಲಿ ಫ್ರಾಂಚೈಸಿ ಪರ ಆಡೋದಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ. ವರ್ಷದಿಂದ ವರ್ಷಕ್ಕೆ, ಸೀಸನ್ನಿಂದ ಸೀಸನ್ಗೆ ಆಡಿದ ಆಟವೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಈ ಸೀಸನ್ ಐಪಿಎಲ್ನಲ್ಲಿ ರಾಹುಲ್ ಸರಾಸರಿ 51.33 ಆಗಿದ್ರೆ, ಟೀಮ್ ಇಂಡಿಯಾ ಪರ ರನ್ಗಳಿಸಿದ್ದು 28.93ರ ಸರಾಸರಿಯಲ್ಲಿ.
ಟೀಮ್ ಇಂಡಿಯಾ ಪರ ಆಡಿದ್ರೆ ₹5 ಕೋಟಿ..!
ಐಪಿಎಲ್ ಆಡಿದ್ರೆ ಸಿಗುತ್ತೆ ಬರೋಬ್ಬರಿ ₹17 ಕೋಟಿ.!
ರಾಹುಲ್ ಟೀಮ್ ಇಂಡಿಯಾದ A ಗ್ರೇಡ್ ಕ್ರಾಂಟ್ರ್ಯಾಕ್ಟ್ಡ್ ಪ್ಲೇಯರ್..! ಆಡಲಿ, ಆಡದೇ ಇರಲಿ ₹5 ಕೋಟಿ ಅಕೌಂಟ್ಗೆ ಬಂದು ಬೀಳುತ್ತೆ. ಸ್ಟಾರ್ ಅನ್ನೋ ಕಾರಣಕ್ಕೆ ಸ್ಥಾನವೂ ಸಿಕ್ಕೇ ಸಿಗುತ್ತೆ. ಐಪಿಎಲ್ನಲ್ಲಿ ಹಾಗಲ್ಲ. ಅಬ್ಬರಿಸಿದ್ರೆ ಮಾತ್ರ ಸ್ಥಾನ, ಹಣ ಎಲ್ಲಾ. ಇಲ್ಲಾಂದ್ರೆ ಕಿಕ್ಔಟ್ ಅಷ್ಟೇ. ಹೀಗಾಗಿಯೇ ಐಪಿಎಲ್ನಲ್ಲಿ ಜಿದ್ದಿಗೆ ಬಿದ್ದಂತೆ ಪ್ಲೇಯರ್ಸ್ ಆಡೋದು. ಇದರಿಂದ ರಾಹುಲ್ ಕೂಡ ಹೊರತಾಗಿಲ್ಲ.. ಇದಕ್ಕೆ ರಾಹುಲ್ ನೀಡಿದ ಪ್ರದರ್ಶನ ಮತ್ತು ಗಳಿಸಿದ ಆದಾಯವೇ ಬೆಸ್ಟ್ ಎಕ್ಸಾಂಪಲ್.
₹10 ಲಕ್ಷದಿಂದ ಆರಂಭ, ನೂರು ಕೋಟಿ ಒಡೆಯ..
ಯೆಸ್, ಕೆಎಲ್ ರಾಹುಲ್ ಐಪಿಎಲ್ ಜರ್ನಿ ಆರಂಭವಾಗಿದ್ದು 2013ರಲ್ಲಿ. ಆರ್ಸಿಬಿ ಪರ ಐಪಿಎಲ್ಗೆ ಲೋಕಕ್ಕೆ ಕಾಲಿಟ್ಟ ರಾಹುಲ್, 10 ಲಕ್ಷಕ್ಕೆ ಸೇಲ್ ಆಗಿದ್ರು. ₹10 ಲಕ್ಷದಿಂದ ಆರಂಭವಾದ ರಾಹುಲ್ ಜರ್ನಿ ಈಗ ₹102 ಕೋಟಿ 10 ಲಕ್ಷ ರೂಪಾಯಿಗೆ ಬಂದು ನಿಂತಿದೆ. ಇದರ ಜೊತೆಗೆ ನಾಯಕತ್ವದ ಅಧಿಕಾರವೂ ಸಿಕ್ಕಿದೆ.
- ರಾಹುಲ್ IPL ಆದಾಯ..
ಐಪಿಎಲ್ನಲ್ಲಿ ಆರಂಭಿಕ ವರ್ಷ ಆರ್ಸಿಬಿ ಪರ ಆಡಿದ ರಾಹುಲ್ 10 ಲಕ್ಷ ಸಂಪಾದಿಸಿದ್ರು. ಆ ಬಳಿಕ ಸನ್ರೈಸರ್ಸ್ ಹೈದ್ರಾಬಾದ್ ಕ್ಯಾಂಪ್ ಸೇರಿದ ರಾಹುಲ್ 2 ವರ್ಷಕ್ಕೆ 2 ಕೋಟಿಗಳಿಸಿದ್ರು. 2016 ಟ್ರೇಡ್ವಿಂಡೋ ಅಡಿಯಲ್ಲಿ ಮತ್ತೆ ಆರ್ಸಿಬಿ ಸೇರಿ 2 ವರ್ಷ, 2 ಕೋಟಿ ಹಣ ಜೇಬಿಗಿಳಿಸಿದ್ರು. ಆ ಬಳಿಕ 2018ರಲ್ಲಿ ಪಂಜಾಬ್ ತಂಡದ ಪಾಲಾದ ರಾಹುಲ್, 4 ವರ್ಷ ತಲಾ 11 ಕೋಟಿಯಂತೆ 44 ಕೋಟಿಗಳಿಸಿದ್ರು. ಸದ್ಯ ಲಕ್ನೋ ಸೂಪರ್ ಜೈಂಟ್ಸ್ ನಾಯಕನಾಗಿರೋ ರಾಹುಲ್, ವರ್ಷಕ್ಕೆ 17 ಕೋಟಿಯಂತೆ 2 ವರ್ಷದಿಂದ 34 ಕೋಟಿ ಗಳಿಸಿದ್ದಾರೆ.
ಆಟದಿಂದ ಕೋಟಿ-ಕೋಟಿ ಹಣಗಳಿಸಿದ್ದು ಮಾತ್ರವಲ್ಲ. ಐಪಿಎಲ್ನ ಈ ಹತ್ತು ವರ್ಷಗಳ ಜರ್ನಿಯಲ್ಲಿ ಎಂಡ್ರೋಸ್ಮೆಂಟ್ನಿಂದ ಗಳಿಸಿದ ಆದಾಯ ಲೆಕ್ಕಕ್ಕೇ ಇಲ್ಲ. ಇನ್ನು ಮೋಜು-ಮಸ್ತಿಗಂತೂ ಕೊರತೆನೇ ಇಲ್ಲ. ಇಡೀ ವರ್ಷ ಟೀಮ್ ಇಂಡಿಯಾ ಆಡೋದಕ್ಕಿಂತ, ಹೆಚ್ಚು ಹಣ, ಹೆಚ್ಚು ಎಂಜಾಯ್ಮೆಂಟ್ 2 ತಿಂಗಳು ಐಪಿಎಲ್ನಲ್ಲಿ ಅಬ್ಬರಿಸಿದ್ರೆ ಸಿಗೋವಾಗ ಇನ್ನೇನ್ ಎಕ್ಸ್ಪೆಕ್ಟ್ ಮಾಡೋಕ್ ಆಗುತ್ತೆ ನೀವೇ ಹೇಳಿ ನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post