ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮರಾಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಾಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶುಭಕೃತು ನಾಮಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷ, ತೃತಿಯಾ (ತದಿಗೆ) ಮೂಲ ನಕ್ಷತ್ರ-ಶೂಲನಾಮಯೋಗ-ತೈತಿಲಕರಣ. ರಾಹುಕಾಲ-ಶನಿವಾರ – 9.00 ರಿಂದ 10.30 ರವರೆಗೆ ಇರಲಿದೆ.
ಮೇಷ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ವಿಶೇಷವಾದ ತಲ್ಲೀನತೆ ಹೊಂದಿರುತ್ತೀರಿ
- ವಿದ್ಯಾರ್ಥಿಗಳು ಈ ದಿನ ಎಲ್ಲಿಲ್ಲದ ಕಾಳಜಿವಹಿಸಿ ಅಧ್ಯಯನ ಮಾಡುತ್ತೀರಿ
- ವ್ಯವಹಾರದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತದೆ
- ಕೋಪ ಮತ್ತು ಆತುರದ ನಿರ್ಧಾರ ಬೇಡ
- ಬೇರೆಯವರ ಮೇಲಿನ ಕೋಪದಿಂದ ಯಾವ ವ್ಯವಹಾರದ ಮಾತುಗಳನ್ನು ಆಡಬಾರದು
- ಪ್ರೇಮಿಗಳಿಗೆ ಶುಭವಿದೆ ಸದುಪಯೋಗ ಮಾಡಿಕೊಳ್ಳಿ
- ಕುಲದೇವತಾ ಪ್ರಾರ್ಥನೆ ಮಾಡಿ
ವೃಷಭ
- ಆಲಸ್ಯವನ್ನು ದೂರಮಾಡಿ ಉತ್ತಮವಾದ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ
- ಆಲಸ್ಯವೇ ರೋಗವಾಗಿ ಪರಿಣಮಿಸಬಹುದು
- ಪರಿಶ್ರಮ ಪಡುವವರಿಗೆ ಈ ದಿನ ಶುಭವಿದೆ
- ವ್ಯವಹಾರದಲ್ಲಿ ದೂರದೃಷ್ಟಿಯಿರಲಿ ಇಂದು ಅಲ್ಪ ಲಾಭ ಕಾಣಬಹುದು
- ಉತ್ತಮವಾದ ಆಹಾರ ಸೇವಿಸಬಹುದು
- ಮಕ್ಕಳು ಶಾಲೆಗೆ ಹೋಗಲು ನಿರ್ಲಕ್ಷಿಸಬಹುದು
- ಇಷ್ಟದೇವತಾ ಆರಾಧನೆ ಮಾಡಿ
ಮಿಥುನ
- ತುಂಬಾ ಪ್ರೌಢವಾಗಿ, ಬೌದ್ಧಿಕವಾಗಿ ಆಲೋಚನೆ ಮಾಡಿ
- ಎಲ್ಲಾ ವಿಚಾರದಲ್ಲೂ ತೀರ್ಮಾನ ತೆಗೆದುಕೊಳ್ಳೊ ಯೋಗ ಬರುತ್ತದೆ
- ಪಿತ್ರಾರ್ಜಿತ ಆಸ್ತಿಯ ಪಾಲು, ಲಾಭ ದೊರೆಯಬಹುದು
- ನಿಮ್ಮೆಲ್ಲಾ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳಲಿದೆ
- ವ್ಯಾವಹಾರಿಕವಾಗಿ ಧನಾತ್ಮಕ ಬದಲಾವಣೆ
- ಮನೆಯವರ, ಸ್ನೇಹಿತರ ಪ್ರೋತ್ಸಾಹದಿಂದ ಉತ್ಸಾಹಿಗಳಾಗುತ್ತೀರಿ
- ತಾಯಿಯವರ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿ ಅವರಿಗೆ ತೊಂದರೆಯಾಗುವ ಸಾಧ್ಯತೆ ಇದೆ
ಕಟಕ
- ತಿದ್ದಲು ಸಾಧ್ಯವಾಗದ ಸ್ನೇಹಿತರು ನಿಮ್ಮ ಸಂಪರ್ಕದಲ್ಲಿರಬಹುದು
- ಕುಟುಂಬದಲ್ಲಿ ವಿನಾಕಾರಣ ಆತಂಕಗಳು ಇರುತ್ತವೆ
- ನಿಮ್ಮ ನಡವಳಿಕೆಯಿಂದ ಪೊಲೀಸ್ ಸ್ಟೇಷನ್, ಕೋರ್ಟ್ ಗಳಿಗೆ ಹೋಗಬಹುದಾದ ದಿನ
- ಮಾತನಾಡಬೇಕಾದರೆ ಯೋಚಿಸಿ ಮಾತಾಡಿ ನಯ ವಿನಯದಿಂದ ವರ್ತಿಸಿ
- ಹಣ ಅಥವಾ ಯಾವುದೋ ನಿರೀಕ್ಷೆಯಿಂದ ದುರ್ಮಾಗವನ್ನು ಹುಡುಕಿಕೊಂಡು ಹೋಗುವುದು
- ಹಣಕ್ಕಿಂತ ಮರ್ಯಾದೆ ಮುಖ್ಯ ಎಂದು ಅರಿಯಬೇಕಾದ ದಿನ
- ವಿದ್ಯಾರ್ಥಿಗಳಿಗೆ ಕಳ್ಳತನದ ಆರೋಪ ಬರಬಹುದು
- ಗುರು ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ
ಸಿಂಹ
ಕುಟುಂಬದಲ್ಲಿ ಹಬ್ಬದ ವಾತಾವರಣವಿರುತ್ತದೆ
- ಪ್ರತಿಯೊಂದು ಕೆಲಸವೂ ಸಕಾಲಕ್ಕೆ ನಡೆದು ಮನಸ್ಸಿಗೆ ಸಮಾಧಾನವಿರುತ್ತದೆ
- ಕುಟುಂಬದಲ್ಲಿ ಅನ್ಯೋನ್ಯತೆ ತನ್ನಿಂದ ತಾನೇ ಬೆಳೆಯುತ್ತದೆ
- ಹೊಸ ಯೋಜನೆಗಳಿಗೆ ಮಾತುಕತೆ ನಡೆಯುತ್ತದೆ
- ವಿಹಾರಕ್ಕಾಗಿ ಹೊರಗೆ ಹೋಗುವ ಸಾಧ್ಯತೆಗಳಿವೆ
- ಪ್ರಾಣಿಗಳಿಂದ ಎಚ್ಚರಿಕೆಯಿಂದಿರಬೇಕು
- ಪುಬ್ಬಾ ನಕ್ಷತ್ರದವರಿಗೆ ಶನಿದೆಸೆ ನಡೆಯುತ್ತಿದೆ ಸ್ವಲ್ಪ ತೊಂದರೆ ಇದೆ ಎಚ್ಚರಿಕೆ
- ಶನೈಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ನೀವು ಯಾವುದೇ ರೀತಿಯ ತಪ್ಪು ಮಾಡಿರುವುದಿಲ್ಲ
- ಆದರೆ ನಿಮ್ಮ ಮಾತಿನ ಶೈಲಿ ನಿಮಗೆ ಅವಮಾನ ಮಾಡುತ್ತದೆ
- ವ್ಯಾಪಾರ, ವ್ಯವಹಾರದಲ್ಲಿ ಜಾಗರೂಕರಾಗಿರಿ
- ಖರೀದಿಸಿರುವ ಪದಾರ್ಥವನ್ನು ಅಲ್ಲೇ ಬಿಟ್ಟು ಬರುವ ಸಾಧ್ಯತೆಗಳಿರುತ್ತವೆ
- ವಾಹನಕ್ಕೆ ಹಾನಿಯಿದೆ ಎಚ್ಚರವಹಿಸಿ
- ವಿನಾಕಾರಣ ವಾದ-ವಿವಾದಕ್ಕೆ ಕಾರಣರಾಗುತ್ತೀರಿ
- ಬಿಡುವಿನ ಸಮಯದಲ್ಲಿ ಯಾವುದಾದರೂ ಉತ್ತಮ ಪುಸ್ತಕಗಳನ್ನು ಓದಿ
- ಬೇರೆಯವರ ವಿಚಾರ ಪ್ರಸ್ತಾಪ ಮಾಡಬೇಡಿ
- ಕುಲದೇವತೆಯನ್ನು ಆರಾಧನೆ ಮಾಡಿ
ತುಲಾ
- ನೀವು ಕೇಳಿರದ ಧಾರ್ಮಿಕ ಕ್ಷೇತ್ರದ ಮಾಹಿತಿ ತಿಳಿದುಕೊಂಡು ಆಶ್ವರ್ಯ ಚಕಿತರಾಗುತ್ತೀರಿ
- ಅಲ್ಲಿಗೆ ದರ್ಶನಕ್ಕಾಗಿ ಹೋಗಬೇಕೆಂಬ ತುಡಿತದಲ್ಲಿರುತ್ತೀರಿ, ಧನಾತ್ಮಕ ಚಿಂತನೆ
- ನೀವು ಮಾಡುವ ಕೆಲಸದಲ್ಲಿ ಅರ್ಧ ಮನಸ್ಸು ಅರ್ಧ ಆಲಸ್ಯವಿರುವಂತಹದ್ದು
- ವಿದ್ಯಾರ್ಥಿಗಳಿಗೆ ತಾವು ಮಾಡಿದ ತಪ್ಪಿನಿಂದ ಅವಮಾನವಾಗುವ ಸಾಧ್ಯತೆ
- ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿ ಶುಭವಾಗಲಿದೆ
- ಮನೆಯ ಅಲಂಕಾರ,ವಸ್ತು ಖರೀದಿಯ ವಿಚಾರದಲ್ಲಿ ವಾಗ್ವಾದ ನಡೆಯಬಹುದು
- ನಿಮ್ಮ ಗುರಿಯ ಬಗ್ಗೆ ಹೆಚ್ಚು ಗಮನಹರಿಸಿ
- ಕಾನೂನಿಗೆ ವಿರುದ್ಧವಾದಂತಹ ಯಾವುದೇ ಕೆಲಸದಲ್ಲಿ ಜಯ ಇರುವುದಿಲ್ಲ
- ಭಗವತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ನಾಗಾಲೋಟದಿಂದ ಓಡುತ್ತಿರುವ ಈ ಪ್ರಪಂಚದ ಜೊತೆಯಲ್ಲಿ ಬದುಕಲು ಸಾಧ್ಯವಾ ಎಂಬ ಪ್ರಶ್ನೆಯಿಂದ ಹತಾಶರಾಗಬೇಡಿ ಧೈರ್ಯವಾಗಿರಿ
- ವಿದ್ಯಾರ್ಥಿಗಳಿಗೆ ಅಧ್ಯಯನದ ವಿಚಾರದಿಂದ ಸ್ವಲ್ಪ ಗೊಂದಲ ಸರಿಪಡಿಸಿಕೊಳ್ಳಿ
- ಮಕ್ಕಳ ಶೈಕ್ಷಣಿಕ ಖರ್ಚು ಮನಸ್ಸಿಗೆ ಬೇಸರ ತರಬಹುದು ತಾಳ್ಮೆಯಿರಲಿ
- ಬೇರೆಯವರ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಬೇಡಿ
- ನಿಮ್ಮ ಅನುಮಾನಾಸ್ಪದ ನಡವಳಿಕೆಯಿಂದ ಪರಿಚಿತಸ್ಥರಿಗೆ ನಿಮ್ಮ ಮೇಲೆ ಕೋಪ ಬರಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ಧನಸ್ಸು
- ಕುಟುಂಬದವರು, ನಿಮ್ಮ ಕೈಕೆಳಗೆ ಕೆಲಸ ಮಾಡುವವರು, ಸಹೋದ್ಯೋಗಿಗಳು ನಿಮ್ಮ ಮೇಲೆಯೇ ಇಂದು ಅವಲಂಬಿತರಾಗಿರುತ್ತಾರೆ
- ನೀವು ಆರಾಮವಾಗಿ ಕಾಲಹರಣ ಮಾಡುತ್ತೀರಿ
- ವಿದೇಶ ಪ್ರಯಾಣದ ಸೂಚನೆ ಸಿಗಲಿದೆ
- ಸವಾಲುಗಳನ್ನು ಎದುರಿಸಲು ಸಮರ್ಥರಾಗಿರುತ್ತೀರಿ
- ನಿಮ್ಮ ಕೆಲಸಗಳನ್ನು ವ್ಯವಸ್ಥಿತವಾಗಿ ನಿಭಾಯಿಸಲು ನೀವು ಶಕ್ತರಾಗಿರುತ್ತೀರಿ
- ಬೇರೆಯವರ ಮಾತಿಗೆ ಶಾಪಕ್ಕೆ ಗುರಿಯಾಗಬೇಕಾಗುತ್ತೆ
- ಕರ್ತವ್ಯ ಪ್ರಜ್ಞೆ ಎಲ್ಲವನ್ನೂ ದೂರ ಮಾಡುವಂತದ್ದು
- ಜಗನ್ಮಾತೆಯನ್ನು ಆರಾಧನೆ ಮಾಡಿ
ಮಕರ
- ವಿದ್ಯಾರ್ಥಿಗಳಿಗೆ ಹೊರ ಪ್ರಪಂಚದ ವಿಚಾರಗಳು, ವಸ್ತುಗಳು ಆಕರ್ಷಿಸುವುದರಿಂದ ತೊಂದರೆಗೆ ಈಡಾಗುತ್ತೀರಿ
- ಓದು ಬರಹಕ್ಕೆ ಈ ದಿನ ವಿಶ್ರಾಂತಿ ಸಿಗಲಿದೆ
- ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
- ಸರ್ಕಾರದ ಅನುದಾನಗಳು ಸಹಾಯಗಳು ಅಡ್ಡಿಯಾಗುವ ಸಾಧ್ಯತೆ ಇದೆ
- ಸಮೂಹ ಸಹಕಾರದಿಂದ ಮಾತ್ರ ನಿಮ್ಮ ಪರಿಶ್ರಮಕ್ಕೆ ಫಲವಿರುತ್ತದೆ
- ಅನುಪಯುಕ್ತ ಮಾತು ಸಭೆ, ಯಾವುದು ಪ್ರಯೋಜನಕ್ಕೆ ಬರುವುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ಕುಂಭ
- ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವವರಿಗೆ ನೌಕರಿಯ ಭೀತಿ ಕಾಡಬಹುದು
- ಭವಿಷ್ಯದಲ್ಲಿ ಜೀವನದ ಆಲೋಚನೆ ಇರದವರು ಇಂದು ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಿ
- ಹಣದ ಸಮಸ್ಯೆ ಏನು ಅನ್ನುವುದು ಗೊತ್ತಿಲ್ಲದೆ ಮುಂದೆ ಕಷ್ಟವಾಗಬಹುದು
- ಹಲವು ಕಾರ್ಯಗಳ ಪ್ರಾರಂಭ ಮಾಡುತ್ತೀರಿ ಮುಂಗಡ ಹಣವನ್ನು ಕೊಡುತ್ತೀರಿ
- ಇದನ್ನ ಮುಂದುವರೆಸಿಕೊಂಡು ಹೋಗಲು ಕಷ್ಟ ಆಗಬಹುದು ಜಾಗ್ರತೆ
- ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿ, ಶ್ರದ್ಧೆ ಇರುವುದಿಲ್ಲ
- ನಿಮ್ಮ ತಪ್ಪಿನ ಅರಿವು ಈ ದಿನ ನಿಮಗೆ ಗೊತ್ತೇ ಆಗುವುದಿಲ್ಲ ಮುಂದೆ ಪಶ್ಚಾತ್ತಾಪ ಪಡುತ್ತೀರಿ
- ಕುಲದೇವತಾ ಸ್ಮರಣೆ ಮಾಡಿ
ಮೀನ
- ರಾಜಕೀಯದಲ್ಲಿ ಪಳಗಿರುವವರಿಗೆ ಅಪಮಾನವಾಗುವ ಸಾಧ್ಯತೆ
- ಹೊಸಬರ ಪರ ಮಾತನಾಡಲು ಹೋಗಿ ಮೇಲಿನವರ ಅಪಕೃಪೆಗೆ ಪಾತ್ರರಾಗಬಹುದು
- ಭೂ ಸಂಬಂಧವಾದ ವ್ಯವಹಾರ ಕೈಗೂಡುವುದಿಲ್ಲ ಜಗಳ ಸಾಧ್ಯತೆ ಇದೆ
- ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಲಭ್ಯವಾಗಬಹುದು
- ಮಕ್ಕಳ ಭವಿಷ್ಯ ಉಜ್ವಲವಾಗುವ ಹಲವಾರು ಸೂಚನೆಗಳಿವೆ
- ಮಾನಸಿಕ ಸಮಾಧಾನವಿರಲಿ
- ಜಗಳ ಮತ್ತು ಗಲಭೆಗಳಲ್ಲಿ ಭಾಗಿಯಾಗಬೇಡಿ
- ತಿರುಪತಿ ಶ್ರೀನಿವಾಸನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post