ಕನ್ನಡ ಸಿರಿಯಲ್ನ ಸ್ಟಾರ್ ನಟಿ ವೈಷ್ಣವಿ ಗೌಡ ಮತ್ತ ನಟ ವಿದ್ಯಾಭರಣ ನಡುವಿನ ಮದುವೆ ಮುರಿದು ಬಿದ್ದ ವಿಚಾರದಲ್ಲಿ ಉಂಟಾಗಿರುವ ಗೊಂದಲ ಇನ್ನೂ ಮುಂದುವರಿದಿದೆ. ಇಂದು ಬೆಳಗ್ಗೆ ವೈಷ್ಣವಿ ಪೋಷಕರು ಸುದ್ದಿಗೋಷ್ಟಿ ನಡೆಸಿ ಒಂದಷ್ಟು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.
ಈ ವೇಳೆ ವೈಷ್ಣವಿ ತಾಯಿ ಬಾನು ರವಿಕುಮಾರ್ ಮಾತನಾಡಿ.. ‘ಚಾಕ್ಲೇಟ್ ಬಾಯ್’ ಎಂಬ ಮೂವಿ ಸ್ಟಾರ್ಟ್ ಆಗಿತ್ತು. ದೊಡ್ಡ ಗಣೇಶನ ದೇವಸ್ಥಾನದಲ್ಲಿ ಪೂಜೆ ನಡೆದಿತ್ತು. ಆವಾಗ 9 ದಿನಗಳ ಕಾಲ ಶೂಟಿಂಗ್ ನಡೆದಿತ್ತು. ಶೂಟಿಂಗ್ ಕೆಲಸ ಯಾವುದೋ ಕಾರಣದಿಂದ ನಿಂತು ಹೋಯಿತು. ತದನಂತರ ವೈಷ್ಣವಿ ಬಿಗ್ಬಾಸ್ಗೆ ಹೊದಳು. ಅವರ ಮನೇಲಿಯಲ್ಲೂ ಕೂಡ ವೈಷ್ಣವಿಗೆ ಹಾರೈಸಿ ವಿಶ್ ಮಾಡಿದ್ದರು.
ನಂತರ ಒಂದು ದಿನ ನಿಮ್ಮ ಮಗಳು ನಮಗೆ ಇಷ್ಟ ಎಂದು ಹೇಳಿದರು. ನಂತರ ನಾವು ಎಲ್ಲಾ ವಿಚಾರಿಸಿಕೊಂಡು ಮುಂದಿನ ನಿರ್ಧಾರಕ್ಕೆ ಬಂದ್ವಿ. ಅದರಂತೆ ನವೆಂಬರ್ 11 ರಂದು ಹೆಣ್ಣು ನೋಡುವ ಶಾಸ್ತ್ರ ಮಾಡಿದ್ವಿ. ಕೇವಲ ಹೆಣ್ಣು ನೋಡುವ ಶಾಸ್ತ್ರ ಎಂದು ನಾವು ಯಾರಿಗೂ ಕರೆದಿಲ್ಲ. ಮುಂದಿನ ಭಾನುವಾರ ನಾವು ಅವರ ಮನೆಗೆ ಹೋಗಬೇಕಾಗಿತ್ತು. ಆದರೆ ಅಷ್ಟೊತ್ತಿಗೆ ಇಷ್ಟೆಲ್ಲಾ ಆಗೊಯ್ತು.
ಫೋಟೋಗಳು ಕೆಲವೊಂದು ಕಡೆ ಹರಿದಾಡಿದ ಮೇಲೆ ನಮ್ಮಗೆ ಯಾವುದೋ ಒಂದು ಹುಡುಗಿ ಕಾಲ್ ಮಾಡಿದ್ಲು. ಆವಾಗ ನಿಮ್ಮ ಹತ್ರ ಮಾತನಾಡ್ಬೇಕು ಅಂತಾ ಹೇಳಿದ್ರು. ಕಾನ್ಫ್ರೆನ್ಸ್ ಕಾಲ್ ಹಾಕಿ ಮಾತನಾಡಿದ್ರು. ನಿಮ್ಮತ್ರ ಏನಾದ್ರೂ ಡಾಕ್ಯುಮೆಂಟ್ ಇದ್ರೆ ಕೊಡಿ ಅಂದೆ. ಅವರು ಇನ್ನುವರೆಗೂ ಯಾರು ಬಂದಿಲ್ಲ. ಈ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ. ಸದ್ಯ ಅವಳ ಮೈಂಡ್ ಅಲ್ಲಿ ಇಲ್ಲಿಗೆ ನಿಲ್ಲಿಸೋಣ ಅಂತಿದೆ ಎಂದರು.
ಮಾತ್ರವಲ್ಲ ವಿದ್ಯಾಭರಣ್ ತಾಯಿ ಕೂಡ ನಮಗೆ ವೈಸ್ ನೋಟ್ ಕಳುಹಿಸಿದ್ದಾರೆ. ಇದರ ಹಿಂದೆ ಯಾರೋದು ಕುತಂತ್ರ ಇದೆ. ಸ್ವಲ್ಪ ಕಾದು ನೋಡಿ, ಆತುರ ಪಡಬೇಡಿ ಎಂದು ಮೆಸೇಜ್ ಮಾಡಿದ್ದಾರೆ. ನಾವು ಕಾಯುತ್ತಿದ್ದೀವಿ ಏನ್ ಆಗುತ್ತೆ ಎಂದು. ಈಗಾಗಲೇ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ತಿಳಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುವುದು ಅನ್ನೋದ್ರ ಬಗ್ಗೆ ನಾವು ಗೊಂದಲದಲ್ಲಿ ಇದ್ದೇವೆ. ಮುಂದೆ ಏನು ಆಗುತ್ತೆ ಎಂದು ನಾವು ಕಾದು ನೋಡುತ್ತೇವೆ ಎಂದು ಬಾನು ರವಿಕುಮಾರ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post