ಹಿಂದಿ ಸಿನಿಮಾ ಹಾಗೂ ಕಿರುತೆರೆ ಲೋಕದ ಹಿರಿಯ ನಟ ವಿಕ್ರಂ ಗೋಖಲೆ ನಿಧನರಾಗಿದ್ದಾರೆ. ಅವರಿಗೆ 80 ವರ್ಷಗಳಾಗಿತ್ತು. ಪುಣೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಕ್ರಂ ಗೋಖಲೆ ಅವರು ‘ಹಮ್ ದಿಲ್ ದೇ ಚುಕೆ’ ಸಿನಿಮಾದ ಮೂಲಕ ಜನಪ್ರಿಯತೆಗಳಿಸಿದ್ದರು.
ಪುಣೆಯಲ್ಲಿರುವ ದೀನನಾಥ್ ಮಂಗೇಷ್ಕರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲವು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇಂದು ಸಂಜೆ ವಿಕ್ರಂ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.
ವಿಕ್ರಂ ಬಾಲಿವುಡ್ ಬಿಗ್ ಬಿ ಅಮಿತಾಬ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು. 2010ರಲ್ಲಿ ನ್ಯಾಷನಲ್ ಅವಾರ್ಡ್ ಕೂಡ ಸಿಕ್ಕಿತ್ತು. ಮರಾಠಿ ಭಾಷೆಯ ಅನುಮತಿ ಚಿತ್ರಕ್ಕೆ ಇವರಿಗೆ ನ್ಯಾಷನಲ್ ಅವಾರ್ಡ್ ಸಿಕ್ಕಿತ್ತು. ಇನ್ನು ಘರ್ ಆಜ್ ಪರದೇಶಿ, ಅಲ್ಪವಿರಾಮ, ಜಾನ್ ನಾ ದಿಲ್ ಸೇ ದೂರ್, ಸಂಜೀವಿನಿ, ಇಂದ್ರಧನುಷ್ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post