ನನ್ನ ಮಗಳು ಏನು ನಿರ್ಧಾರ ತೆಗೆದುಕೊಳ್ಳುತ್ತಾಳೋ ಅದೇ ನಮ್ಮ ಅಂತಿಮ ನಿರ್ಧಾರ ಎಂದು ವೈಷ್ಣವಿ ಗೌಡ ಪೋಷಕರು ತಿಳಿಸಿದ್ದಾರೆ.
ವಿದ್ಯಾಭರಣ ಜೊತೆ ವೈಷ್ಣವಿ ಮದುವೆ ಗೊಂದಲ ವಿಚಾರಕ್ಕೆ ಸಂಬಂಧಿಸಿ ಇಂದು ವೈಷ್ಣವಿ ಪೋಷಕರು ಬೆಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾಹಿತಿ ನೀಡಿರುವ ವೈಷ್ಣವಿ ಅಪ್ಪ-ಅಮ್ಮಾ.. ವಿದ್ಯಾಭರಣ ಜೊತೆ ಸಂಬಂಧ ಮುಂದುವರಿಸಬೇಕಾ? ಬೇಡವಾ ಅನ್ನೋದನ್ನ ನಮ್ಮ ಮಗಳು ನಿರ್ಧಾರ ಮಾಡುತ್ತಾಳೆ.
ಅವಳು ನಮ್ಮೆಲ್ಲರಿಗಿಂತ ಬುದ್ಧಿವಂತಳಿದ್ದಾಳೆ. ಅವಳ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ಒಂದು ವೇಳೆ ಮದುವೆ ಆಗುತ್ತೀನಿ ಅಂದರೂ ನಾವು ಓಕೆ ಎನ್ನುತ್ತೇವೆ. ತುಂಬಾ ಯೋಚನೆ ಮಾಡಿ ನಿರ್ಧಾರ ಮಾಡುವ ಹುಡುಗಿ. ಹೀಗಾಗಿ ಆಕೆ ಯಾವುದೇ ತಪ್ಪುಗಳನ್ನ ಮಾಡಲ್ಲ. ಈ ವಿಚಾರದಲ್ಲಿ ನಾವು ಅವಳ ನಿರ್ಧಾರಕ್ಕೆ ಬಿಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ‘ಹೆಣ್ಣು ನೋಡುವ ಶಾಸ್ತ್ರ ಮುಗಿದ್ಮೇಲೆ ಏನೆಲ್ಲಾ ಆಯ್ತು ಅಂದರೆ..’ ವೈಷ್ಣವಿ ತಾಯಿ ಮಾಹಿತಿ
ವಿದ್ಯಾಭರಣ್ ತಾಯಿ ಕೂಡ ನಮಗೆ ವೈಸ್ ನೋಟ್ ಕಳುಹಿಸಿದ್ದಾರೆ. ಇದರ ಹಿಂದೆ ಯಾರೋದ್ದೋ ಕುತಂತ್ರ ಇದೆ. ಸ್ವಲ್ಪ ಕಾದು ನೋಡಿ, ಆತುರ ಪಡಬೇಡಿ ಎಂದು ಮೆಸೇಜ್ ಮಾಡಿದ್ದಾರೆ. ನಾವು ಕಾಯುತ್ತಿದ್ದೀವಿ ಏನ್ ಆಗುತ್ತೆ ಎಂದು. ಈಗಾಗಲೇ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುವುದು ಅನ್ನೋದ್ರ ಬಗ್ಗೆ ನಾವು ಗೊಂದಲದಲ್ಲಿದ್ದೇವೆ. ಮುಂದೆ ಏನು ಆಗುತ್ತೆ ಎಂದು ಕಾದು ನೋಡುತ್ತೇವೆ ಅಂತಾ ವೈಷ್ಣವಿ ತಾಯಿ ಬಾನು ರವಿಕುಮಾರ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post