ಬಾಗಲಕೋಟೆ: ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿದ್ದ 187 ಕಾಯಿನ್ಗಳನ್ನ ನಗರದ HSK ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೊರತೆಗೆದಿದ್ದಾರೆ.
ರಾಯಚೂರಿನ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದ ನಿವಾಸಿ ದ್ಯಾಮಣ್ಣ ಹರಿಜನ (58) ನಾಣ್ಯಗಳನ್ನ ನುಂಗಿದ್ದ ವ್ಯಕ್ತಿ. ಅಧಿಕವಾಗಿ ಮದ್ಯ ಸೇವನೆ ಮಾಡ್ತಿದ್ದ ದ್ಯಾಮಣ್ಣ ಮಾನಸಿಕ ಕಾಯಿಲೆಯಿಂದ ಬಳತ್ತಿದ್ದನು. ಹೀಗಾಗಿ ಕಳೆದ ನವೆಂಬರ್ 22 ರಂದು ಬಾಗಲಕೋಟೆಯ HSK ಆಸ್ಪತ್ರೆಗೆ ಕುಟುಂಬಸ್ಥರು ದಾಖಲು ಮಾಡಿದ್ದರು.
ವೈದ್ಯರು ದ್ಯಾಮಣ್ಣನನ್ನ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಎಂಡೋಸ್ಕೋಪ್ ಮಾಡಿದ್ದಾರೆ. ಈ ವೇಳೆ ಹೊಟ್ಟೆಯಲ್ಲಿ ಕಾಯಿನ್ಗಳು ಇರುವುದು ಪತ್ತೆಯಾಗಿದೆ. ವೈದ್ಯರಾದ ಡಾ.ಈಶ್ವರ ಕಲಬುರಗಿ, ಡಾ.ಪ್ರಕಾಶ್ ಕಟ್ಟಿಮನಿ, ಅರವಳಿಕೆ ತಜ್ಞರಸದ ಡಾ.ಅರ್ಚನಾ, ಡಾ.ರೂಪಾ ಹುಲಕುಂದೆಯವರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಕಾಯಿನ್ಗಳನ್ನ ಹೊರ ತೆಗೆದಿದ್ದಾರೆ.
462 ರೂಪಾಯಿ ನುಂಗಿದ್ದ ಭೂಪ
ಬಳಿಕ ಕಾಯಿನ್ಳನ್ನ ಹೊರತೆಗೆದು ಕೌಂಟ್ ಮಾಡಿದಾಗ 462 ರೂಪಾಯಿಗಳನ್ನ ದ್ಯಾಮಣ್ಣ ನುಂಗಿದ್ದನು. ಇದರಲ್ಲಿ 5 ರೂ.ಯ 56 ನಾಣ್ಯಗಳು, 2 ರೂ.ಯ 51 ನಾಣ್ಯಗಳು ಹಾಗೂ 1 ರೂ.ಯ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನ ದ್ಯಾಮಣ್ಣನ ಹೊಟ್ಟೆಯಲ್ಲಿದ್ದವು. ಇನ್ನು ಈತನು ಯಾವ ಕಾರಣಕ್ಕೆ ಕಾಯಿನ್ಗಳನ್ನ ನುಂಗಿದ್ದಾನೆ ಎಂಬುದು ತಿಳಿದು ಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post