ಮತದಾರರ ಮಾಹಿತಿಗೆ ಕನ್ನ ಹಾಕಿರುವ ಚಿಲುಮೆ ಕರ್ಮಕಾಂಡದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಚಿಲುಮೆಯ ಚೀಟಿಂಗ್ಗೆ ಸಾಥ್ ನೀಡಿದ ನಾಲ್ವರು ಕಂದಾಯ ಅಧಿಕಾರಿಗಳನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಇನ್ನು ಬಿಬಿಎಂಪಿ ಮತ್ತು ಚಿಲುಮೆ ಸಂಸ್ಥೆಗೆ ಕೊಂಡಿಯಾಗಿದ್ದ ಮಧ್ಯವರ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು, ಈ ದೇಶದ ಜನರಿಗಿರುವ ಅತ್ಯಮೂಲ್ಯವಾದ ಹಕ್ಕೆಂದರೇ ಅದು ಮತದಾನದ ಹಕ್ಕು. ಆದ್ರೆ, ಮತದಾರರ ಹಕ್ಕಿಗೇ ಚಿಲುಮೆ ಎಂಬ ಚೀಟಿಂಗ್ ಸಂಸ್ಥೆ ಕನ್ನ ಹಾಕಿ, ಡೆಮಾಕ್ರಸಿಯನ್ನೇ ರೋಡಿಗೆ ತಂದು ನಿಲ್ಲಿಸಿದೆ.
ಅಕ್ರಮಕ್ಕೆ ಸಾಥ್ ನೀಡಿದ್ದ ನಾಲ್ವರು ಆರ್ಓಗಳ ಬಂಧನ
ಮತದಾರರ ಮಾಹಿತಿಗೆ ಕನ್ನ ಹಾಕಿದ ಚಿಲುಮೆಯ ಚೀಟಿಂಗ್ ಕೇಸ್ನ ತನಿಖೆಗೆ ಚುರುಕುಗೊಂಡಿದೆ. ಈ ವೋಟರ್ ಐಡಿ ಡೀಲಿಂಗ್ನಲ್ಲಿ ಬೃಹತ್ ಅಧಿಕಾರಿಗಳೂ ಕಳ್ಳಾಟವನ್ನು ಆಡಿದ್ದಾರೆ. ಚಿಲುಮೆಯ ಚಮತ್ಕಾರವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿರುವ ಹಲಸೂರು ಗೇಟ್ ಪೊಲೀಸರು, ನಾಲ್ವರು ಕಂದಾಯ ಅಧಿಕಾರಿಗಳನ್ನು ಲಾಕ್ ಮಾಡಿದ್ದಾರೆ.
ಚಿಲುಮೆ ಸಂಸ್ಥೆ ಪರವಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಬಿಬಿಎಂಪಿ ಕಂದಾಯ ವಿಭಾಗದ ನಾಲ್ವರು ಆರ್‌ಒಗಳನ್ನು ಬಂಧಿಸಲಾಗಿದೆ.
ನಾಲ್ವರು ಆರ್ಓ ಅರೆಸ್ಟ್..
ಆರ್‌ಒಗಳು ಖಾಸಗಿ ವ್ಯಕ್ತಿಗಳಿಗೆ ಬಿಎಲ್‌ಒ ಗುರುತಿನ ಚೀಟಿ ನೀಡಲು ಅವಕಾಶವಿಲ್ಲ. ಆದರೂ ಅಕ್ರಮವಾಗಿ ಚಿಲುಮೆ ಸಂಸ್ಥೆ ಪರವಾಗಿ ಬರುವ ವ್ಯಕ್ತಿಗಳಿಗೆ ಆರ್‌ಒಗಳೇ ಕಾರ್ಡ್‌ಗಳನ್ನು ನೀಡಿದ್ದಾರೆ. ಆರ್ಓಗಳು ಬಿಎಲ್ಓ ಕಾರ್ಡ್‌ಗಳನ್ನು ಕೊಟ್ಟಿರುವುದೇ ಆಕ್ರಮ. ಈ ಆರೋಪ ಸಾಬೀತಾದ ಹಿನ್ನೆಲೆ, ಹಲಸೂರ್ ಗೇಟ್ ಪೊಲೀಸರು, ಮಹದೇವಪುರ ಕಂದಾಯ ಅಧಿಕಾರಿ ಕೆ.ಚಂದ್ರಶೇಖರ್, ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್ ಅಹ್ಮದ್, ಚಿಕ್ಕಪೇಟೆಯ ಉಪ ಕಂದಾಯ ಅಧಿಕಾರಿ ವಿ.ಬಿ. ಭೀಮಾಶಂಕರ್, ಆರ್.ಆರ್. ಕ್ಷೇತ್ರದ ಅಧಿಕಾರಿ ಮಹೇಶ್ ಎಂಬುವವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇಷ್ಟಕ್ಕೆ ಸುಮ್ಮನಗಾದೇ ಪ್ರಕರಣದಲ್ಲಿ ಮತ್ತೊಂದು ಬೇಟೆಯನ್ನೂ ಪೊಲೀಸರು ಮಾಡಿದ್ದಾರೆ.
ಚಿಲುಮೆ ಮಧ್ಯವರ್ತಿ ಬಂಧನ..
ಇನ್ನು, ಚಿಲುಮೆ ಸಂಸ್ಥೆಯ ಸಿಬ್ಬಂದಿಯನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಶಿವಕುಮಾರ್, ಬಿಬಿಎಂಪಿ ಹಾಗೂ ಚಿಲುಮೆ ಸಂಸ್ಥೆ ನಡುವೆ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದ್ದ. ಬೂತ್ ಮಟ್ಟದ ಅಧಿಕಾರಿ ಗುರುತಿನ ಚೀಟಿಗಳನ್ನು ಬಿಬಿಎಂಪಿ ಕಡೆಯಿಂದ ಸಂಸ್ಥೆ ನೌಕರರು ಹಾಗೂ ಸಮೀಕ್ಷೆಗೆ ಬಳಸಿಕೊಳ್ಳುತ್ತಿದ್ದವರಿಗೆ ಈತ ಕೊಡಿಸುತ್ತಿದ್ದನಂತೆ. ಜೊತೆಗೆ ಸಂಸ್ಥೆ ಪರವಾಗಿ ಬಿಬಿಎಂಪಿ ಅಧಿಕಾರಿಗಳಿಂದ ಮತಪಟ್ಟಿ ಪಡೆಯಲು ಹಾಗೂ ಸಮೀಕ್ಷೆಗೆ ಸಹಿ ಪಡೆಯುತ್ತಿದ್ದ ಎಂದು ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ.
ಕಿಂಗ್ಪಿನ್ ರವಿಕುಮಾರ್ಗೆ ಮತದಾರರ ಪಟ್ಟಿ ಸಿಕ್ಕಿದ್ದೇಗೆ?
ಚಿಲುಮೆ ರಹಸ್ಯ ಬೆನ್ನತ್ತಿದ ಹಲಸೂರು ಗೇಟ್ ಪೊಲೀಸರು
ಚಿಲುಮೆ ಸಂಸ್ಥೆಯ ವೋಟರ್ ಐಡಿ ಅಕ್ರಮದಲ್ಲಿ ದಿನಕ್ಕೊಂದು ರಹಸ್ಯ ವಿಷಯಗಳು ಹೊರಗೆ ಬರುತ್ತಿವೆ. ಪ್ರಕರಣದ ಕಿಂಗ್ಪಿನ್ ರವಿಕುಮಾರ್ ಬಳಿ, ಬೆಂಗಳೂರಿನ ಒಂದು ವಿಧಾನಸಭಾ ಕ್ಷೇತ್ರದ ಸಂಪೂರ್ಣ ಮತದಾರರ ಪಟ್ಟಿಯೇ ಇದೆ. ಹಾಗೆ ನೋಡಿದ್ರೆ, ಮತದಾರರ ಪಟ್ಟಿ ಚುನಾವಣೆಗೆ ನಿಂತಿರುವ ಅಭ್ಯರ್ಥಿ ಹಾಗೂ ಬಿಬಿಎಂಪಿ ಹತ್ತಿರ ಮಾತ್ರ ಇರಬೇಕು. ಹಾಗೂ ಯಾವುದೇ ಖಾಸಗಿ ವ್ಯಕ್ತಿಗಳ ಹತ್ತಿರ ಮತದಾರರ ಪಟ್ಟಿ ಇರುವಂತಿಲ್ಲ.. ಇಷ್ಟೆಲ್ಲ ನಿಯಮಗಳಿದ್ದರೂ, ಚಿಲುಮೆ ಸಂಸ್ಥೆ ಕೈಗೆ ಮತದಾರರ ಪಟ್ಟಿ ಸಿಕ್ಕಿದ್ದೇಗೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದ್ದು, ಈ ಬಗ್ಗೆಯೂ ಪೊಲೀಸರು ಕಿಂಗ್ಪಿನ್ ರವಿಕುಮಾರ್ ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟಾರೆ.. ಚಿಲುಮೆ ಸಂಸ್ಥೆಯ ಕಳ್ಳಾಟದ ಮೂಲವನ್ನು ಕೆದಕುತ್ತಾ ಹೋದಷ್ಟು, ಹೊಸಹೊಸ ಆಘಾತಕಾರಿ ಅಂಶಗಳು ಬಯಲಿಗೆ ಬರುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]tlive.com
Discussion about this post