ಹರಿಪ್ರಿಯಾ, ಸ್ಯಾಂಡಲ್ವುಡ್ನ ಮಾದಕ ತಾರೆಯರ ಲಿಸ್ಟ್ನಲ್ಲಿರೋ ನಾಯಕಿ. ಹರಿಪ್ರಿಯಾ ಸಿನಿಮಾಗಳು ಅಂದ್ರೆ ಒಂದು, ಕಥೆಯಲ್ಲಿ ಸ್ಟ್ರೆಂಥ್ ಇರುತ್ತೆ, ಮತ್ತೊಂದು ಪಾತ್ರಕ್ಕೆ ಪ್ರಾಮುಖ್ಯತೆ ಇರುತ್ತೆ. ಹೀಗಾಗಿ ಹರಿಪ್ರಿಯಾ, ಮಾಡೋ ಸಿನಿಮಾಗಳಲ್ಲಿ ನೇಮು ಫೇಮು ಎರಡನ್ನೂ ಸಂಪಾದಿಸುತ್ತಾರೆ.
ಸೌತ್ ಚಿತ್ರರಂಗದ ಈ ಬೋಲ್ಡ್ ಬ್ಯೂಟಿ, ನಟಿ ಹರಿಪ್ರಿಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಕೊರೊನಾ ಲಾಕ್ಡೌನ್ ಶುರುವಾದಾಗಿನಿಂದ ಈ ‘ನೀರ್ ದೋಸೆ’ ಚೆಲುವೆ ದಿನಕ್ಕೊಂದು ಪೋಸ್ಟ್ ಹಾಕೋದನ್ನ ಅಭ್ಯಾಸ ಮಾಡ್ಕೊಂಡಿದ್ದಾರೆ. ಈಗ ಹರಿಪ್ರಿಯಾ ಮದುವೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಯೆಸ್, ನಟಿ ಹರಿಪ್ರಿಯಾ ಮದುವೆ ಆಗುತ್ತಿರೋದು ಬೇರೆ ಯಾರನ್ನು ಅಲ್ಲ, ಸ್ಯಾಂಡಲ್ವುಡ್ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಅವರೊಂದಿಗೆ. ಹಲವು ದಿನಗಳಿಂದ ಈ ಇಬ್ಬರು ಪ್ರೀತಿಯಲ್ಲಿದ್ದಾರೆ. ಒಟ್ಟಿಗೆ ಜಿಮ್, ಡ್ಯಾನ್ಸ್ ಹೀಗೆ ಹಲವು ಕಡೆ ಕಾಣಿಸಿಕೊಂಡಿದ್ದರು.
ಇವರು ಈಗ ಹಸಮಣೆ ಏರಲು ಸಜ್ಜಾಗಿದ್ದಾರೆ ಎಂದು ಚಿತ್ರರಂಗದ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಹರಿಪ್ರಿಯಾ ನೀನಾಸಂ ಸತೀಶ್ ಜತೆಗೆ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಫ್ಯಾನ್ಸ್ ಎದೆಯಲ್ಲಿ ಕಿಚ್ಚು ಹಚ್ಚಿದ್ದರು. ಹಾಗೆಯೇ ವಸಿಷ್ಠ ಸಿಂಹ, ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ ಕೊತ್ವಾಲ್ ರಾಮಚಂದ್ರ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ವಿಶೇಷ ಎಂದರೇ, ಹರಿಪ್ರಿಯಾ ಇತ್ತೀಚೆಗೆ ಮೂಗು ಚುಚ್ಚಿಸಿಕೊಂಡಿರೋ ವಿಡಿಯೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ಬಳಿಕ ಅವರಿಗೆ ವ್ಯಕ್ತಿಯೊಬ್ಬರು ಸಮಾಧಾನ ಮಾಡೋದು ಕಂಡು ಬಂದಿದೆ. ಹರಿಪ್ರಿಯಾ ಕಣ್ಣೀರು ಒರೆಸುವ ವ್ಯಕ್ತಿ ವಸಿಷ್ಠ ಸಿಂಹ ಎಂದು ಹೇಳಲಾಗುತ್ತಿದ್ದು, ವ್ಯಕ್ತಿಯ ಕೈಯಲ್ಲಿರೋ ಬ್ರಾಸ್ ಲೈಟ್ ಕೂಡ ಇದು ಸತ್ಯ ಅಂತ ಹೇಳ್ತಿದೆ. ಇನ್ನು, ಕೆಲ ದಿನಗಳ ಹಿಂದಷ್ಟೇ ಹರಿಪ್ರಿಯಾ ಜೊತೆಗಿರೋ ವಿಡಿಯೋ ಪೋಸ್ಟ್ ಮಾಡಿದ್ದ ವಸಿಷ್ಠ ಅವರು, ಹರಿಪ್ರಿಯಾ ನಿಮಗೆ ಎಲ್ಲದರಲ್ಲೂ ಅತ್ಯುತ್ತಮವಾದುದನ್ನೇ ಬಯಸುತ್ತೇನೆ ಪಾಟ್ರ್ನರ್, ನಿಮಗೆ ಹೆಚ್ಚಿನ ಸಂತೋಷ ಮತ್ತು ಪ್ರೀತಿ ದೊರೆಯಲಿ. ನೀನು ನಿನಾಗಿರೋದಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದರು.
ಇನ್ನು, ಸದ್ಯ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದು, ತೆಲುಗಿನ ಎವರು ಸಿನಿಮಾ ರಿಮೇಕ್ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಹರಿಪ್ರಿಯಾಗಾಗಿಯೇ ವಸಿಷ್ಠ ಸಿಂಹ್, ಆರ್ಆರ್ ನಗರಕ್ಕೂ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. ತಾಯಿ ಮತ್ತು ಸಹೋದರ ಜೊತೆ ಆರ್ ಆರ್ ನಗರದಲ್ಲಿ ಹರಿಪ್ರಿಯಾ ವಾಸಿಸುತ್ತಿದ್ದಾರೆ. ವರ್ಷಾಂತ್ಯಕ್ಕೆ ಇಬ್ಬರ ನಿಶ್ಚಿತಾರ್ಥ ನಡೆಯಲಿದೆಯಂತೆ. ಇದಕ್ಕಾಗಿ ಈಗಾಗಲೇ ಜೋಡಿ ಶಾಪಿಂಗ್ ಕೂಡ ಮುಗಿಸಿದೆಯಂತೆ. ಆದರೆ ಈ ಕುರಿತಂತೆ ಇದುವರೆಗೂ ವಿಶಿಷ್ಠ ಸಿಂಹ, ಹರಿಪ್ರಿಯಾ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ನೀಡಿಲ್ಲ.
View this post on Instagram
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post