ಯಶಸ್ವಿ ಪ್ರದರ್ಶನ ಶುರು ಮಾಡಿದ ರೇಮೊ
ಇಶಾನ್ , ಆಶಿಕಾ ರಂಗನಾಥ್ ನಟನೆಯ ಪವನ್ ಒಡೆಯರ್ ನಿರ್ದೇಶನದ ರೇಮೊ ಸಿನಿಮಾಕ್ಕೆ ಪ್ರೇಕ್ಷಕರ ಉತ್ತರ ಪ್ರತಿಕ್ರಿಯೆ ಸಿಕ್ತಿದೆ. ಸಿ.ಆರ್.ಮನೋಹರ್ ನಿರ್ಮಾಣದ ಈ ಅದ್ಧೂರಿ ರೇಮೊ ಚಿತ್ರ ಕಳೆದ ದಿನ ರಾಜ್ಯಾದ್ಯಂತ ತೆರೆಕಂಡಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರ್ದೇಶಕ ಪವನ್ ಒಡೆಯರ್ ಅವರ ಮೇಕಿಂಗ್ ನೈಪುಣ್ಯತೆ, ಇಶಾನ್-ಆಶಿಕಾ ಅಚ್ಚುಕಟ್ಟಾದ ಅಭಿನಯ ಮತ್ತು ಅರ್ಜುನ್ ಜನ್ಯ ಅದ್ಭುತ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ.
ಮಧುರ್ ಬಂಡಾಕರ್ ಜೊತೆ ರಾಕಿ ಭಾಯ್
ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಅಂತ ಯಾರಿಗೂ ಗೊತ್ತಿಲ್ಲ. ಆದ್ರೆ ಯಶ್ ಅವರ ಜೊತೆ ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳು ಕಂಡಾಗ ಅನೇಕ ಕುತೂಹಲಗಳು ಪ್ರೇಕ್ಷಕರ ಎದೆಯಲ್ಲಿ ಅರಳುತ್ತಿವೆ. ಇದೀಗ ಮಧುರ್ ಭಂಡಾರ್ಕರ್ ಜೊತೆ ಯಶ್ ಕಾಣಿಸಿಕೊಂಡಿದ್ದು ಇಬ್ಬರ ಪೋಟೋ ವೈರಲ್ ಆಗ್ತಿದೆ. ಇದನ್ನ ನೋಡಿ ಇವರಿಬ್ರು ಒಟ್ಟಿಗೆ ಸಿನಿಮಾ ಮಾಡ್ತಾರ ಅನ್ನೋ ಪ್ರಶ್ನೆ ಶುರುವಾಗಿದೆ.
ಧರಣಿ ಮಂಡಲ ಮಧ್ಯದೊಳಗೆ’ ಟ್ರೇಲರ್ ರಿಲೀಸ್
ಟೀಸರ್, ಹಾಡುಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಭರವಸೆಯ ಮುದ್ರೆ ಒತ್ತಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ರನ್ನು ಡಿಜಿಟಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ವೇದಿಕೆಯಲ್ಲಿ ನಾಯಕ ನಟ ವಸಿಷ್ಠ ಸಿಂಹ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಡಿಸೆಂಬರ್ 2ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಗುಲ್ಟು ಖ್ಯಾತಿಯ ನಟ ನವೀನ್ ಶಂಕರ್, ಐಶಾನಿ ಶೆಟ್ಟಿ ನಟಿಸಿರುವ ಈ ಚಿತ್ರವನ್ನು ಶ್ರೀಧರ್ ಶಿಕಾರಿಪುರ ನಿರ್ದೇಶನ ಮಾಡಿದ್ದಾರೆ.
ರಿಲೀಸ್ಗೆ ಸಿದ್ಧ ಯೋಗರಾಜ್ ಭಟ್ಟರ ಪದವಿ ಪೂರ್ವ.
ಯೋಗರಾಜ್ ಭಟ್ ಅವರ ಮಾರ್ಗದರ್ಶನದಲ್ಲಿ, ಅವರದ್ದೇ ನಿರ್ಮಾಣ ಸಂಸ್ಥೆ ಯೋಗರಾಜ್ ಭಟ್ ಮೂವೀಸ್ ಹಾಗೂ ರವಿ ಶ್ಯಾಮನೂರ್ ಫಿಲಮ್ಸ್ ಬ್ಯಾನರ್‌ನಲ್ಲಿ ರೆಡಿಯಾಗಿರೋ ಯೂಥ್‌ಫುಲ್ ಲವ್ ಸ್ಟೋರಿ ʻಪದವಿ ಪೂರ್ವʼ ಈ ವರ್ಷದ ಕೊನೆಯ ವಾರ, ಡಿಸೆಂಬರ್ 30ಕ್ಕೆ ರಿಲೀಸ್ ಆಗ್ತಾ ಇದೆ. ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಿಗಿರೋ ಹರಿಪ್ರಸಾದ್ ಜಯಣ್ಣ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳ್ತಾ ಇರೋ ಹದಿಹರೆಯದ ಲವ್ ಸ್ಟೋರಿ ಬಗ್ಗೆ ಇಂಡಸ್ಟ್ರಿಯಲ್ಲಿ ಈಗಾಗಲೇ ಟಾಕ್ ಶುರುವಾಗಿದೆ.
ಬಲು ಜೋರು ಅದಿತಿ ಪ್ರಭುದೇವ ಹರಿಶಿನ ಶಾಸ್ತ್ರ
ಈ ತಿಂಗಳ 27 -28 ರಂದು ತನ್ನ ಪ್ರಿಯಕರ ಯಶಸ್ವಿ ಜೊತೆ ನಟಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಂದು ಅದಿತಿ ಪ್ರಭುದೇವ ಅವರ ಮನೆಯಲ್ಲಿ ಹರಿಶಿನ ಶಾಸ್ತ್ರ ನೆರವೇರಿದ್ದು ಅದಿತಿಯ ಅಂದದ ಫೋಟೋಗಳು ಈ ಸೋಶೀಯಲ್ ಸಮುದ್ರ ದಡದಲ್ಲಿ ತೆಲಾಡುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post