ಟೀಮ್ ಇಂಡಿಯಾ- ಬಾಂಗ್ಲಾದೇಶದ ನಡುವೆ ಡಿಸೆಂಬರ್ 4 ರಿಂದ ಏಕದಿನ ಮತ್ತು ಟೆಸ್ಟ್ ಸರಣಿ ಶುರುವಾಗಲಿದೆ. ಈ ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮುಂಬೈನಲ್ಲಿ ಭರ್ಜರಿ ತಯಾರಿ ನಡೆಸ್ತಿದ್ದಾರೆ.
ಇನ್ನು, ಮಲ್ಟಿ ಫಾರ್ಮೆಟ್ ಸರಣಿಯನ್ನಾಡಲು ಡಿಸೆಂಬರ್ 1ರಂದು ಈ ಮೂವರು ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಉಳಿದ ಆಟಗಾರರು, ನೇರವಾಗಿ ಬಾಂಗ್ಲಾದೇಶದಲ್ಲಿ ತಂಡವನ್ನ ಕೂಡಿಕೊಳ್ಳಲಿದ್ದಾರೆ.
ಕಳೆದ ಪಂದ್ಯದಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾ..!
ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ T20 ವಿಶ್ವಕಪ್ ಟೂರ್ನಿಯ 35ನೇ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿತ್ತು.
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾದ ಪರ ಓಪನರ್ ಆಗಿ ಬಂದ ಕನ್ನಡಿಗ ಕೆ.ಎಲ್ ರಾಹುಲ್ 156 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ರು. ಕೇವಲ 32 ಬಾಲ್ನಲ್ಲಿ 50 ರನ್ ಚಚ್ಚಿದ್ರು ಕೆ.ಎಲ್ ರಾಹುಲ್. ಬರೋಬ್ಬರಿ 4 ಬಿಗ್ ಸಿಕ್ಸರ್, ಬ್ಯಾಕ್ ಟು ಬ್ಯಾಕ್ 3 ಫೋರ್ ಸಿಡಿಸಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ರು. ಕ್ರೀಸ್ನಲ್ಲಿ ಕೊನೇವರೆಗೂ ನಿಂತು ಆಡಿದ ಕೊಹ್ಲಿ ಕೇವಲ 44 ಬಾಲ್ನಲ್ಲಿ 64 ರನ್ ಸಿಡಿಸಿದ್ರು. ಬರೋಬ್ಬರಿ 8 ಫೋರ್, 1 ಸಿಕ್ಸರ್ ಸಿಡಿಸಿದ್ದರು. ಟೀಂ ಇಂಡಿಯಾ ನಿಗದಿತ 20 ಓವರ್ನಲ್ಲಿ 6 ವಿಕೆಟ್ಗೆ 184 ರನ್ ಗಳಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post