ಕರ್ನಾಟಕ ಕ್ರಿಕೆಟ್ಗೆ ಹೊಸ ಭರವಸೆ ಸಿಕ್ಕಿದೆ. ನೂತನ ಅಧ್ಯಕ್ಷರಾದ ಲೆಜೆಂಡರಿ ಸ್ಪಿನ್ನರ್ ರಘುರಾಮ್ ಭಟ್ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಕ್ರಿಕೆಟರ್ಸ್, ಫ್ಯಾನ್ಸ್ಗಳ ನಾಡಿ ಮಿಡಿತವನ್ನ ಅರಿತಿರೋ ರಘುರಾಮ್ ಭಟ್ ಕೂಡ ಕರ್ನಾಟಕ ಕ್ರಿಕೆಟ್ನಲ್ಲಿ ಕ್ರಾಂತಿ ಮಾಡಲು ಹಲ ಯೋಜನೆಗಳೊಂದಿಗೆ ಸಜ್ಜಾಗಿದ್ದಾರೆ.
ಕರ್ನಾಟಕ ಕ್ರಿಕೆಟ್ ಲೋಕದಲ್ಲೀಗ ಬದಲಾವಣೆಯ ಸಮಯ. ಇಷ್ಟು ದಿನ ಆ ಸಮಸ್ಯೆ, ಈ ಸಮಸ್ಯೆ ಅಂದವರು, ಆರೋಪಗಳನ್ನ ಮಾಡಿದವರು.. ಈಗ ಎಲ್ಲಾ ಸರಿಯಾಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆ ಗೆದ್ದ, ರಘುರಾಮ್ ಭಟ್ ಬಣ ಆಡಳಿತದ ಚುಕ್ಕಾಣಿ ಹಿಡಿದಿದೆ. ಲೆಜೆಂಡರಿ ಸ್ಪಿನ್ನರ್, ಮಾಜಿ ಕೋಚ್ ರಘುರಾಮ್ ಭಟ್, ಅಧ್ಯಕ್ಷರಾಗಿ ಕೆಎಸ್ಸಿಎನಲ್ಲಿ ಬದಲಾವಣೆ ತರ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿದೆ.
KSCAಗೆ ಇನ್ಮುಂದೆ ಲೆಜೆಂಡರಿ ಸ್ಪಿನ್ನರ್ ಸಾರಥಿ.!
ಕರ್ನಾಟಕ ಕ್ರಿಕೆಟ್ ಬೆಳವಣಿಗೆಯೇ ಗುರಿ.!
ಕರ್ನಾಟಕ ಕ್ರಿಕೆಟ್ನಲ್ಲಿರೋ ಕುಂದು-ಕೊರತೆಗಳ ಬಗ್ಗೆ ನೂತನ ಅಧ್ಯಕ್ಷರಿಗೆ ಸ್ಪಷ್ಟವಾಗೇ ತಿಳಿದಿದೆ. ಹೀಗಾಗಿಯೇ ಸರಿಯಾದ ಸಿದ್ಧತೆ ಮಾಡಿಕೊಂಡೇ ಅಧಿಕಾರ ಸ್ವೀಕರಿಸಿದ್ದಾರೆ. ಕರ್ನಾಟಕ ಕ್ರಿಕೆಟ್ ಬೆಳೀಬೇಕು ಅನ್ನೋದೇ ರಘುರಾಮ್ ಭಟ್ ಮಂತ್ರ.
ಗ್ರಾಮಾಂತರ ಭಾಗದ ಕ್ರಿಕೆಟರ್ಸ್ಗೆ ಬಂಪರ್.?
ಬೆಂಗಳೂರು ಬಿಟ್ರೆ, ಬೇರೆ ಗ್ರಾಮೀಣ ಪ್ರದೇಶದ ಆಟಗಾರರಿಗೆ ಚಾನ್ಸ್ ಸಿಗಲ್ಲ ಅನ್ನೋ ಆರೋಪ ಮೊದಲಿನಿಂದಲೂ ಕೇಳಿ ಬರ್ತಿದೆ. ಇದಕ್ಕೂ ರಘುರಾಮ್ ಭಟ್ AND ಟೀಮ್ ವಿಶೇಷ ಯೋಜನೆಗಳನ್ನ ರೂಪಿಸಿಕೊಂಡಿದೆ. ಗ್ರಾಮೀಣ ಭಾಗದ ಪ್ಲೇಯರ್ಸ್ ಬೆಳೀಬೇಕು ಅನ್ನೋದೇ ಇವರ ಅಲ್ಟಿಮೇಟ್ ಗುರಿಯಾಗಿದೆ.
ಗ್ರಾಮೀಣ ಭಾಗದ ಕ್ರಿಕೆಟ್ ಅನ್ನ ಬೆಳ್ಸ್ಬೇಕು ಅಂದಿದ್ದು ಮಾತ್ರವಲ್ಲ.. ಕೆಎಸ್ಸಿಎ ನೂತನ ಇಡೀ ಕರ್ನಾಟಕವನ್ನೇ ಸುತ್ತೋಕೆ ಮುಂದಾಗಿದ್ದಾರೆ. ನಾಡಿನ ಮೂಲೆ ಮೂಲೆಗೂ ತೆರಳಿ ಟ್ಯಾಲೆಂಟ್ ಹಂಟ್ ಮಾಡೋದು ಅಧ್ಯಕ್ಷರ ಪ್ಲಾನ್ ಆಗಿದೆ.
ಮೂಲ ಸೌಕರ್ಯ ಸುಧಾರಣೆಗೆ ಮೊದಲ ಆದ್ಯತೆ.!
ಕ್ರಿಕೆಟರ್ ಮತ್ತು ಕ್ರಿಕೆಟ್ನ ಅಭಿವೃದ್ಧಿಯ ಜೊತೆಗೆ ಚಿನ್ನಸ್ವಾಮಿ ಮೈದಾನದ ಅಭಿವೃದ್ಧಿಯನ್ನೂ ಮಾಡಲು ಹೊಸ ಕಮಿಟಿ ಮುಂದಾಗಿದೆ. ಕಳೆದ ಭಾರತ – ಸೌತ್ ಆಫ್ರಿಕಾ ನಡುವಿನ ಪಂದ್ಯದ ವೇಳೆ ಮಳೆ ಬಂದ ಪರಿಣಾಮ ರೂಫ್ ಟಾಪ್ ಸೋರಿದ್ದು, ಅಭಿಮಾನಿಗಳಲ್ಲಿ ಬೇಸರ ತರಿಸಿತ್ತು. ಇನ್ನು ಸ್ಟೇಡಿಯಂನ ಫುಡ್ ಕ್ವಾಲಿಟಿ ಬಗ್ಗೆಯೂ ಆರೋಪಗಳ ಕೇಳಿ ಬಂದಿದ್ವು. ಇವೆಲ್ಲವಕ್ಕೂ ಫುಲ್ ಸ್ಟಾಫ್ ಹಾಕಲು ಹೊಸ ಕಮಿಟಿ ಮುಂದಾಗಿದೆ.
ಒಟ್ಟಿನಲ್ಲಿ ಕೆಎಸ್ಸಿಎ ಆಡಳಿತ ಚುಕ್ಕಾಣಿ ಹಿಡಿದಿರುವ ಹೊಸ ಪದಾದಿಕಾರಿಗಳು ಕರ್ನಾಟಕ ಕ್ರಿಕೆಟ್ನಲ್ಲಿ ಬದಲಾವಣೆಯ ನಿರೀಕ್ಷೆಯನ್ನಂತೂ ಹುಟ್ಟು ಹಾಕಿದ್ದಾರೆ. ಇವೆಲ್ಲಾ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತವೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post