ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ತಮ್ಮ ನಗುವಿನಿಂದಲೇ ಪಡ್ಡೆ ಹುಡುಗರನ್ನ ಸೆಳೆದ ಚೆಲುವೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ಬ್ಯೂಟಿ ಅದಿತಿ ನಾಳೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ವಿವಾಹ ಸಮಾರಂಭಕ್ಕಾಗಿ ಅದಿತಿ ಪ್ರಭುದೇವ ಮದುವೆಯ ಹಳದಿ ಶಾಸ್ತ್ರವನ್ನ ಮಾಡಿಕೊಂಡು ಆ ಫೋಟೋಸ್ಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದರು.
ಇದನ್ನು ಓದಿ: ಅದಿತಿಗೆ ಮದುವೆ ಸಂಭ್ರಮ.. ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಸ್ಯಾಂಡಲ್‌ವುಡ್ ‘ಬ್ಯೂಟಿ’..!
ಇದೀಗ ಖ್ಯಾತ ನಟಿ ಅದಿತಿ ಪ್ರಭುದೇವ ಅವರು ಮೆಹಂದಿ ಶಾಸ್ತ್ರದಲ್ಲಿ ಸಖತ್ ಆಗಿ ಕಾಣಿಸುತ್ತಿದ್ದಾರೆ. ಎರಡು ಕೈಗಳಿಗೆ ಸುಂದರವಾಗಿ ಮೆಹಂದಿಯನ್ನು ಹಚ್ಚಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿ ಅದಿತಿ ಜೊತೆ ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿರೋ ಯಶಸ್ವಿ ಅವರು ಕೂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಅದಿತಿ ಪ್ರಭುದೇವ ಹಾಗೂ ಯಶಸ್ವಿ ಮದುವೆಗೂ ಮುನ್ನ ಅವರಿಬ್ಬರು ಉತ್ತರ ಕರ್ನಾಟಕ ಶೈಲಿಯಲ್ಲಿ ಉಡುಗೆ ಧರಿಸಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಅದಿತಿ ಪ್ರಭುದೇವ ಅವರ ವಿವಾಹ ಸಮಾರಂಭ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆಯಲಿದೆ. ಇದಕ್ಕೆ ಅದ್ದೂರಿ ತಯಾರಿ ಕೂಡ ನಡೆಯುತ್ತಿದ್ದು, ಬಣ್ಣ ಬಣ್ಣದ ಲೈಟ್ಸ್ ಮತ್ತು ಹೂವುಗಳಿಂದ ಪ್ಯಾಲೇಸ್ ಗ್ರೌಂಡ್ ಶೃಂಗಾರಗೊಳ್ಳುತ್ತಿದೆ. ನವೆಂಬರ್ 28 ಸೋಮವಾರದಂದು ಮದುವೆ ಮುಹೂರ್ತ ನೆರವೇರಲಿದೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post