ಹೈದರಾಬಾದ್: ನರೇಶ್ ಹಾಗೂ ಪವಿತ್ರಾ ಲೋಕೇಶ್ ಇವರಿಬ್ಬರ ಹೆಸರು ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ತಳುಕು ಹಾಕಿಕೊಳ್ತಿದೆ. ಕುಟುಂಬ ಕದನ, ಹೋಟೆಲ್ ರೂಂನಲ್ಲಿನ ವಾಸ್ತವ್ಯ ಹೀಗೆ ಹಲವು ವಿಚಾರಗಳಿಂದ ಚರ್ಚೆಗೆ ಕಾರಣವಾಗ್ತಿರೋ ಇವರಿಬ್ಬರು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಲಾಗಿದೆ.
ಸ್ಟೇಷನ್ಗೆ ಹೋಗುವಂತದ್ದು ಮತ್ತೇನಾಯ್ತು?
ಹೀಗೆ ಕೆಲವು ತಿಂಗಳ ಹಿಂದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮೈಸೂರಿನ ಹೋಟೆಲ್ ಒಂದರಲ್ಲಿ ಒಂದೇ ರೂಮಿನಲ್ಲಿದ್ದ ವೇಳೆ, ನರೇಶ್ ಪತ್ನಿ ರಮ್ಯಾ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಅಲ್ಲಿ ಒಂದಷ್ಟು ಹೈಡ್ರಾಮಾವೂ ನಡೆದು ಹೋಗಿತ್ತು. ಈ ಘಟನೆಯ ಬಳಿಕ ನರೇಶ್ ಪತ್ನಿ ರಮ್ಯಾ ಇಬ್ಬರ ವಿರುದ್ಧವೂ ಪೊಲೀಸ್ ದೂರು ದಾಖಲಿಸಿದ್ದರು.
ಬಳಿಕ ಹಿರಿಯ ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ನಡುವೆ ಏನ್ ನಡೀತಿದೆ ಅನ್ನೋ ಬಗ್ಗೆ ದೊಡ್ಡ ಮಟ್ಟದ ಗುಸು ಗುಸು ಶುರುವಾಗಿತ್ತು. ಈ ಬಗ್ಗೆ ಇಬ್ಬರೂ ಮಾಧ್ಯಮಗಳ ಮುಂದೆ ಸ್ಪಷ್ಟನೆಗಳನ್ನ ನೀಡಿದ್ರೂ, ಇಂಥಾ ಚರ್ಚೆ ನಿಂತಿಲ್ಲ. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ಗೂ ಇವರಿಬ್ಬರು ಆಹಾರವಾಗಿದ್ದರು. ಹಲವು ಮೀಮ್ಸ್ಗಳು ಇವರಿಬ್ಬರ ಸುತ್ತಲೇ ಗಿರಕಿ ಹೊಡೆದಿದ್ವು. ಇದೇ ವಿಚಾರವೀಗ ಪೊಲೀಸ್ ಠಾಣೆ ಮೆಟ್ಟಿಲು ಏರೋದಕ್ಕೆ ಕಾರಣವಾಗಿದೆ.
ಹೈದರಾಬಾದ್ ಸೈಬರ್ ಕ್ರೈಂಗೆ ಪವಿತ್ರಾ ಲೋಕೇಶ್ ದೂರು..
ತಮ್ಮನ್ನ ಟ್ರೋಲ್ ಮಾಡ್ತಿರೋ ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಪವಿತ್ರಾ ಲೋಕೇಶ್ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾರ್ಫಿಂಗ್ ಮಾಡಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ನರೇಶ್ ಹಾಗೂ ತನ್ನ ಫೋಟೋಗಳನ್ನು ತಿರುಚಿ ಮಾನಹಾನಿ ಮಾಡುತ್ತಿದ್ದಾರೆ ಅಂತಾ ಮೇಲ್ ಮೂಲಕ ದೂರು ನೀಡಿದ್ದಾರೆ.
ಕೆಲವು ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳು ತಮ್ಮ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರ ಮಾಡುತ್ತಿವೆ ಅಂತಲೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪವಿತ್ರಾ ಲೋಕೇಶ್ ಸೈಬರ್ ಕ್ರೈಂ ಪೊಲೀಸರಿಗೆ ಮನವಿ ಮಾಡಿದ್ದಾರೆ. ನಟಿಯ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ತೆಲುಗು ನಟ ನರೇಶ್ ಜೊತೆಗಿನ ವಿಚಾರಕ್ಕೆ ಚರ್ಚೆಯಲ್ಲಿದ್ದ ನಟಿ ಪವಿತ್ರಾ ಲೋಕೇಶ್, ತಮ್ಮ ಬಗ್ಗೆ ಟ್ರೋಲ್ ಮಾಡೋರಿಗೆ ದೂರಿನ ಚಾಟಿ ಬೀಸಿದ್ದಾರೆ. ಸೈಬರ್ ಕ್ರೈಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಟೀಕಿಸುವವರ ವಿರುದ್ಧ ಸಮರ ಸಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post