ಬೆಂಗಳೂರು: ನಗರದ ಮಾಜಿ ರೌಡಿ ಸೈಲೆಂಟ್ ಸುನೀಲ್ ಅಧಿಕೃತವಾಗಿ ರಾಜಕೀಯಕ್ಕೆ ಇಂದು ಪ್ರವೇಶ ಮಾಡಿದ್ದಾರೆ. 2023ರ ಎಲೆಕ್ಷನ್ಗೆ ಚಾಮರಾಜಪೇಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸೈಲೆಂಟ್ ಸುನೀಲ್ ಸ್ಪರ್ಧೆ ಮಾಡ್ತಾರೆ ಎನ್ನಲಾಗುತ್ತಿದೆ. ಈ ನಡುವೆ ಸಾರ್ವಜನಿಕ ಬದುಕಿಗೆ ಎಂಟ್ರಿ ಆಗಿರೋ ಸುನೀಲ್ಗೆ ಬಿಜೆಪಿ ನಾಯಕರು ಶುಭ ಕೋರಿದ್ದಾರೆ.
ಬೆಂಗಳೂರಿನ ಅಂಡರ್ ವಲ್ಡ್ ಮಾಜಿ ಡಾನ್ ಆಗಿರೋ ಸೈಲೆಂಟ್ ಸುನೀಲ್, ಚುನಾವಣಾ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಪಕ್ಷೇತರರಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಇದರ ಭಾಗವಾಗಿಯೇ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಸೈಲೆಂಟ್ ಸುನೀಲ್ ಮತ್ತು ಮಾರ್ಕೆಟ್ ವೇಡಿ ನೇತೃತ್ವದಲ್ಲಿ ರಕ್ತದಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅಥಿತಿಗಳಾಗಿ ಭಾಗಿಯಾಗಿದ್ರು. ಇನ್ನು ಕಾರ್ಯಕ್ರಮದಲ್ಲಿ 2,500ಕ್ಕೂ ಹೆಚ್ಚು ಮಂದಿ ಭಾಗಿಯಾಗಿ ರಕ್ತದಾನ ಮಾಡಿದ್ದಾರೆ.
ಸ್ವಲ್ಪ ಸ್ಟೇಜ್ ಫೀಯರ್ ಇದೆ, ಏನ್ ಮಾತನಾಡಬೇಕು ಗೊತ್ತಾಗ್ತಿಲ್ಲ..
ಇನ್ನು, ಕಾರ್ಯಕ್ರಮದಲ್ಲಿ ಮಾತನಾಡಿದ ಸೈಲೆಂಟ್ ಸುನೀಲ್, ನನಗೆ ಸ್ವಲ್ಪ ಸ್ಟೇಜ್ ಫೀಯರ್ ಇದೆ. ಇಲ್ಲಿ ಏನ್ ಮಾತನಾಡಬೇಕು ಎಂದು ತಿಳಿಯುತ್ತಿಲ್ಲ. ಐಆಮ್ ಟೋಟಲಿ ಸ್ಪೀಚ್ ಲೆಸ್ ಆಗಿದ್ದೇನೆ. ಇನ್ನು ಮೇಲೆ ನಿಮ್ಮ ಜೊತೆ ಇರುತ್ತೇನೆ. ಮುಂದೆ ಸಮಯ ಸಿಕ್ಕಾಗ ನಿಮ್ಮ ಜೊತೆ ಮಾತಾಡ್ತೀನಿ ಎಂದು ಮಾತು ಮುಗಿಸಿದ್ದರು.
ಕಾರ್ಯಕ್ರಮದಲ್ಲಿ ಸುನೀಲ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯುವಕರು ಮುಗಿಬಿದ್ದಿದ್ದರು. ಈ ವೇಳೆ ಎಲ್ರೂ ಮೊದಲು ರಕ್ತದಾನ ಮಾಡಿ, ಆಮೇಲೆ ಫೋಟೋ ತೆಗೆದುಕೊಳ್ಳಲು ಬನ್ನಿ ಎಂದರು.
ಅಪ್ಪು ಅಣ್ಣಗೆ ಎಲೆಕ್ಷನ್ ಟೈಮ್ಲ್ಲಿ ಶೋ ಮಾಡಿ ಎಂದಿದ್ದೆ..
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಇಲ್ಲಿ ಎಲ್ಲಾ ಬಿಸಿ ರಕ್ತದ ಯುವಕರಿದ್ದಾರೆ. ಕಾರ್ಯಕ್ರಮದ ಒಳಗೆ ಬರುವಾಗ ಯಾವುದೋ ಊರ ಜಾತ್ರೆ ಎಂದು ಅನ್ಕೊಂಡಿದ್ದೆ. ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚು ಜನ ರಕ್ತದಾನ ಮಾಡ್ತಿರುವುದು ಒಳ್ಳೆಯ ಕೆಲಸ.
ಅಪ್ಪು ಅವರು ಬದುಕಿರುವಾಗ ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ನಾನು ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ವಿ. ಅವಾಗ ಅವ್ರಿಗೆ ಅಣ್ಣ ಎಲೆಕ್ಷನ್ ಸಮಯದಲ್ಲಿ ಮತ್ತೊಮ್ಮೆ ಶೋ ಮಾಡಿದ್ರೆ, ಎಲೆಕ್ಷನ್ಗೆ ವರ್ಕ್ ಆಗುತ್ತೆ ಎಂದು ಹೇಳಿದ್ದೆ. ಅದಕ್ಕೆ ಅಪ್ಪು ಖಂಡಿತ ಎಲೆಕ್ಷನ್ ಸಮಯದಲ್ಲಿ ಶೋ ಮಾಡ್ತಿನಿ ಅಂತ ಹೇಳಿದ್ರು ಎಂದು ನೆನಪಿಸಿಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post