ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 9ರಿಂದ ಈ ವಾರ ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ವಿನೋದ್ ಗೊಬ್ಬರಗಾಲ ಮನೆಯಿಂದ ಔಟ್ ಆಗಿದ್ದಾರೆ.
ಮಜಾಭಾರತ ಹಾಗೂ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಕಾಮಿಡಿ ಕಲಾವಿದರಾದ ವಿನೋದ್ ಗೊಬ್ಬರಗಾಲ ಬಿಗ್ಬಾಸ್ ಮನೆಯಿಂದ ಎಲಿಮಿನೆಟ್ ಆಗಿದ್ದಾರೆ. ಇನ್ನು ವಿನೋದ್ ಮನೋರಂಜನೆ ಜೊತೆಗೆ ಟಾಸ್ಕ್ಗಳಲ್ಲಿ ಉತ್ತಮ ಪ್ರದರ್ಶನವನ್ನು ಸಹ ನೀಡಿದ್ದರು. ಎರಡೆರಡು ಬಾರಿ ಕಿಚ್ಚ ಸುದೀಪ್ ಅವರಿಂದ ಚಪ್ಪಾಳೆ ಪಡೆದುಕೊಂಡು ಶಹಭಾಷ್ ಪಡೆದುಕೊಂಡಿದ್ದರು. ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿಯೂ ಹೊರಹೊಮ್ಮಿದ್ದರು. ಆದರೆ ಇದೀಗ ಬಿಗ್ಬಾಸ್ ಮನೆಯಿಂದ ಅಚ್ಚರಿಯಿಂದ ಎಲಿಮಿನೇಟ್ ಆಗಿದ್ದಾರೆ.
ಇನ್ನು ಈ ಎಲಿಮಿನೇಷನ್ನಿಂದ ವಿನೋದ್ ಗೊಬ್ಬರಗಾಲ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕ್ತಿದ್ದಾರೆ.
ಇನ್ನು, ಕಾರ್ಯಕ್ರಮದಿಂದ ಹೊರಬಂದು ಬಿಗ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ ಈ ವಾರ ಎಲಿಮೆನೇಟ್ ಆಗ್ತೀನಿ ಅಂತಾ ಅಂದು ಕೊಂಡಿರಲಿಲ್ಲ. ಆದರೆ ಜನ ಕೊಟ್ಟಿರೋ ತೀರ್ಮಾನ ಸ್ವೀಕರಿಸ್ತೀನಿ ಅಂತಾ ವಿನೋದ್ ಹೇಳಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post