ಯೋಗ ಗುರು ಬಾಬಾರಾಮ್ ದೇವ್ಗೂ, ವಿವಾದಕ್ಕೂ ಎಲ್ಲಿಲ್ಲದ ನಂಟು ಇರಬೇಕು ಅಂತ ಕಾಣಿಸುತ್ತೆ. ವಿವಾದ ಆಗಲೆಂದು ಮಾತಗಳನ್ನಾ ಹಾಡ್ತಾರೇನೋ ಗೊತ್ತಿಲ್ಲ.. ಯೋಗ ವಿಜ್ಞಾನ ಶಿಬಿರದಲ್ಲಿ ಬಾಬಾ ರಾಮ್ದೇವ್, ಮಹಿಳೆಯ ಉಡುಪಿನ ತಮಾಷೆ ಮಾಡಲು ಹೋಗಿ, ಮಹಿಳೆ ಮಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಹಿಳೆಯರ ಉಡುಪಿನ ಬಗ್ಗೆ ಇದೆಂಥಾ ಮಾತು?
ಯೋಗ ಗುರುವಿನ ದೃಷ್ಟಿ ಹೀಗೆಲ್ಲಾ ಇರುತ್ತಾ?
ನಾವು ನಮ್ಮ ದೇಶವನ್ನು ಭಾರತಾಂಬೆ ಎಂದು ಒಂದು ಹೆಣ್ಣಿಗೆ ಹೋಲಿಸುತ್ತೇವೆ. ನಮ್ಮ ದೇಶದಲ್ಲಿ ಹೆಣ್ಣಿಗೆ ಮತ್ತು ಖಾವಿಗೆ ಬಹಳ ಮಹತ್ವವಾದ ಸ್ಥಾನ, ಗೌರವವಿದೆ. ಆದ್ರೆ, ಯೋಗ ಗುರು ಬಾಬಾ ರಾಮ್ದೇವ್ ಮಹಿಳೆಯರ ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾನೆ. ನನ್ನ ದೃಷ್ಟಿಯಲ್ಲಿ ಮಹಿಳೆಯರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣ್ತಾರೆ ಎಂದು ಹೇಳುವ ಮೂಲಕ, ದೇಶದ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್ ಸೂಟ್‌ನಲ್ಲಿಯೂ ಅಮೃತಾಜೀ ರೀತಿ ಚೆನ್ನಾಗಿ ಕಾಣುತ್ತಾರೆ. ನನ್ನ ಪ್ರಕಾರ ಮಹಿಳೆಯರು ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣುತ್ತಾರೆ.
ಬಾಬಾ ರಾಮ್ದೇವ್, ಯೋಗ ಗುರು
ಮಹಾರಾಷ್ಟ್ರದ ಥಾಣೆಯಲ್ಲಿ ಯೋಗ ವಿಜ್ಞಾನ ಶಿಬಿರ ಹಾಗೂ ಮಹಿಳೆಯರಿಗಾಗಿ ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ವೇದಿಕೆ ಮೇಲೆ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಕೂಡ ಉಪಸ್ಥಿತರಿದ್ದರು. ಯೋಗ ತರಬೇತಿಗೆ ಬಂದಿದ್ದ ಮಹಿಳೆಯರು, ಈ ಕಾರ್ಯಕ್ರಮಕ್ಕಾಗಿ ಸೀರೆಯನ್ನೂ ತಂದಿದ್ದರು. ಆದ್ರೆ ಸಮಯದ ಅಭಾವದ ಕಾರಣ, ಯೋಗದ ಡ್ರೆಸ್ನಲ್ಲೇ ಪಾಲ್ಗೊಂಡಿದ್ದರು. ಈ ವಿಚಾರವಾಗಿ ಮಾತನಾಡಿದ ಯೋಗ ಗುರು ರಾಮ್ದೇವ್, ಮಹಿಳೆಯರು, ಸೀರೆಯಲ್ಲೂ ಚೆನ್ನಾಗಿ ಕಾಣ್ತಾರೆ. ಸಲ್ವಾರ್ನಲ್ಲೂ ಚೆನ್ನಾಗಿ ಕಾಣ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣ್ತಾರೆ ಎಂದು ಕೀಳು ಅಭಿರುಚಿಯ ಹೇಳಿಕೆ ನೀಡಿ, ಕಳ್ಳ ನಗೆಯನ್ನು ಬೀರಿದ್ದಾರೆ.
Yoga guru #BabaRamdev 's sexist remark, "Women look good even if they don't wear anything".#RamdevBaba made this remark at a yoga programme in Maharashtra's Thane attended by #AmrutaFadnavis , wife of Maharashtra Deputy CM Devendra Fadnavis.#ViralVideo #women #Sexist pic.twitter.com/pwll9Cm987
— Surya Reddy (@jsuryareddy) November 26, 2022
ಬಾಬಾ ರಾಮ್ದೇವ್ ಹೇಳಿಕೆಗೆ ಎಲ್ಲೆಡೆ ಆಕ್ರೋಶ
ಮಹಿಳೆಯರ ಕ್ಷಮೆಯಾಚಿಸುವಂತೆ ಹೆಚ್ಚಿದ ಆಗ್ರಹ
ಯೋಗಗುರು ಬಾಬಾ ರಾಮ್ದೇವ್ನ ಕೀಳು ಅಭಿರುಚಿಯ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯೋಗಗುರುವಿನ ಹೇಳಿಕೆಗೆ ಮಹಿಳಾ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ, ಸ್ವಾತಿ ಮಲಿವಾಲ್, ರಾಮ್ದೇವ್ ಹೇಳಿಕೆಯನ್ನು ಖಂಡಿಸಿದ್ದು, ಅವರು ಇಡೀ ದೇಶದ ಮಹಿಳೆಯರನ್ನು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಕೆಲ ರಾಜಕೀಯ ನಾಯಕರು ಬಾಬಾ ರಾಮ್ದೇವ್ ಹೇಳಿಕೆ ಖಂಡಿಸಿದ್ದಾರೆ.
ಇರಲಾರದೇ ಇರುವೆ ಬಿಟ್ಟಿಕೊಳ್ಳೋದು ಅಂತಾರಲ್ಲ. ಇಂಥವರನ್ನೆ ನೋಡಿ ಹೇಳಿರಬೇಕು. ಮಹಿಳೆಯರ ಉಡುಪಿನ ಬಗ್ಗೆ ಮಾತನಾಡುತ್ತ, ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಇವರದ್ದು ಅದೆಂಥಾ ದಿವ್ಯ ದೃಷ್ಟಿ ಅನ್ನೋದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post