ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ನಟ ಅಭಿಷೇಕ್ ಅಂಬರೀಶ್ ಅವರ ಜೊತೆ ನಿರ್ದೇಶಕ ಮಹೇಶ್ ಕುಮಾರ್ ರೇಷ್ಮೆ ಇನ್ಸ್‌ಟಿಟ್ಯೂಟ್‌ನಿಂದ ತಮ್ಮ ಮನೆಯ ಸಮೀಪ ಜೆಪಿ ನಗರವರೆಗೂ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಯಂಗ್ ರೆಬೆಲ್ ಸ್ಟಾರ್, ನಮ್ಮ ಮೆಟ್ರೋದಲ್ಲಿ ಹೋಗುತ್ತಿರೋ ಫೋಟೊಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಇನ್ನು ಅಭಿಷೇಕ್ ಅಂಬರೀಶ್ ಅವರನ್ನು ಮೆಟ್ರೋದಲ್ಲಿ ಕಂಡ ಜನರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಈ ವೇಳೆ ಅಭಿಷೇಕ್ ಮುಂದಿನ ಸಿನಿಮಾ ನಿರ್ದೇಶನ ಮಾಡ್ತಿರೋ ಮಹೇಶ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ.
ಇನ್ನು, ಅಭಿಷೇಕ್ ಅಂಬರೀಶ್ ಏಕಾಏಕಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು ಏಕೆ ಎಂಬ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಅಭಿಷೇಕ್ ಅಂಬರೀಶ್ ದುನಿಯಾ ಸೂರಿ ನಿರ್ದೇಶಿಸುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಉಳಿದಂತೆ ಮುಂಗಾರು ಮಳೆ ಕೃಷ್ಣ ಮತ್ತು ಅಭಿಷೇಕ್ ಅಂಬರೀಶ್ ಕಾಂಬಿನೇಷನ್ ಮೂಡಿ ಬರುತ್ತಿರೋ ‘ಕಾಳಿ’ ಸಿನಿಮಾಗೆ ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post