ಹಾಸ್ಟೆಲ್ನಲ್ಲಿ ಸೀನಿಯರ್ಸ್ ವಿದ್ಯಾರ್ಥಿಗಳಿಂದ ಱಗಿಂಗ್ ತಪ್ಪಿಸಿಕೊಳ್ಳಲು ವಿದ್ಯಾರ್ಥಿಯೊಬ್ಬ ಕಟ್ಟಡದ ಮೇಲಿಂದ ಜಂಪ್ ಮಾಡಿ ಸಾವನ್ನಪ್ಪಿರೋ ಘಟನೆ ಅಸ್ಸಾಂನ ದಿಬ್ರುಘರ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಅಮ್ಗೂರಿ ನಗರದ ಆನಂದ್ ಶರ್ಮಾ ಕಟ್ಟಡ ಮೇಲಿಂದ ಜಿಗಿದು ಸಾವನ್ನಪ್ಪಿರೋ ವಿದ್ಯಾರ್ಥಿ. ದಿಬ್ರುಘರ್ ವಿಶ್ವವಿದ್ಯಾಲಯದ ಪಿಎನ್ಜಿಬಿ ಹಾಸ್ಟಲ್ನಲ್ಲಿ ಆನಂದ್ ಶರ್ಮಾನನ್ನು ಸೀನಿಯರ್ ವಿದ್ಯಾರ್ಥಿಗಳಾದ ಪರಂಜಿತ್ ಬರುವಾ, ನಿರಂಜನ್ ಠಾಕೂರ್ ಮತ್ತು ರಾಹುಲ್ ಚೆಟ್ರಿ ಱಗಿಂಗ್ ಮಾಡಿದ್ದಾರೆ. ಈ ವೇಳೆ ಸೀನಿಯರ್ಸ್ ಱಗಿಂಗ್ನಿಂದ ತಪ್ಪಿಸಿಕೊಳ್ಳಲು ಆನಂದ್ ಹಾಸ್ಟಲ್ ಕಟ್ಟಡದ 2ನೇ ಮಹಡಿಯ ಮೇಲೆ ಹೋಗಿ ಜಂಪ್ ಮಾಡಿದ್ದಾನೆ.
ತಕ್ಷಣ ಆನಂದ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ತೀವ್ರವಾಗಿ ಗಾಯಗೊಂಡಿದ್ದ ಆನಂದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪರಂಜಿತ್ ಬರುವಾ, ನಿರಂಜನ್ ಠಾಕೂರ್ನನ್ನು ವಶಕ್ಕೆ ಪಡೆದಿದ್ದಾರೆ. ರಾಹುಲ್ ಚೆಟ್ರಿ ಓಡಿ ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ವಿವಿಯಲ್ಲಿ ಱಗಿಂಗ್ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು. ಇದರ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ.
ಈ ಬಗ್ಗೆ ದಿಬ್ರುಘರ್ ವಿಶ್ವವಿದ್ಯಾಲಯದಲ್ಲಿ ಱಗಿಂಗ್ ಮಿತಿ ಮೀರಿದ್ದು ಈ ಸಂಬಂಧ 18 ವಿದ್ಯಾರ್ಥಿಗಳನ್ನ ಈಗಾಗಲೇ ವಿವಿಯಿಂದ ಹೊರಗೆ ಕಳುಹಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಲಾಗುವುದು ಎಂದು ವಿವಿಯ ಉಪ ಕುಲಪತಿ ಡಾ.ಜಿತಿನ್ ಹಝಾರಿಕ್ ಹೇಳಿದ್ದಾರೆ. ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾ ಶರ್ಮಾ, ಈ ಬಗ್ಗೆ ಟ್ವೀಟ್ ಮಾಡಿದ್ದು ವಿದ್ಯಾರ್ಥಿ ಸಾವು ನನಗೆ ಸಾಕಷ್ಟು ನೋವು ತಂದಿದೆ. ಱಗಿಂಗ್ ಅನ್ನು ಸಂಪೂರ್ಣವಾಗಿ ಎಲ್ಲ ಶಾಲಾ-ಕಾಲೇಜುಗಳಿಂದ ತೆಗೆದು ಹಾಕಲಾಗುವುದು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post