ತಿಹಾರ್ ಜೈಲಿನಲ್ಲಿ ಆಪ್ ಸಚಿವರಿಗೆ ವಿಐಪಿ ಟ್ರೀಟ್ಮೆಂಟ್ ಮುಂದುವರಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ಮತ್ತೊಂದು ಹೊಸ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಸಿಡಿದೆದ್ದ ದೆಹಲಿ ಸಿಎಂ, ಬಿಜೆಪಿಯನ್ನು ವಿಡಿಯೋ ಮೇಕಿಂಗ್ ಕಂಪನಿ ಎಂದು ಟಾಂಗ್ ನೀಡಿದ್ದಾರೆ. ಇದಕ್ಕೆ ಬಿಜೆಪಿ ಕೂಡ, ತಿರುಗೇಟು ನೀಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ವಿಚಾರಗಳು ಭಾರೀ ಸದ್ದು ಮಾಡುತ್ತಿವೆ, ಅದರಲ್ಲಿ ಒಂದು ದೆಹಲಿ ಪಾಲಿಗೆ ಚುನಾವಣೆ ಮತ್ತೊಂದು ತಿಹಾರ್ ಜೈಲಿನಲ್ಲಿರುವ ಆಪ್ ಸಚಿವ ಸತ್ಯೇಂದ್ರ ಜೈನ್ ಅವರ ರಾಜಾತಿಥ್ಯ ವಿಡಿಯೋಗಳು ಭಾರೀ ಸದ್ದು ಮಾಡುತ್ತಿವೆ. ಇದು ಬಿಜೆಪಿ ಮತ್ತು ಆಪ್ ಪಕ್ಷದ ನಡುವೆ ವಾಕ್ಸಮರಕ್ಕೂ ದಾರಿಯಾಗಿದೆ.
ತಿಹಾರ್ ಜೈಲಿನ ರಾಜಾತಿಥ್ಯದ ಮತ್ತೊಂದು ವಿಡಿಯೋ ವೈರಲ್
ಸತ್ಯೇಂದ್ರ ಜೈನ್ ಸೆಲ್‌ನಲ್ಲಿ ಕ್ಲೀನಿಂಗ್ ಸೇವೆಗೆ ತೀವ್ರ ವಿರೋಧ
ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಕೊಠಡಿಯೊಳಗೆ ಮಸಾಜ್ ಮಾಡಿಸಿಕೊಳ್ಳುವ ಮತ್ತು ರುಚಿಕರವಾದ ಊಟ ಮಾಡುತ್ತಿರುವ ವೀಡಿಯೊಗಳು ಬಹಿರಂಗವಾದ ಕೆಲವೇ ದಿನಗಳ ಬಳಿಕ ಇದೀಗ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಬಿಜೆಪಿ ಮುಖಂಡರು ಶೇರ್ ಮಾಡಿರುವ ಈ ಹೊಸ ವಿಡಿಯೋದಲ್ಲಿ ಸತ್ಯೇಂದ್ರ ಜೈನ್ ಅವರ ಜೈಲು ಕೊಠಡಿಯನ್ನು ಕೆಲವರು ಶುಚಿಗೊಳಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ವಾಗ್ದಾಳಿ ನಡೆಸಿರುವ ಬಿಜೆಪಿ, 8 ರಿಂದ 10 ಜನರು ಸತ್ಯೇಂದ್ರ ಜೈನ್‌ಗೆ ಸಂಬಂಧಿಸಿದ ಕೆಲಸ ಮತ್ತು ವಿವಿಐಪಿ ಸೇವೆಗಳನ್ನು ಒದಗಿಸುತ್ತಿದ್ದಾರೆ. ನೂತನ ವಿಡಿಯೋದಿಂದ ಜೈಲಿನಲ್ಲಿ ಜೈನ್ರಿಗೆ ವಿಐಪಿ ಸೇವೆಗಳು ಮುಂದುವರೆದಿರುವುದು ಸ್ಪಷ್ಟ ಅಂತಾ ಬಿಜೆಪಿ ಆರೋಪಿಸಿದೆ.
ಬಿಜೆಪಿ ವಿಡಿಯೋ ಮೇಕಿಂಗ್ ಕಂಪನಿ ಎಂದ ಕೇಜ್ರಿವಾಲ್
ಕೇಜ್ರಿವಾಲ್ ಆರೋಪಕ್ಕೆ ಬಿಜೆಪಿಯಿಂದಲೂ ತಿರುಗೇಟು
ದೆಹಲಿ ಪಾಲಿಕೆ ಚುನಾವಣೆ ಸಮಯದಲ್ಲೇ ಜೈಲಿನಲ್ಲಿರುವ ಆಪ್ ಸಚಿವರ ರಾಜ್ಯಾತಿಥ್ಯದ ವಿಡಿಯೋಗಳು ವೈರಲ್ ಆಗ್ತಿರೋದು, ಆಪ್ಗೆ ಇರಿಸುಮುರಿಸು ಉಂಟು ಮಾಡಿದೆ. ಜೈನ್ ಅವರ ಮತ್ತೊಂದು ವಿಡಿಯೊ ಬಹಿರಂಗಗೊಂಡಿರುವ ಬೆನ್ನಲ್ಲೇ ಬಿಜೆಪಿ ವಿಡಿಯೊ ನಿರ್ಮಾಣ ಕಂಪನಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ. ಈ ಚುನಾವಣೆಯಲ್ಲಿ ಸಾರ್ವಜನಿಕರು ಅವರಿಗೆ ವಿಡಿಯೊ ಮಾಡುವ ಜವಾಬ್ದಾರಿ ಹಾಗೂ ಶಾಲೆ, ಆಸ್ಪತ್ರೆ ಕಟ್ಟಿಸುವವರಿಗೆ ಸರ್ಕಾರ ನಡೆಸುವ ಜವಾಬ್ದಾರಿ ನೀಡಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ವಿಡಿಯೋ ಮೇಕಿಂಗ್ ಕಂಪನಿ ಎಂದ ದೆಹಲಿ ಸಿಎಂ ಕೇಜ್ರಿವಾಲ್ಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಕುರಿತಾದ ವೀಡಿಯೋ ಹಾಗೂ ಮಾಹಿತಿ ಸೋರಿಕೆಯಾಗುತ್ತಿರುವುದು, ಜೈಲಾಧಿಕಾರಿಗಳಿಂದಲ್ಲ. ಬದಲಾಗಿ ದೆಹಲಿ ಸಿಎಂ ಕೇಜ್ರಿವಾಲ್ ಆಪ್ತರಿಂದ ಎಂದು ಬಿಜೆಪಿ ಆರೋಪಿಸಿದೆ. ಶೀಘ್ರದಲ್ಲೇ ಅವರ ಹೆಸರನ್ನು ಬಹಿರಂಗ ಪಡಿಸೋದಾಗಿಯೂ ಹೇಳಿದ್ದಾರೆ.
ಒಟ್ಟಾರೆ. ದೆಹಲಿ ಪಾಲಿಕೆ ಚುನಾವಣೆ ಸಮಯದಲ್ಲೇ, ಆಪ್ ಮತ್ತು ಬಿಜೆಪಿ ಮಧ್ಯೆ ವಿಡಿಯೋ ವಾರ್ ತಾರಕಕ್ಕೇರಿದೆ. ಆಪ್ ಸಚಿವರ ವಿಐಪಿ ಸಂಸ್ಕೃತಿಯನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗೆ ಗುರಿ ಇಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post