ಶಿರಸಿ: ಡ್ರಾಪ್ ಕೊಡೋ ನೆಪದಲ್ಲಿ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಹಗಲು ದರೋಡೆ ಮಾಡಿರೋ ಘಟನೆ ಬನವಾಸಿ ಸಮೀಪದ ಕುಪ್ಪಗಡ್ಡೆ ಬಳಿ ನಡೆದಿದೆ.
ಡ್ರಾಪ್ ಕೊಡುತ್ತೇನೆ ಎಂದು ಗಾಪುರದ ಕಮಲಮ್ಮ ನಾಗಪ್ಪ ಹೊಂಬಳಿ (70) ಎಂಬುವವರ ಬಾಯಿಗೆ ವಸ್ತ್ರ ತುರುಕಿ ಮಗಳಿಗೆ ಕೊಡಲು ತಂದಿದ್ದ 57 ಸಾವಿರ ನಗದು ಹಣ ಹಾಗೂ 40 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿ ಆರೋಪಿ ಎಸ್ಕೇಪ್ ಆಗಿದ್ದಾನೆ.
ಮಗಳಿಗೆ ಹಣಕಾಸಿನ ತೊಂದರೆ ಇದೆ. ಹೀಗಾಗಿ ಭತ್ತ ಮಾರಿದ ಹಣವನ್ನು ಮಗಳಿಗೆ ಕೊಡಲು ಹೋಗುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿ.ಪಿ.ಐ. ರಾಮಚಂದ್ರ ನಾಯಕ ಅವರು ಕಾರ್ಯಚರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post