ನವದೆಹಲಿ: ಶ್ರದ್ಧಾ ಹತ್ಯೆಯ ಮಾದರಿಯಲ್ಲೇ ದೆಹಲಿಯ ಪಾಂಡವ್ ನಗರದ ತ್ರಿಲೋಕ್ ಪುರಿಯಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದ್ದು, ತಾಯಿ ಮತ್ತು ಮಗ ಸೇರಿ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ.
ಅಂಜಸ್ ದಾಸ್ ಮೃತ ದುರ್ದೈವಿಯಾಗಿದ್ದು, ಆತನ ಪತ್ನಿ ಪೂನಂ ಮತ್ತು ಮಗ ದೀಪಕ್ ಹತ್ಯೆ ಮಾಡಿದ ಆರೋಪಿಗಳಾಗಿದ್ದಾರೆ. ಶ್ರದ್ದಾ ಹತ್ಯೆ ಮಾದರಿಯಲ್ಲೇ ಆರೋಪಿಗಳು ಕೃತ್ಯ ಎಸಗಿದ್ದು, ಮಗನ ನೆರವಿನೊಂದಿಗೆ ಗಂಡನ ಮೃತದೇಹವನ್ನು ಪೀಸ್ ಪೀಸ್ ಮಾಡಿ ದೇಹವ ಭಾಗಗಳನ್ನು ಫ್ರಿಡ್ಜ್ನಲ್ಲಿಟ್ಟಿದ್ದಾರೆ. ಆ ಬಳಿಕ ದಿನಾಲೂ ಒಂದೊಂದೇ ಕವರ್ನಲ್ಲಿ ಮೃತದೇಹದ ಭಾಗಗಳನ್ನು ಹೊರಕ್ಕೆ ಎಸೆದು ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾರೆ.
ಆರೋಪಿ ಪೂನಂ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಮೃತದೇಹದ ತುಂಡುಗಳು ಸ್ಥಳೀಯ ಬಯಲು ಪ್ರದೇಶದವೊಂದರಲ್ಲಿ ಪತ್ತೆಯಾದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣದಲ್ಲಿ ಆರೋಪಿ ತಾಯಿ ಹಾಗೂ ಮಗವನ್ನು ಬಂಧನ ಮಾಡಿದ್ದು, ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post