ಒಂದು ಸಲ, ಎರಡು ಸಲ.. ತಪ್ಪಾಗೋದು ಸಹಜ. ಪದೆ ಪದೇ ಆ ತಪ್ಪು ರಿಪೀಟ್ ಆದ್ರೆ, ಪಿತ್ತ ನೆತ್ತಿಗೇರುತ್ತೆ. ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ ಒಂದು ನಡೆ ಈಗ ಫ್ಯಾನ್ಸ್ ಪಿತ್ತನೆತ್ತಿಗೇಸಿದೆ. ಅಭಿಮಾನಿಗಳ ಆಕ್ರೋಶದ ಕಿಡಿ ಹೊತ್ತಿ ಉರೀತಾ ಇದೆ.
ಆಡಿರೋದು 10 ODI ಇನ್ನಿಂಗ್ಸ್. ಗಳಿಸಿರೋದು 330 ರನ್. ಸರಾಸರಿ 66. ನೀವೇ ಹೇಳಿ. ಇದು ಒಳ್ಳೇ ಆಟನಾ..? ಅಥವಾ ಕೆಟ್ಟ ಆಟನಾ..? ಈ ಅಂಕಿ-ಅಂಶ ಬೇರೆ ಯಾರದ್ದೋ ಅಲ್ಲ, ತಂಡಕ್ಕೆ ಆಯ್ಕೆಯಾದ್ರೂ, ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆಯದ ನತದೃಷ್ಟ ಸಂಜು ಸ್ಯಾಮ್ಸನ್ರದ್ದು.
ಅದ್ಭುತವಾಗಿ ಆಡಿದ್ರೂ, ಸಂಜುನೇ ಟಾರ್ಗೆಟ್..
ಯಾರೂ ಫ್ಲಾಪ್ ಆದ್ರೂ, ಸ್ಯಾಮ್ಸನ್ಗೆ ಶಿಕ್ಷೆ..
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಯಾಮ್ಸನ್ ಜವಾಬ್ದಾರಿಯುತ ಆಟವಾಡಿದ್ರು. ಶ್ರೇಯಸ್ ಅಯ್ಯರ್ ಜೊತೆ ಸೇರಿ, 5ನೇ ವಿಕೆಟ್ಗೆ 94 ರನ್ಗಳ ಪಾಟ್ನರ್ಶಿಪ್ ಕಟ್ಟಿದ್ರು. ಸಂಜು ಕೂಡ 38 ರನ್ಗಳ ಕಾಣಿಕೆ ನೀಡಿ ತಂಡಕ್ಕೆ ನೆರವಾದ್ರು. ಇಷ್ಟು ಅದ್ಭುತವಾಗಿ ಆಡಿದ್ರೂ, 2ನೇ ಏಕದಿನದಲ್ಲಿ ಬೆಂಚ್ಗೆ ಸೀಮಿತವಾದ್ರು. ಇದೇ ನೋಡಿ ಫ್ಯಾನ್ಸ್ ಪಿತ್ತ ನೆತ್ತಿಗೇರಿಸಿದ ಅಂಶ.
ನಿಜವಾಗಿಯೂ ಬೆಂಚ್ ಕಾಯಬೇಕಿದ್ದದ್ದು ಸೂರ್ಯಕುಮಾರ್..
ಈ ವರ್ಷ ಸೂರ್ಯಕುಮಾರ್ T20 ಕ್ರಿಕೆಟ್ನಲ್ಲಿ ಘರ್ಜಿಸಿದ್ದಾರೆ. ಆದ್ರೆ, ಏಕದಿನದಲ್ಲಿ ಆ ಅಬ್ಬರ ಇಲ್ಲ. ಕಳೆದೈದು ಇನ್ನಿಂಗ್ಸ್ಗಳಲ್ಲಂತೂ ಪ್ಲಾಫ್ ಪರ್ಫಾಮೆನ್ಸ್. ಸೂರ್ಯನಿಗಿಂತ ಸಂಜುನೇ ಅದ್ಭುತವಾಗಿ ಆಡಿದ್ದಾರೆ. ನಿನ್ನೆಯ ಪಂದ್ಯಕ್ಕೂ ಹಿಂದಿನ ಮುನ್ನ 5 ಪಂದ್ಯಗಳಲ್ಲಿ ಸೂರ್ಯ ಕುಮಾರ್ಗಳಿಸಿದ್ದು ಕೇವಲ 50 ರನ್.. ಆದ್ರೆ, ಸಂಜು ಸಿಡಿಸಿದ್ದು, 171 ರನ್. ಈಗ ನೀವೇ ಹೇಳಿ ಡ್ರಾಪ್ ಮಾಡಿದ್ದು ಸರೀನಾ ಅಂತಾ..?
ಸ್ಯಾಮ್ಸನ್ ಕರಿಯರ್ ಮುಗಿಸೋಕೆ ಹೊರಟಿದ್ಯಾ ಬಿಸಿಸಿಐ.?
ಸಂಜು ಸ್ಯಾಮ್ಸನ್ಗೆ ಈಗಾಗಲೇ ಅವಕಾಶಗಳ ಕೊರತೆ ಕಾಡ್ತಿದೆ. ಸಿಗೋದೆ ಅಮವಾಸ್ಯೆ-ಹುಣ್ಣಿಮೆಗೊಂದು ಅವಕಾಶ ಅದೂ ಸೀನಿಯರ್ಸ್ಗಳ ಅಲಭ್ಯತೆಯಲ್ಲಿ. ಹೀಗೆ ತಂಡಕ್ಕೆ ಎಂಟ್ರಿ ಕೊಟ್ಟಾಗ್ಲೂ ಬೆಂಚ್ ಕಾಯೋದು ಖಾಯಂ ಆಗಿದೆ. ಹೀಗಾಗಿಯೇ ಕರಿಯರ್ಗೆ ಫುಲ್ಸ್ಟಾಫ್ ಇಡೋ ಬಿಸಿಸಿಐ & ಮ್ಯಾನೇಜ್ಮೆಂಟ್ ಮುಂದಾಗಿದ್ಯಾ ಅನ್ನೋ ಪ್ರಶ್ನೆ ಹುಟ್ಟಿರೋದು. ಪ್ರತಿಭೆಯನ್ನ ಬೆಳೆಸಲು ಮುಂದಾಗದ ಬಿಸಿಸಿಐ, ತುಳಿಯೋಕೆ ಯಾಕೆ ಹೋಗ್ತಿದೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.. ಇದೊಂದು ಷಡ್ಯಂತ್ರವಾ..? ಕುತಂತ್ರ ರಾಜಕಾರಣವಾ..? ದೇವರೇ ಬಲ್ಲ.
ಸ್ಯಾಮ್ಸನ್ ಫ್ಯಾನ್ಸ್ ಗರಂ.. ಪಂತ್ಗ್ಯಾಕೆ ಚಾನ್ಸ್ ಅಂತ ಕಿಡಿ.!
ತಮ್ಮ ನೆಚ್ಚಿನ ಆಟಗಾರನಿಗೆ ಪದೆಪದೇ ಆಗ್ತಿದ್ದರೂ, ಇಷ್ಟು ದಿನ ಸಂಜು ಫ್ಯಾನ್ಸ್ ಸಹಿಸಿಕೊಂಡಿದ್ರು. ಇದೀಗ ತಾಳ್ಮೆ ಕಳೆದುಕೊಂಡ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಬಿಸಿಸಿಐ ವಿರುದ್ಧ ಸಿಕ್ಕಾಪಟ್ಟೆ ಗರಂ ಆಗಿರುವ ಫ್ಯಾನ್ಸ್, ಸ್ಯಾಮ್ಸನ್ರನ್ನ ಸೆಲೆಕ್ಟ್ ಮಾಡೋದು ಯಾಕೆ.? ಬೆಂಚ್ ಬಿಸಿ ಮಾಡೋಕಾ.? ಅಥವಾ ಅವರನ್ನ ಟ್ರಿಪ್ ಹೊಡೆಸೋಕಾ ಅಂತ ಟೀಕೆ ಮಾಡ್ತಿದ್ದಾರೆ.
ಇನ್ನೊಂದೆಡೆ ಕಳಪೆ ಪರ್ಫಾಮೆನ್ಸ್ ನೀಡ್ತಾ ಇದ್ರೂ, ರಿಷಭ್ ಪಂತ್ಗೆ ಅವಕಾಶ ಸಿಗ್ತಿದೆ. ಆದ್ರೆ, ಪರ್ಫಾಮ್ ಮಾಡಿದ್ರೂ, ಸಂಜುಗೆ ಕನ್ಸಿಸ್ಟೆಂಟ್ ಆಗಿ ಚಾನ್ಸ್ ಸಿಗ್ತಿಲ್ಲ. ಇದ್ಯಾಕೆ ಎಂದು ಫ್ಯಾನ್ಸ್ ಟೀಕಿಸ್ತಿದ್ದಾರೆ. ಇದರ ಜೊತೆಗೆ ಇದೊಂದು ಪ್ರತಿಭೆಯನ್ನ ತುಳಿಯೋ ರಾಜಕೀಯ ಕುತಂತ್ರ ಎಂದು ಜರಿದಿದ್ದಾರೆ.
ಅದೇನೆ ಇರಲಿ.. ಸಂಜು ಸ್ಯಾಮ್ಸನ್ಗೆ ಸತತ ಅವಕಾಶ ನೀಡಿದಿದ್ರೆ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿದ್ರು ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಮುಂದಾದ್ರೂ ಸಂಜುಗೆ ಸತತ ಅವಕಾಶ ಸಿಗುವಂತಾಗಲಿ ಅನ್ನೋದೇ ಫ್ಯಾನ್ಸ್ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post