ಸಾಮಾನ್ಯವಾಗಿ ಪ್ರೇಯಸಿಗೆ ತಮ್ಮ ಪ್ರೇಮ ನಿವೇದನೆ ಮಾಡುವಾಗ ಹುಡುಗರು ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡಲು ಯೋಚಿಸುತ್ತಾರೆ. ಇಂತಹ ವಿಚಾರದಲ್ಲಿ ಪುರುಷರು ಕ್ರಿಯೇಟಿವಿಟಿ ಬೇರೆ ರೀತಿಯಲ್ಲೇ ಇರುತ್ತದೆ. ಆದರೆ ಫ್ಲೋರಿಡಾದ ವ್ಯಕ್ತಿಯೊರ್ವ, ತನ್ನ ಪ್ರೇಯಸಿಗೆ ನಿಶ್ಚಿತಾರ್ಥದ ಉಂಗುರವನ್ನು ತೊಡಿಸುವ ವೇಳೆ ಯಡವಟ್ಟು ಮಾಡಿಕೊಂಡಿದ್ದಾನೆ.
ತಾನೂ ಪ್ರೀತಿಸುತ್ತಿರುವ ಪ್ರೇಯಸಿಗೊಂದು ಉಂಗುವರನ್ನು ತಂದಿದ್ದ. ದೋಣಿಯ ಮೇಲೆ ನಿಂತುಕೊಂಡು ಪ್ರೇಯಸಿಗೆ ಪ್ರಪೋಸ್ ಮಾಡಿ, ಉಂಗುರ ಹಾಕಲು ಮುಂದಾಗಿದ್ದಾನೆ. ಆದರೆ ಜೇಬಿನಿಂದ ಉಂಗುರವನ್ನು ತೆಗೆಯುವ ವೇಳೆ ಏಕಾಏಕಿ ಆತನ ಕೈಯಿಂದ ಜಾರಿ ಉಂಗುರ ಸಮುದ್ರದಲ್ಲಿ ಬಿದ್ದಿದೆ. ಕೂಡಲೇ ವ್ಯಕ್ತಿ ಹಿಂದೆ ಮುಂದೆ ಯೋಚಿಸದೆ ಸಮುದ್ರಕ್ಕೆ ಧುಮುಕಿದ್ದಾರೆ. ಕೊನೆಗೂ ಸಮುದ್ರದಲ್ಲಿ ಬಿದ್ದಿದ್ದ ಉಂಗುರದ ಬಾಕ್ಸ್ ಅನ್ನು ಹೊರ ತೆಗೆದಿದ್ದಾನೆ.
ಇನ್ನು, ಅಲ್ಲೇ ನಿಂತಿದ್ದ ಪ್ರೇಯಸಿ ಇದನ್ನು ಕಂಡು ಆಶ್ಚರ್ಯ ಚಕಿತಳಾಗಿದ್ದಾಳೆ. ಸಮುದ್ರಕ್ಕೆ ಮುದುಕಿದ ಬಳಿಕ ಮೇಲೆ ಬಂದು ಮತ್ತೆ ತನ್ನ ಪ್ರೇಯಸಿಯ ಕೈಗೆ ಉಂಗುವರನ್ನು ಹಾಕಿ ಕಿಸ್ ಕೊಟ್ಟಿದ್ದು, ಈ ದೃಶ್ಯವನ್ನು ಅಲ್ಲೇ ಇದ್ದ ಇಬ್ಬರು ಗೆಳಯರು ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದಿದ್ದಾರೆ. ಜೊತೆಗೆ ಫೇಸ್‌ಬುಕ್‌ನಲ್ಲಿ ಇದು ನೂರಕ್ಕೆ ನೂರು ಸತ್ಯ, ನಾನು ತುಂಬಾ ಅದೃಷ್ಟವಂತಳು. ಇದನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದು ಬರೆದುಕೊಂಡು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post