ಗದಗ: ಅಪರಿಚಿತರು ರಟ್ಟಿನ ಬಾಕ್ಸ್ನಲ್ಲಿ ಗಂಡು ಹಸಗೂಸು ಅನ್ನು ಇಟ್ಟುಹೋದ ಮನಕಲಕುವ ಘಟನೆ ನಗರದ ಎಪಿಎಂಸಿ ಆವರಣದ ಕಟ್ಟಡವೊಂದರಲ್ಲಿ ನಡೆದಿದೆ.
ಅಪರಿಚಿತರು ಹಸಗೂಸನ್ನು ರಟ್ಟಿನ ಬಾಕ್ಸ್ನಲ್ಲಿಟ್ಟು ಅದರ ಮೇಲೆ ಬೆಡ್ಶೀಟ್ ಅನ್ನು ಮುಚ್ಚಿದ್ದಾರೆ. ಬಳಿಕ ಅದನ್ನು ತಂದು ಎಪಿಎಂಸಿ ಆವರಣದ ಕಟ್ಟಡವೊಂದರಲ್ಲಿ ಇಟ್ಟು ಹೋಗಿದ್ದಾರೆ. ಅಲ್ಲಿಯೇ ಇದ್ದ ಜನರಿಗೆ ಹಸಗೂಸಿನ ಅಳುವ ಶಬ್ದ ಕೇಳಿಸಿದೆ. ಬಳಿಕ ಆ ಡಬ್ಬಿಯನ್ನು ತೆರೆದು ನೋಡಿದಾಗ ಮಗು ಇದ್ದಿದ್ದು ಬೆಳಕಿಗೆ ಬಂದಿದೆ.
ತಕ್ಷಣ ಯುವಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಸಗೂಸನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಇನ್ನು ಪೋಷಕರಿಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರೆಸಿದ್ದಾರೆ. ಜನರು ಏನಾದ್ರೂ ಹಸಗೂಸನ್ನು ನೋಡದೇ ಹೋಗಿದ್ರೆ, ನಾಯಿ, ಹಂದಿಗಳ ಪಾಲಾಗುತ್ತಿತ್ತು. ಹಸುಗೂಸನ್ನ ಬಾಕ್ಸ್ನಲ್ಲಿಟ್ಟು ಹೋದ ಪಾಪಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post