ಗಾಂಧಿ ನಾಡು ಗುಜರಾತ್ನಲ್ಲಿ ಚುನಾವಣೆ ಕಾವು ರಂಗೇರಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಬಿಜೆಪಿ, ಕಾಂಗ್ರೆಸ್, ಆಪ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಗುಜರಾತ್ನಲ್ಲಿ ಆಡಳಿತ ಮುಂದುವರೆಸಲು ಪಣತೊಟ್ಟಿರುವ ಬಿಜೆಪಿ, ಘಟಾನುಘಟಿ ನಾಯಕರನ್ನು ಕರೆಸಿ, ಅಬ್ಬರದ ಪ್ರಚಾರ ನಡೆಸುತ್ತಿದೆ. ಸೂರತ್ನ ಖೇಡಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ.
ಕಾಂಗ್ರೆಸ್‌ಗೆ ಭಯೋತ್ಪಾದನೆಯೇ ವೋಟ್ ಬ್ಯಾಂಕ್
ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ
ದೇಶದ ಹಳೆಯ ಪಕ್ಷವಾದ ಕಾಂಗ್ರೆಸ್ ಭಯೋತ್ಪಾದನೆಯನ್ನೇ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಭಾರತೀಯ ಸೇನೆಯ ಸಾಹಸವನ್ನೇ ಪಕ್ಷ ಪ್ರಶ್ನಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಾಪ್ರಹಾರ ಮಾಡಿದ್ದಾರೆ. ಗುಜರಾತ್ ಈ ಹಿಂದೆ ಭಯೋತ್ಪಾದನೆಗೆ ಗುರಿಯಾಗಿತ್ತು. ಸೂರತ್ ಮತ್ತು ಅಹಮದಾಬಾದ್‌ನಲ್ಲಿ ನಡೆದ ಸ್ಫೋಟಗಳಲ್ಲಿ ಹಲವು ಜನರು ಸಾವನ್ನಪ್ಪಿದರು. ಆಗ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿತ್ತು. ಆದರೆ, ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದನೆಯ ಪಿಡುಗನ್ನು ದೇಶದಿಂದಲೇ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಭಯೋತ್ಪಾದನೆ ಕೂಡ ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಆಗಿದೆ. ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದೆ. ಕಾಂಗ್ರೆಸ್ ಒಂದೇ ಅಲ್ಲ, ಇದೇ ಮನಸ್ಥಿತಿ ಹೊಂದಿರುವ ಹಲವು ಪಕ್ಷಗಳು ಈಗಿವೆ..
ನರೇಂದ್ರ ಮೋದಿ, ಪ್ರಧಾನಿ
ಬಾಟ್ಲಾ ಎನ್ಕೌಂಟರ್ ಪ್ರಸ್ತಾಪಿಸಿ ಸೋನಿಯಾಗೆ ಟಾಂಗ್
ಇದೇ ವೇಳೆ ಬಾಟ್ಲಾ ಎನ್ ಕೌಂಟರ್ ಪ್ರಕರಣವನ್ನೂ ಉಲ್ಲೇಖಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರು ಭಯೋತ್ಪಾದಕರಿಗಾಗಿ ಕಣ್ಣೀರಿಟ್ಟಿದ್ದರು ಎಂದು ಸೋನಿಯಾ ಗಾಂಧಿ ಹೆಸರು ಉಲ್ಲೇಖಿಸದೇ ತಿವಿದಿದ್ದಾರೆ. ಕಾಂಗ್ರೆಸ್ ಒಂದೇ ಅಲ್ಲ, ವೋಟ್ ಬ್ಯಾಂಕ್ ಮನಸ್ಥಿತಿ ಹೊಂದಿರುವ ಹಲವು ಪಕ್ಷಗಳು ಈಗಿವೆ ಎಂದು ವಿಪಕ್ಷಗಳ ವಿರುದ್ಧವೂ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಬಾಟ್ಲಾಹೌಸ್ ಎನ್ಕೌಂಟರ್ ನಡೆದಿತ್ತು. ಆಗ, ಕಾಂಗ್ರೆಸ್ನ ಅಧ್ಯಕ್ಷರು ಭಯೋತ್ಪಾದಕರಿಗಾಗಿ ಕಣ್ಣೀರು ಸುರಿಸಿದ್ದರು.
ನರೇಂದ್ರ ಮೋದಿ, ಪ್ರಧಾನಿ
कांग्रेस आतंकवाद को वोटबैंक की नजर से देखती है, तुष्टिकरण की दृष्टि से देखती है। इससे देश को बहुत सतर्क रहने की जरूरत है। pic.twitter.com/tnIOAmSQd6
— Narendra Modi (@narendramodi) November 27, 2022
ಪ್ರಧಾನಿ ಸುಳ್ಳುಗಾರರ ಮುಖ್ಯಸ್ಥ.. ಮಲ್ಲಿಕಾರ್ಜುನ ಖರ್ಗೆ ಟಾಂಗ್
ಪ್ರಧಾನಿ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ತೀವ್ರವಾಗಿ ವಿರೋಧ ವ್ಯಕ್ತ ಪಡಿಸಿದೆ. ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿಯನ್ನು ಸುಳ್ಳುಗಾರರ ಅಧ್ಯಕ್ಷ ಎಂದು ಲೇವಡಿ ಮಾಡಿದ್ದಾರೆ. ಸಂತ್ರಸ್ತರಂತೆ ಆಡುವ ಮೂಲಕ ಪ್ರಧಾನಿ ಮೋದಿ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಒಟ್ಟಾರೆ, ಗುಜರಾತ್ನಲ್ಲಿ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ, ರಾಜಕೀಯ ನಾಯಕರ ವಾಕ್ಸಮರ ಕೂಡ ಜೋರಾಗ ತೊಡಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post