ಲಕ್ನೋ: ಜ್ಯುವೆಲರ್ ಅಂಗಡಿಗಳಲ್ಲಿ ಸಿಸಿಟಿವಿ ಇರ್ತಾವೆ ಅನ್ನೋದೇ ಮರೆತು ಕೆಲ ಕಳ್ಳರು ತಮ್ಮ ಕೈಚಳಕವನ್ನು ತೋರುತ್ತಾರೆ. ಇಂಥದೊಂದು ಘಟನೆ ಲಕ್ನೋದ ಗೋರಖ್ಪುರದ ಜ್ಯವೆಲರಿ ಶೋ ರೂಮ್ವೊಂದರಲ್ಲಿ ನಡೆದಿದ್ದು, ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗೋರಖ್ಪುರದ ಜ್ಯವೆಲರಿ ಶೋ ರೂಮ್ಗೆ ಆಂಟಿಯೊಬ್ಬಳು ಗುರುತು ಸಿಗಬಾರದೆಂದು ಕಣ್ಣಿಗೆ ಡಾರ್ಕ್ ಕಲರ್ ಗ್ಲಾಸ್, ಕೆಂಪು ಕಲರ್ ಮಾಸ್ಕ್ ಹಾಕೊಂಡು ಬಂದಿದ್ದಾರೆ. ಜ್ಯುವೆಲರಿಯಲ್ಲಿ ಚಿನ್ನ ಖರೀದಿ ಮಾಡುವಾಗೆ ಒಳ್ಳೆಯ ನ್ಯೂ ಮಾಡೆಲ್ ರೀತಿಯಾ ನಕ್ಲೇಸ್ ತೋರಿಸಿ ಎಂದು ಸಿಬ್ಬಂದಿಗೆ ಹೇಳಿದ್ದಾಳೆ. ಇದಕ್ಕೆ ಸಿಬ್ಬಂದಿ ನಾಲ್ಕೈದು ರೀತಿಯ ನಕ್ಲೇಸ್ಗಳನ್ನ ತಂದು ಮಹಿಳೆ ಮುಂದಿಟ್ಟಿದ್ದಾರೆ.
ಒಂದರ ಮೇಲೆ ಒಂದನ್ನು ಇಟ್ಟು ಚಿನ್ನದ ನಕ್ಲೇಸ್ ಎಸ್ಕೇಪ್..
ಅಷ್ಟೇ, ನೋಡಿ ಆಂಟಿಗೆ ಬಂಗಾರ ನೋಡಿ ತಲೆ ಗಿರ್ ಎಂದಿದೆ. ಅದಕ್ಕೆ ಮೊದಲು ಟೇಬಲ್ ಮೇಲಿನ ಒಂದು ನಕ್ಲೇಸ್ ಬಾಕ್ಸ್ ಓಪನ್ ಮಾಡಿ ನೋಡಿ ಮುಚ್ಚಿಡುತ್ತಾಳೆ. ಬಳಿಕ ಇನ್ನೊಂದು ನಕ್ಲೇಸ್ ಬಾಕ್ಸ್ ಓಪನ್ ಮಾಡಿ ಅದನ್ನು ಮುಚ್ಚಿರುವ ನಕ್ಲೇಸ್ ಬಾಕ್ಸ್ ಮೇಲೆ ಇಡುತ್ತಾಳೆ. ಆ ನಂತರ ಎರಡನ್ನೂ ಕಾಲ ಮೇಲೆ ಇಟ್ಕೊಂಡು ಸಿಬ್ಬಂದಿಯ ಕಣ್ತಪ್ಪಿಸಿ, ಸೀರೆಯಲ್ಲಿ ಬಾಕ್ಸ್ನ್ನ ಮರೆ ಮಾಡಿ, ತನ್ನ ಬ್ಯಾಗ್ ತಗೊಂಡು ಜ್ಯುವೆಲರಿ ಶಾಪ್ನಿಂದ ಎಸ್ಕೇಪ್ ಆಗಿದ್ದಾರೆ. ಈ ದೃಶ್ಯಗಳು ಜ್ಯುವೆಲರಿ ಶಾಪ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
गोरखपुर में काले चश्मे वाली महिला ने जूलरी शॉप में ऐसे पार किया सोने का हार pic.twitter.com/rqpzQGkw1n
— Samir Abbas (@TheSamirAbbas) November 26, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post