ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನದಿಂದ ಸಂಜು ಸ್ಯಾಮ್ಸನ್ರನ್ನ ಡ್ರಾಪ್ ಮಾಡಿದ ಒಂದು ಕ್ರಿಕೆಟ್ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಂಜುಗೆ ಕರಿಯರ್ ಅನ್ನೇ ಬಿಸಿಸಿಐ ಮುಗಿಸೋಕೆ ಹೊರಟಿದೆ ಅಂತಾ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇಷ್ಟೆಲ್ಲಾ ವಿರೋಧ ವ್ಯಕ್ತವಾಗುತ್ತೆ ಅಂತಾ ಗೊತ್ತಿದ್ದೂ ಬಿಸಿಸಿಐ ಈ ನಿರ್ಧಾರ ಮಾಡಿದ್ಯಾಕೆ ಗೊತ್ತಾ.?
ಸದ್ಯ ಭಾರತೀಯ ಕ್ರಿಕೆಟ್ ಲೋಕದಲ್ಲಿ ಒಂದೇ ಚರ್ಚೆ. ಅದೇ ಸಂಜು ಸ್ಯಾಮ್ಸನ್ ಭವಿಷ್ಯ, ಟ್ಯಾಲೆಂಟ್ ಇದೆ, ಸ್ಕಿಲ್ ಇದೆ, ತಾಖತ್ತು ಏನು ಅನ್ನೋದನ್ನ ನಿರೂಪಿಸಿಯೂ ಆಗಿದೆ. ಆದ್ರೆ, ಅದೃಷ್ಠವೇ ಕೈ ಹಿಡೀತಾ ಇಲ್ಲ. ಒಂದು ಪಂದ್ಯದಲ್ಲಿ ಆಡಿದ್ರೆ, ಮುಂದಿನ ಹತ್ತು ಪಂದ್ಯದಲ್ಲಿ ಬೆಂಚ್ಗೆ ಸೀಮಿತವಾಗ್ತಿದ್ದಾನೆ ಈ ನತದೃಷ್ಟವಂತ.
2ನೇ ಏಕದಿನ ಸಂಜುಗೆ ಕೊಕ್, ಫ್ಯಾನ್ಸ್ ಆಕ್ರೋಶ..
ಸಂಜು ಕೊಕ್ ಕೊಟ್ಟ ಹಿಂದಿದೆ ಬಲವಾದ ಕಾರಣ..
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸಿಡಿಸಿದ್ದು, 38 ಎಸೆತಗಳಲ್ಲಿ 36 ರನ್..! ಇದನ್ನ ಕಳಪೆ ಪರ್ಫಾಮೆನ್ಸ್ ಆನ್ನೋಕೆ ಸಾಧ್ಯಾನೇ ಇಲ್ಲ.. ಹೀಗಿದ್ರೂ ಸಂಜು ನಿನ್ನೆ ನಡೆದ ಏಕದಿನ ಪಂದ್ಯದಲ್ಲಿ ಬೆಂಚ್ಗೆ ಸೀಮಿತವಾಗಿದ್ರು. ಇದರ ಬೆನ್ನಲ್ಲೇ ಫ್ಯಾನ್ಸ್ ಬಿಸಿಸಿಐ, ಮ್ಯಾನೇಜ್ಮೆಂಟ್ ವಿರುದ್ಧ ಕಿಡಿ ಕಾರ್ತಿದ್ದಾರೆ. ಇದೀಗ ಡ್ರಾಪ್ ಮಾಡಿದರ ಹಿಂದಿನ ಅಸಲಿ ಕಾರಣವನ್ನ ನಾಯಕ ಶಿಖರ್ ಧವನ್ ರಿವೀಲ್ ಮಾಡಿದ್ದಾರೆ.
‘ನಮಗೆ 6ನೇ ಬೌಲರ್ ಅವಶ್ಯಕತೆ ಇತ್ತು. ಹೀಗಾಗಿ ನಾವು ಸಂಜು ಸ್ಯಾಮ್ಸನ್ರನ್ನ ಡ್ರಾಪ್ ಮಾಡಿ ದೀಪಕ್ ಹೂಡಾಗೆ ಅವಕಾಶ ನೀಡಿದ್ವಿ’
ಶಿಖರ್ ಧವನ್, ನಾಯಕ
ಟೀಮ್ ಇಂಡಿಯಾಗೆ ಕಾಡ್ತಿದೆ ಆಲ್ರೌಂಡರ್ಗಳ ಕೊರತೆ..
ಇದಕ್ಕೆಲ್ಲಾ ಕಾರಣ ಮ್ಯಾನೇಜ್ಮೆಂಟ್ ಮಾಡಿದ ಯಡವಟ್ಟು..
ಸಂಜುರನ್ನ ಡ್ರಾಪ್ ಮಾಡಿದ ರೀಸನ್, ಒಬ್ಬ ಆಲ್ರೌಂಡರ್ ಬೇಕು ಅನ್ನೋದಷ್ಟೇ. 6ನೇ ಬೌಲರ್ ಬೇಕು ಅನ್ನೋ ಕಾರಣಕ್ಕೆ ಸಂಜುರನ್ನ ಡ್ರಾಪ್ ಮಾಡಿದ್ದು ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲವೇ ಅಲ್ಲ. ಇದೇ ಸಂದರ್ಭದಲ್ಲಿ ಆಲ್ರೌಂಡರ್ಗಳ ಕೊರತೆ ಟೀಮ್ ಇಂಡಿಯಾವನ್ನ ಕಾಡ್ತಿದೆ ಅನ್ನೋ ಸತ್ಯವನ್ನ ಒಪ್ಪದೆ ಇರೋಕಾಗಲ್ಲ. ಕೆಲ ದಿನಗಳ ಹಿಂದೆ ಹಾರ್ದಿಕ್ ಪಾಂಡ್ಯ ಹೇಳಿದ್ದೂ ಇದೇ ಮಾತನ್ನೇ. ಅಸಲಿಗೆ ಈ ಸಮಸ್ಯೆ ಸೃಷ್ಠಿಯಾಗಿರೋದ್ರ ನೇರ ಹೊಣೆಯನ್ನ ಟೀಮ್ ಮ್ಯಾನೇಜ್ಮೆಂಟ್ ಹೊರಬೇಕಿದೆ.
ಆಲ್ರೌಂಡರ್ಗಳನ್ನ ಗ್ರೂಮ್ ಮಾಡುವಲ್ಲಿ ವಿಫಲ..
ಟ್ಯಾಲೆಂಟ್ ಇರೋ ಆಟಗಾರರಿಗೆ ಸಿಗಲ್ಲ ಹೆಚ್ಚಿನ ಅವಕಾಶ..
ವಿಜಯ್ ಶಂಕರ್, ವೆಂಕಟೇಶ್ ಅಯ್ಯರ್, ಶಿವಮ್ ದುಬೆ, ಕೃನಾಲ್ ಪಾಂಡ್ಯ.. ಹೀಗೆ ಟೀಮ್ ಇಂಡಿಯಾಗೆ ಕಳೆದ 2 ವರ್ಷಗಳಲ್ಲಿ ಎಂಟ್ರಿ ಕೊಟ್ಟ ಆಲ್ರೌಂಡ್ ಆಟಗಾರರ ಪಟ್ಟಿ ದೊಡ್ಡದಿದೆ. ಆದ್ರೆ, ಇವರ್ಯಾರು ಈಗ ತಂಡದಲ್ಲಿಲ್ಲ. ಒಂದು ವೈಫಲ್ಯ ಕಂಡರೆ ಸಾಕು, ಮತ್ತೆ ಅವಕಾಶ ಸಿಗಲ್ಲ ಅನ್ನೋದಕ್ಕೆ ಇವರೇ ಸಾಕ್ಷಿ. ಅಂದು ಸ್ವಲ್ಪ ತಾಳ್ಮೆಯಿಂದ ಇವರು ಮಾಡಿದ ತಪ್ಪನ್ನ ತಿದ್ದಿ ಬೆಳೆಸಿದ್ರೆ, ಆಲ್ರೌಂಡರ್ ಕೊರತೆ ಈಗ ಕಾಡ್ತಾನೇ ಇರಲಿಲ್ಲ. ಜೂನಿಯರ್ ಕ್ರಿಕೆಟ್ನಲ್ಲಿರೋ ಆಟಗಾರರನ್ನ ಹೈಯೆಸ್ಟ್ ಸ್ಟ್ಯಾಂಡರ್ಡ್ ಕ್ರಿಕೆಟ್ ಆಡುವಂತೆ ಬೆಳೆಸೋ ಗೋಜಿಗಂತೂ ಹೋಗ್ತಾನೆ ಇಲ್ಲ.
ನೆಟ್ಸ್ನಲ್ಲಿ ಬೌಲಿಂಗ್ ಮಾಡೋದನ್ನೆ ನಿಲ್ಲಿಸಿದ ಬ್ಯಾಟರ್ಸ್..
ವಿಶ್ವ ಕ್ರಿಕೆಟ್ನ ಶ್ರೀಮಂತ ಸಂಸ್ಥೆ ಟೀಮ್ ಇಂಡಿಯಾಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ನೀಡಿದೆ. ಅಭ್ಯಾಸಕ್ಕೆ ಥ್ರೋ ಡೌನ್ ಸ್ಪೆಷಲಿಸ್ಟ್, ಬೌಲಿಂಗ್ ಮಷೀನ್ ಎಲ್ಲವೂ ಇವೆ. ಈ ಟೆಕ್ನಾಲಜಿಯೇ ಈಗ ಮುಳುವಾಗಿದೆ. ಯಾಕಂದ್ರೆ, ಟೀಮ್ ಇಂಡಿಯಾದ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ನೆಟ್ಸ್ನಲ್ಲಿ ಬೌಲಿಂಗ್ ಅನ್ನೇ ಮಾಡ್ತಿಲ್ಲ. ಹೀಗಾಗಿಯೇ ಪಾರ್ಟ್ ಟೈಮ್ ಬೌಲಿಂಗ್ ಆಯ್ಕೆಯೇ ಇಲ್ಲದಂತಾಗಿದೆ. ಒಬ್ಬ ಬೌಲಿಂಗ್ ಅಲ್ರೌಂಡರ್ ಬೇಕಂದ್ರೆ, ಬ್ಯಾಟ್ಸ್ಮನ್ಗೆ ಕೊಕ್ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
ರೋಲ್ ಬಗ್ಗೆ ಕೊಡಲ್ಲ ಸ್ಪಷ್ಟತೆ, ಗೊಂದಲಕ್ಕಿಲ್ಲ ಬ್ರೇಕ್..
ಹೌದು, ಟೀಮ್ ಇಂಡಿಯಾಗೆ ಕಳೆದ 2 ವರ್ಷದಲ್ಲಿ ಎಂಟ್ರಿ ಕೊಟ್ಟ ಅದೆಷ್ಟೋ ಬೌಲಿಂಗ್ ಆಲ್ರೌಂಡರ್ಗಳಿಗೆ ಅನ್ಯಾಯವಾಗಿದ್ದೇ ಇಲ್ಲ. ಐಪಿಎಲ್ನಲ್ಲೋ, ದೇಶಿ ಕ್ರಿಕೆಟ್ನಲ್ಲೂ ಪರ್ಫಾಮ್ ಮಾಡಿ ಟೀಮ್ ಇಂಡಿಯಾಗೆ ಎಂಟ್ರಿ ಕೊಡೋ ಇವರಿಗೆ ಪ್ಲೇಯಿಂಗ್ ರೋಲ್ ಬಗ್ಗೆ ಸ್ಪಷ್ಟತೆಯೇ ಇರಲ್ಲ. ವೆಂಕಟೇಶ್ ಅಯ್ಯರ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಐಪಿಎಲ್ನಲ್ಲಿ ಆರಂಭಿಕನಾಗಿ ಅಬ್ಬರಿಸಿದ ವೆಂಕಿಯನ್ನ ಟೀಮ್ ಇಂಡಿಯಾದಲ್ಲಿ ಲೋವರ್ ಆರ್ಡರ್ನಲ್ಲಿ ಆಡಿಸಿದ್ರು. ಪ್ಲಾಫ್ ಆದ ತಕ್ಷಣ ಗೇಟ್ಪಾಸ್ ನೀಡಿದ್ರು. ಇಂತಾ ಗೊಂದಲಗಳೇ ಇನ್ನೂ ಹಲ ಆಟಗಾರರ ಕರಿಯರ್ಗೆ ಮುಳ್ಳಾಗಿವೆ.
ಒಟ್ಟಿನಲ್ಲಿ, ಮ್ಯಾನೇಜ್ಮೆಂಟ್ ಮಾಡ್ತಿರೋ ಯಡವಟ್ಟುಗಳು ಟೀಮ್ ಇಂಡಿಯಾಗೆ ಹಿನ್ನಡೆಯುಂಟು ಮಾಡ್ತಿರೋದಂತೂ ಸುಳ್ಳಲ್ಲ.. ಮುಂದಾದ್ರೂ, ಮ್ಯಾನೇಜ್ಮೆಂಟ್ ಈ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾ.? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post