ಕೆ.ಎಲ್.ರಾಹುಲ್ ಸೇರಿದಂತೆ ಟೀಂ ಇಂಡಿಯಾದಿಂದ ನಾಲ್ಕೈದು ಹಿರಿಯ ಆಟಗಾರರಿಗೆ ನ್ಯೂಜಿಲೆಂಡ್ ಟೂರ್ನಿಂದ ಬ್ರೇಕ್ ನೀಡಲಾಗಿತ್ತು. ಡಿಸೆಂಬರ್ 4 ರಿಂದ ಬಾಂಗ್ಲಾ ವಿರುದ್ಧ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ರೋಹಿತ್, ಕೊಹ್ಲಿ ಅಭ್ಯಾಸ ನಡೆಸಿದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ತಂಡದ ಉಪನಾಯಕ ಕೆ.ಎಲ್.ರಾಹುಲ್ ಸರದಿ.
ಟೆಂಪಲ್ ರನ್ನಲ್ಲಿ ಬ್ಯೂಸಿಯಾಗಿದ್ದ ರಾಹುಲ್, ಇದೀಗ ವರ್ಕೌಟ್ ಶುರುಮಾಡಿದ್ದಾನೆ. ವಿಶೇಷ ಅಂದರೆ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ಸ್ಟಾರ್ ಜಾಹ್ನವಿ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೇನು ಮೊನ್ನೆ ಅಥಿಯಾ ಜೊತೆ ರಾಹುಲ್ ಸುತ್ತಾಡಿ ಈಗ ಜಾಹ್ನವಿ ಜೊತೆ ಇದ್ದಾರೆಂದು ಶಾಕ್ ಆಗುವುದೇನು ಬೇಡ. ವಿಷಯ ಏನಂದ್ರೆ ರಾಹುಲ್ ಮತ್ತು ಜಾಹ್ನವಿ ಒಂದೇ ಜಿಮ್ನಲ್ಲಿ ವರ್ಕ್ಔಟ್ ಮಾಡ್ತಿದ್ದಾರೆ ಅಷ್ಟೇ.
ಕೆ.ಎಲ್.ರಾಹುಲ್ ಜಿಮ್ನಲ್ಲಿ ಫಿಟ್ನೆಸ್ ಮಾಡುತ್ತಿರೋ ಒಂದು ಪೋಟೋ 3 ವಿಡಿಯೋಗಳನ್ನ ಪೋಸ್ಟ್ ಮಾಡಿದ್ದಾರೆ. ಒಂದು ವಿಡಿಯೋದಲ್ಲಿ ರಾಹುಲ್ ವರ್ಕ್ಔಟ್ ಮಾಡ್ತಿದ್ದಾರೆ. ಮತ್ತೊಂದು ಸೈಡ್ನಲ್ಲಿ ಜಾಹ್ನವಿ ಹಾದು ಹೋಗ್ತಾರೆ. ಇದನ್ನೇ ಟ್ರೋಲ್ ಹೈಕ್ಳು ರಾಹುಲ್ರನ್ನ ಪ್ರಶ್ನೆ ಮಾಡಲು ಶುರುಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
— K L Rahul (@klrahul) November 24, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post