ರಾಜ್ಯ ಕಾಂಗ್ರೆಸ್ನಲ್ಲಿ ಬಣ ಬಡಿದಾಟ ಹಳೇದು. ಆಗಾಗ ಮುಂದಿನ ಮುಖ್ಯಮಂತ್ರಿ ಕದನವೂ ಮುನ್ನೆಲೆಗೆ ಬರ್ತಿರುತ್ತೆ. ಅದರಲ್ಲೂ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ನೆಕ್ಸ್ಟ್ ಸಿಎಂ ಫೈಟ್ ನಡೀತಾನೇ ಇರುತ್ತೆ. ಮತ್ತೊಮ್ಮೆ ಈ ವಾರ್ ಶುರುವಾಗಿದೆ. ಖುದ್ದು ಕೆಪಿಸಿಸಿ ಅಧ್ಯಕ್ಷರ ಮಾತಿನಿಂದಲೇ ಆರಂಭ ಸಿಕ್ಕಿದೆ.
2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಜೋರಾಗೇ ನಡೀತಿದೆ. ಈ ನಡುವೆ ಮುಂದಿನ ಸಿಎಂ ಚರ್ಚೆಯೂ ಶುರುವಾಗಿದೆ. ಒಳಗಿದ್ದ ಕನಸು, ಇದೀಗ ಮಾತಿನ ಮೂಲಕ ಹೊರಬಿದ್ದಿದೆ. ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಗಾಗಿ ಡಿ.ಕೆ ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ಶುರುವಾಗಿದೆ.
ಮುಂದಿನ ಮುಖ್ಯಮಂತ್ರಿ ಅನ್ನೋ ಮಾತಿನ ಮಲ್ಲಯುದ್ಧಕ್ಕೆ ಬಾಂಡ್ಲಿ ಇಟ್ಟು ಎಣ್ಣೆ ಹಾಕಿ ಅಡುಗೆ ಶುರು ಮಾಡಿರೋದು ಬೇಱರು ಅಲ್ಲ. ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.. ಬಳಿಕ ಇದಕ್ಕೆ ಸಿದ್ದರಾಮಯ್ಯ ಆಪ್ತ ನಾಯಕರು ಒಗ್ಗರಣೆ ಹಾಕಿದ್ದಾರೆ. ಪರಿಣಾಮ ಕಾಂಗ್ರೆಸ್ನ ಬಣ ತಿಕ್ಕಾಟದ ಘಮ ಎಲ್ಲೆಡೆ ಜಗಜ್ಜಾಹೀರಾಗುವಂತೆ ಮಾಡಿದೆ.
ನಿನ್ನೆ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ಸಭೆ ನಡೀತು. ಈ ವೇಳೆ ಮಾತಾಡಿದ ಡಿಕೆ ಶಿವಕುಮಾರ್, ಮೀಸಲಾತಿಗಾಗಿ ಒಗ್ಗಟ್ಟಿನ ಹೋರಾಟ ಮಾಡೋಣ ಅಂತಾ ಹೇಳಿದ್ರು. ಜೊತೆಗೆ ನಾನು ಜೈಲಿಗೆ ಹೋಗಿದ್ದಾಗ ಜೊತೆಗೆ ನಿಂತಿದ್ರಿ, ಅಧಿಕಾರ ಕೊಡೋದು ಬಿಡೋದು ಸಮುದಾಯಕ್ಕೆ ಬಿಟ್ಟಿದ್ದು ಅಂತಾ ಪರೋಕ್ಷವಾಗಿ ಸಿಎಂ ಆಗುವ ಕನಸು ಬಿಚ್ಚಿಟ್ಟಿದ್ದಾರೆ.
ಹೀಗೆ ಅಧಿಕಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷರು, ಬೆಳಕು ಚೆಲ್ಲಿದ ಬೆನ್ನಲ್ಲೇ ಕಾಂಗ್ರೆಸ್ ಕೋಟೆಯಲ್ಲಿ ಸಿಎಂ ಕುರ್ಚಿ ಗುದ್ದಾಟ ಮತ್ತೊಮ್ಮೆ ಸದ್ದು ಮಾಡೋದಕ್ಕೆ ಶುರುಮಾಡಿದೆ. ಡಿ.ಕೆ ಶಿವಕುಮಾರ್ ಮಾತಿಗೆ ಕೌಂಟರ್ ಕೊಡೋದಕ್ಕೆ ಸಿದ್ದರಾಮಯ್ಯ ಬೆಂಬಲಿಗರು ನಮ್ಮ ನಾಯಕ ಸಿಎಂ ಆಗಬೇಕೆಂದು ಜಪ ಶುರು ಮಾಡಿದ್ರು. ಕನಕದಾಸ ಜಯಂತಿಯಲ್ಲಿ ಇಂಥದ್ದೊಂದು ಆಸೆ, ಆಕಾಂಕ್ಷೆ ವ್ಯಕ್ತವಾಗಿದೆ.
ಹೀಗೆ, ಕಾಂಗ್ರೆಸ್ನಲ್ಲಿ ಮುಂದಿನ ಮುಖ್ಯಮಂತ್ರಿ ಕಾಳಗ ಮತ್ತೊಮ್ಮೆ ಶುರುವಾಗಿದೆ. ಅತ್ತ ಒಕ್ಕಲಿಗರ ಕಾರ್ಯಕ್ರಮದಲ್ಲಿ ಡಿಕೆಶಿ ಮನದ ಮಾತು ಹೊರಬಿದ್ದಿದ್ರೆ, ಇತ್ತ ಕನಕದಾಸ ಜಯಂತಿಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ತಮ್ಮ ನಾಯಕನ ಮಂತ್ರಪಠಣ ಮಾಡಿದ್ದಾರೆ. ಸೋ ಕಾಂಗ್ರೆಸ್ನಲ್ಲಿ ಮತ್ತೆ ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ಶುರುವಾಗಿದೆ. ಈ ಬಾರಿ ಇದು ಇನ್ನೆಲ್ಲಿಗೆ ತಲುಪುತ್ತೋ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post