ಮತ್ತೆ ಗಡಿ ಖ್ಯಾತೆ ತೆಗೆದಿರುವ ಮಹಾರಾಷ್ಟ್ರಕ್ಕೆ ಕಾನೂನಿನ ಮೂಲಕವೇ ತಕ್ಕ ಉತ್ತರ ನೀಡಲು ಕರ್ನಾಟಕವೂ ಸಿದ್ಧವಾಗಿದೆ. ಬುಧವಾರದಿಂದ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಶುರುವಾಗಲಿದ್ದು, ಕಾನೂನು ತಜ್ಞರೊಂದಿಗೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ರು. ಈ ಸಭೆಯ ಮೂಲಕ ಮಹಾರಾಷ್ಟ್ರಕ್ಕೆ ಖಡಕ್ ಸಂದೇಶವನ್ನೂ ರವಾನಿಸಿದ್ದಾರೆ.
ಕಾನೂನು ತಜ್ಞರೊಂದಿಗೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ
ಕರ್ನಾಟದಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿ ಇದೇ 30 ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಹಿನ್ನೆಲೆ ಕಾನೂನು ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದರು. ಈ ಮೂಲಕ ಗಡಿ ಖ್ಯಾತೆ ತೆಗೆದಿರುವ ಮಹಾರಾಷ್ಟ್ರಕ್ಕೆ ಖಡಕ್ ಸಂದೇಶವನ್ನು ರವಾನಿಸಿದ್ರು.
ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ.ವಿ. ಪಾಟೀಲ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 2004ರಲ್ಲಿ ಮಹಾರಾಷ್ಟ್ರ ಸರ್ಕಾರ ದಾವೆ ಹೂಡಿದ ನಂತರ ಇದುವರೆಗೂ ಏನೇನಾಗಿದೆ? ಯಾವ ಪ್ರಮುಖ ಅಂಶ ಹಿಂದೆಲ್ಲಾ ನಡೆದಿದೆ.? ವಿಚಾರಣೆ ವೇಳೆ ಬರುವ ವಿಚಾರಗಳೇನು? ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ.
ನೆಲ, ಗಡಿ ರಕ್ಷಣೆಗೆ ಕಾನೂನು ಸಮರಕ್ಕೆ ಸಿದ್ಧ
ಮಹಾ ಗಡಿ ಖ್ಯಾತೆಗೆ ಸಿಎಂ ಖಡಕ್ ಸಂದೇಶ
ಸಭೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ದೆಹಲಿಗೆ ಭೇಟಿ ನೀಡಲಿದ್ದು, ಸುಪ್ರೀಂಕೋರ್ಟ್ ಖಡಕ್ ವಾದ ಮಂಡಿಸುವ ಬಗ್ಗೆ ಹಿರಿಯ ವಕೀಲಾರ ಮುಕುಲ್ ರೋಹ್ಟಗಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇವೆ. ನಮ್ಮ ಗಡಿ, ನಮ್ಮ ನೆಲದ ರಕ್ಷಣೆಗೆ ಹೋರಾಟ ಮಾಡಲು, ಕಾನೂನು ಸಮರ ಮಾಡಲು ನಾವು ಎಲ್ಲ ರೀತಿಯಲ್ಲಿಯೂ ಸಿದ್ಧವಿದ್ದೇವೆ. ಇವತ್ತು ವಿಪಕ್ಷ ನಾಯಕರ ಜೊತೆ ಮಾತನಾಡಿ, ನಾಲ್ಕೈದು ದಿನಗಳಲ್ಲಿ ಸರ್ವಪಕ್ಷ ಸಭೆ ಕರೆಯುವುದಾಗಿ ಸಿಎಂ ತಿಳಿಸಿದ್ರು.
ಒಟ್ಟಾರೆ, ಗಡಿ ವಿಚಾರದಲ್ಲಿ ಕಾನೂನು ಸಮರಕ್ಕೆ ರಾಜ್ಯ ಸರ್ಕಾರವೂ ಕೂಡ ಸಿದ್ಧವಾಗಿದ್ದು, ಸುಪ್ರೀಂಕೋರ್ಟ್ನಲ್ಲಿ ಪ್ರಖರವಾದ ವಾದವನ್ನು ಮಂಡಿಸಿ, ಮಹಾರಾಷ್ಟ್ರದ ಗಡಿ ತಗಾದೆಗೆ ಬ್ರೇಕ್ ಹಾಕಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post