ಉಡುಪಿ: ತರಗತಿಯೊಳಗೆ ವಿದ್ಯಾರ್ಥಿಗೆ ‘ಟೆರರಿಸ್ಟ್’ ಎಂದು ನಿಂದಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಉಪನ್ಯಾಸಕರೊಬ್ಬರನ್ನ ಅಮಾನತು ಮಾಡಲಾಗಿದೆ. ಮಾಹೆ ವಿಶ್ವವಿದ್ಯಾಲಯದ (Manipal Academy of Higher Education)ನ ಎಂಐಟಿ (Manipal Institute of Technology) ಕಾಲೇಜಿನ ಉಪನ್ಯಾಸಕರೊಬ್ಬರನ್ನ ಅಮಾನತು ಮಾಡಲಾಗಿದೆ.
ಅಮಾನತು ಆದ ಉಪನ್ಯಾಸಕರು ನವೆಂಬರ್ 26 ರಂದು ವಿದ್ಯಾರ್ಥಿಯೋರ್ವರಿಗೆ ಟೆರರಿಸ್ಟ್ ಎಂದು ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಮತ್ತು ಪ್ರೊಫೆಸರ್ ಮಧ್ಯೆ ನಡೆದ ಮಾತುಕತೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ವರದಿಗಳ ಪ್ರಕಾರ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಮುಸ್ಲಿಮರು ಟೆರರಿಸ್ಟ್ಗಳು ಎಂಬರ್ಥ ದಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಮುಸ್ಲಿಂ ವಿದ್ಯಾರ್ಥಿಯೊಬ್ಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಕಮ್ಯೂನಿಟಿಯನ್ನು ಟೆರರಿಸ್ಟ್ ಎಂದು ಕರೆಯಬೇಡಿ. ಅನಗತ್ಯವಾಗಿ ತಮಾಷೆ ಮಾಡಬೇಡಿ ಎಂದಿದ್ದಾರೆ. ಆಗ ಪ್ರೊಫೆಸರ್ ಆತನ ಬಳಿ ಕ್ಷಮೆ ಕೇಳಿದ್ದಾರೆ.
ಅದಕ್ಕೆ ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ ಎಂದು ವಿದ್ಯಾರ್ಥಿ ಹೇಳಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಉಪನ್ಯಾಸಕನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಉಪನ್ಯಾಸಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ಮಾಹೆ ವಿವಿ ನಿರ್ಧರಿಸಿದೆ. ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಸಾಂತ್ವನ ಹೇಳಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ..?
ವಿದ್ಯಾರ್ಥಿ: ಸರ್, ಇದು ತಮಾಷೆ ಅಲ್ಲ. ನೀವು ನನ್ನನ್ನು ಭಯೋತ್ಪಾದಕ ಎಂದು ಕರೆಯಲು ಸಾಧ್ಯವಿಲ್ಲ. ನಿಮ್ಮ ಮಗನ ಜೊತೆ ಹೀಗೆ ಮಾತನಾಡ್ತೀರಾ..? ನೀವು ನನ್ನನ್ನು ಹಾಗೆ ಕರೆಯುವುದಾದರೂ ಹೇಗೆ? ಅದು ಇಷ್ಟು ಜನರ ಮುಂದೆ? ತರಗತಿಯಲ್ಲಿ.. ನೀವು ವೃತ್ತಿಪರರು.. ನೀವು ನನಗೆ ಪಾಠ ಮಾಡ್ತಿದ್ದೀರಿ..
ಪ್ರೊಫೆಸರ್: ಕ್ಷಮಿಸಿ
ವಿದ್ಯಾರ್ಥಿ: ಕ್ಷಮಿಸಿ, ಇಲ್ಲಿ ನೀವು ಹೇಗೆ ಯೋಚಿಸುತ್ತೀರಿ.. ನೀವು ಹೇಳುವುದನ್ನ ಬದಲಾಯಿಸಲು ಆಗಲ್ಲ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post