ರಾಜ್ಯ ರಾಜಕೀಯದಲ್ಲಿ ರೌಡಿಶೀಟರ್ ಸೈಲೆಂಟ್ ಸುನಿಲನ ಬಗ್ಗೆ ಭಾರೀ ಚರ್ಚೆಗಳು ಶುರುವಾಗಿವೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂಬ ಮಾತುಗಳ ಮಧ್ಯೆ ಪರ-ವಿರೋಧಗಳ ಕುರಿತು ವಾದಗಳು ಶುರುವಾಗಿವೆ.
ಇದೇ ವಿಚಾರಕ್ಕೆ ಸಂಬಂಧಿಸಿ ನಗರದಲ್ಲಿ ಸಚಿವ ಅಶ್ವಥ್ ನಾರಾಯಣ್ ಮಾತನಾಡಿ..ಕಾನೂನಲ್ಲಿ ತಪ್ಪು ಮಾಡಿದ್ರೆ ಯಾರೇ ಮಾಡಿದರೂ ತಪ್ಪೇ. ನಮ್ಮ ಕಾನೂನಲ್ಲಿ ಎಲ್ಲರಿಗೂ ಒಳ್ಳೆ ರೀತಿಯಲ್ಲಿ ಬದುಕಿ ಬಾಳಲು ಅವಕಾಶ ಇದೆ. ಯಾವುದೇ ರೀತಿಯ ಶಿಕ್ಷೆ ಅಥವಾ ಸಂಕಷ್ಟ ಇದ್ದರೆ ನಾವು ಅದನ್ನ ಪರಿಗಣಿಸಬಹುದು.
ಇದ್ಯಾವುದೂ ಇಲ್ಲದ ವ್ಯಕ್ತಿಗಳನ್ನ ಪದೇ ಪದೆ ನಿಂದಿಸುವಂತಹ ಅವಕಾಶವನ್ನ ಮಾಡಿಕೊಡಬಾರದು ಎಂದರು.
ಇದನ್ನೂ ಓದಿ: ಸೈಲೆಂಟ್ ಸುನೀಲ್ ರಾಜಕೀಯ ಯಾತ್ರೆ ಶುರು- ಮಾಜಿ ರೌಡಿಗೆ ಶುಭ ಕೋರಿದ ಬಿಜೆಪಿ ನಾಯಕರು..
ಕಾನೂನಲ್ಲಿ ತಪ್ಪಾಗಿದ್ದಾರೆ ಅದು ತಪ್ಪೇ. ಕಾನೂನಲ್ಲಿ ಶಿಕ್ಷೆಯಾಗಿದ್ದರೆ ಅಂತವರಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಇಲ್ಲ. ಕಾನೂನಲ್ಲಿ ಏನೆಲ್ಲಾ ಅವಕಾಶ ಇದೆ ಅದನ್ನ ಮಾತ್ರ ನಾವು ಮಾಡಲು ಆಗುತ್ತೆ. ಅದನ್ನ ಬಿಟ್ಟು ಏನೂ ಮಾಡೋಕೆ ಆಗಲ್ಲ. ಯಾವುದೇ ಒಂದು ವ್ಯಕ್ತಿಗೆ ಮುಕ್ತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು. ಅದಕ್ಕೆ ಕಾನೂನಲ್ಲೇ ಅವಕಾಶ ಇದೆ. ಕಾನೂನು ಚೌಕಟ್ಟಿನಲ್ಲಿ ಎಲ್ಲಾ ವ್ಯಕ್ತಿಗಳು ಕೆಲಸ ಮಾಡಬೇಕು ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post