ಓ ಗುಣವಂತ ಎನ್ನುತ್ತಾ ಇಡೀ ಸ್ಯಾಂಡಲ್ವುಡ್ಗೆ ಪರಿಚಯವಾದವರು ನೆನಪಿರಲಿ ಪ್ರೇಮ್. ಲವ್ಲಿ ಸ್ಟಾರ್ ಪ್ರೇಮ್ ಎಂದೇ ಕನ್ನಡದಲ್ಲಿ ಖ್ಯಾತಿ ಪಡೆದಿರೋ ನಟ. ಸದ್ಯ ಇವರ ಮನೆಯ ಒಂದು ಬಿಸಿ ಬಿಸಿ ಸುದ್ದಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹರಡುತ್ತಿದೆ. ಅದು ಏನ್ ಅಂದ್ರೆ,…
ಲವ್ಲಿ ಸ್ಟಾರ್ ಪ್ರೇಮ್ ಅವರ ಪುತ್ರಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಿದ್ದಾರಂತೆ. ಪ್ರೇಮ್ ಅವರ ಮುದ್ದಿನ ಮಗಳು ಅಮೃತಾ ಪ್ರೇಮ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅಮೃತಾ ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ವೊಂದರಲ್ಲಿ ಫೈನಲ್ ಇಯರ್ ಇಂಜಿನಿಯರಿಂಗ್ ಓದುತ್ತಿದ್ದಾರೆ. ಇನ್ನು ಯಾವ ಸಿನಿಮಾದಲ್ಲಿ ಅಮೃತಾ ಅಭಿನಯಿಸ್ತಾರೆ ಎಂಬುದು ಗುಟ್ಟಾಗೇನು ಉಳಿದಿಲ್ಲ.
ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಸಿನಿಮಾಕ್ಕೆ ಅಮೃತಾ ಪ್ರೇಮ್ ನಾಯಕಿಯಾಗಿ ಕಾಣಿಸುಕೊಳ್ಳುತ್ತಿದ್ದಾರೆ. ಅದು ಬೇರೆ ಹಳ್ಳಿ ಹುಡ್ಗಿ ಸ್ಟೈಲ್ನಲ್ಲಿ. ಈ ಪಾತ್ರಕ್ಕೆ ಅಮೃತಾನೇ ಕರೆಕ್ಟ್ ಎಂದು ನಿರ್ದೇಶಕ ಉಮೇಶ್ ಕೆ. ಕೃಪಾ ಹೇಳಿದ್ದಾರಂತೆ. ಹೀಗಾಗಿಯೇ ಟಗರು ಪಲ್ಯ ಸಿನಿಮಾದ ನಟ ನಾಗಭೂಷಣ್ ಜೊತೆಯಾಗಿ ಅಮೃತಾ ಅಭಿನಯಿಸಲಿದ್ದಾರೆ.
ಈ ಬಗ್ಗೆ ಇನ್ಸ್ಟಾದಲ್ಲಿ ನೆನಪಿರಲಿ ಪ್ರೇಮ್ ತಮ್ಮ ಮಗಳ ಕ್ಯೂಟ್ ಆಗಿರೋ ಪೋಟೋಗಳನ್ನ ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ. ನನ್ನ ಮಗುವನ್ನ ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ, ನಿಮ್ಮ ಆಶೀರ್ವಾದ, ಪ್ರೀತಿ, ಪ್ರೋತ್ಸಾಹ, ಅಭಿಮಾನವಿರಲಿ. ಸದಾ ನೆನಪಿರಲಿ ಪ್ರೇಮ್ ಎಂದು ಹೇಳಿದ್ದಾರೆ. ಇನ್ನು ಡಾಲಿ ಧನಂಜಯ್ಗೂ ಥ್ಯಾಂಕ್ಸ್ ಹೇಳಿದ್ದಾರೆ.
ಅಮೃತಾ ಪ್ರೇಮ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುವುದರೊಂದಿಗೆ ನೆನಪಿರಲಿ ಪ್ರೇಮ್ ಅವರ ಇಬ್ಬರು ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತೆ ಆಗುತ್ತದೆ. ಇನ್ನು ಚರಣ್ ನಟನೆಯ ಗುರುಶಿಷ್ಯರು ಸಿನಿಮಾದಲ್ಲಿ ಪ್ರೇಮ್ ಅವರ ಮಗ ಚರಣ್ಗೆ ಶಿಷ್ಯನಾಗಿ ನಟಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post