ಬಿಜೆಪಿ ಜನಸಂಕಲ್ಪ ಯಾತ್ರೆ ನಡುವೆ ಜೆಡಿಎಸ್ ಪಂಚರತ್ನ ರಥಯಾತ್ರೆ 10ನೇ ದಿನಕ್ಕೆ ಕಾಲಿಟ್ಟಿದೆ. ಚಿಕ್ಕಬಳ್ಳಾಪುರದ ಹಲವು ಗ್ರಾಮಗಳಲ್ಲಿ ಕುಮಾರಸ್ವಾಮಿ ಭರ್ಜರಿ ರೋಡ್ಶೋ ಮೂಲಕ ಜನರ ಮನಗೆಲ್ಲುವ ಕಸರತ್ತು ನಡೆಸಿದ್ದಾರೆ. ಬರದನಾಡು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅದ್ಧೂರಿ ಪಂಚರತ್ನಯಾತ್ರೆ. ಕಿಲೋ ಮೀಟರ್ಗಟ್ಟಲೇ ನೆರೆದಿರುವ ಜೆಡಿಎಸ್ ಅಭಿಮಾನಿಗಳು ಹಾಗೂ ಕಾರ್ಯಕರ್ತರು. ಎಲ್ಲೆಲ್ಲೂ ಜೆಡಿಎಸ್ ಬಾವುಟಗಳ ಹಾರಾಟ. ಪಂಚರತ್ನಯಾತ್ರೆಗೆ ವಾದ್ಯಮೇಳಗಳ ಮೆರುಗು.
ಹೆಚ್.ಡಿ.ಕುಮಾರಸ್ವಾಮಿಗೆ ಬೃಹತ್ ಕ್ಯಾಪ್ಸಿಕಮ್ ಹಾಗೂ ಸೇಬಿನ ಹಾರದ ಸ್ವಾಗತ. ಜೊತೆಗೆ ಪೂರ್ಣಕುಂಭದೊಂದಿಗೆ ಹೂಮಳೆ ಸುರಿಸುವ ಮೂಲಕ ಜನರಿಂದ ಭರ್ಜರಿ ಸ್ವಾಗತ.. ಮುಂದಿನ ಮುಖ್ಯಮಂತ್ರಿ ಕುಮಾರಣ್ಣ..ಕುಮಾರಣ್ಣ ಘೋಷಣೆ.. ಇದೆಲ್ಲಾ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ.
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ 10ನೇ ದಿನದ ಯಾತ್ರೆ!
‘ದಳಪತಿ’ಗಳಿಗೆ ಹಳ್ಳಿಹಳ್ಳಿಗಳಲ್ಲೂ ಭರ್ಜರಿ ಸ್ವಾಗತ!
ಜೆಡಿಎಸ್ ಪಂಚರತ್ನಯಾತ್ರೆಗೆ ಚಿಕ್ಕಬಳ್ಳಾಪುರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಮಂಚೇನಹಳ್ಳಿ, ಪೋಶೆಟ್ಟಿಹಳ್ಳಿ, ಮುಸ್ತೂರು, ಗೊಲ್ಲಹಳ್ಳಿ, ಪೇರೆಸಂದ್ರ, ದಿಬೂರ್, ನಾಯನಹಳ್ಳಿಯಲ್ಲಿ ಸೇರಿ ಹಲವೆಡೆ 10ನೇ ದಿನದ ಪಂಚರತ್ನ ರಥಯಾತ್ರೆ ಭರ್ಜರಿಯಾಗಿ ಸಾಗಿತು. ತೆನೆಯಾತ್ರೆ ಹೋದ ಕಡೆಯೆಲ್ಲಾ ಜೆಡಿಎಸ್ ಪರ ಘೋಷಣೆಗಳು ಮೊಳಗಿದ್ವು. ತೆನೆ ಹೊತ್ತ ಮಹಿಳೆಯೊಬ್ಬರು ಯಾತ್ರೆಯಲ್ಲಿ ಭಾಗಿಯಾಗಿದ್ದು ಕಂಡುಬಂತು. ಇದೇ ವೇಳೆ ಆಟೋ ಚಾಲಕರ ಸಂಘದ ವತಿಯಿಂದ ನಡೆದ ಪೂಜೆ ಹಾಗೂ ದರ್ಗಾಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು. ಕುಮಾರಸ್ವಾಮಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.
ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ!
ಕೊರೋನಾದಲ್ಲಿ ಲೂಟಿ ಹೊಡೆದಿದ್ದಲ್ಲದೆ ಇಲ್ಲಿ ಅಕ್ರಮ ಗಣಿಗಾರಿಕೆಗೆ ಸಚಿವ ಸುಧಾಕರ್ ಕುಮ್ಮಕ್ಕು ನೀಡಿದ್ದಾರೆ ಅಂತ ಕುಮಾರಸ್ವಾಮಿ ಕಿಡಿಕಾರಿದ್ರು. ಅಕ್ರಮ ಹಣದಿಂದ ಸುಧಾಕರ್ ಗೆಲ್ತೀನಿ ಅಂದು ಕೊಂಡಿದ್ದರೆ ಅದು ಭ್ರಮೆ. ಜನಶಕ್ತಿಯ ಮುಂದೆ ಹಣದ ಶಕ್ತಿ ನಡೆಯಲ್ಲ. ನಮ್ಮ ಅಭ್ಯರ್ಥಿ ಬಚ್ಚೇಗೌಡ ಗೆಲುವಿಗೆ ಚಿಕ್ಕಬಳ್ಳಾಪುರದ ಜನತೆ ಕೈ ಜೋಡಿಸಬೇಕು ಅಂತ ಮನವಿ ಮಾಡಿದ್ರು.
ಹೆಚ್ಡಿಕೆ ಯಾತ್ರೆಗೆ ನಿಖಿಲ್ ಕುಮಾರಸ್ವಾಮಿ ಸಾಥ್!
ಇನ್ನು ಚಿಕ್ಕಬಳ್ಳಾಪುರದ ಪೇರೆಸಂದ್ರದಲ್ಲಿ ಯಾತ್ರೆ ಸಾಗಿದ್ದಾಗ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿ ಹೆಚ್.ಡಿ.ಕುಮಾರಸ್ವಾಮಿಗೆ ಸಾಥ್ ಕೊಟ್ಟಿದ್ದು ಗಮನ ಸೆಳೆಯಿತು. ಇನ್ನು ಇವತ್ತು ರಾತ್ರಿ ಹೆಚ್.ಡಿ.ಕುಮಾರಸ್ವಾಮಿ ನಂದಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಚಿಕ್ಕಬಳ್ಳಾಪುರದ ಉಳಿದ ಗ್ರಾಮಗಳಲ್ಲಿ ನಾಳೆ ಪಂಚರತ್ನಯಾತ್ರೆ ಮುಂದುವರಿಯಲಿದೆ. ನಾಳೆ ನಿಖಲ್ ಜೊತೆ ಶಾಸಕಿ ಅನಿತಾ ಕುಮಾರಸ್ವಾಮಿ ಭಾಗಿಯಾಗುವ ಸಾಧ್ಯತೆ ಇದೆ.
ಪಂಚರತ್ನ ರಥಯಾತ್ರೆ ಮೇಲೆ ಪುಷ್ಪವೃಷ್ಟಿ. ಅಭಿಮಾನದ ಹೂಮಳೆ.#ಪಂಚರತ್ನ_ರಥಯಾತ್ರೆ #ಚಿಕ್ಕಬಳ್ಳಾಪುರ pic.twitter.com/utL7vy8Q3p
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 27, 2022
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post