ಕತಾರ್ನಲ್ಲಿ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಭರ್ಜರಿಯಾಗಿ ನಡೆಯುತ್ತಿದೆ. ಟೂರ್ನಿಯಲ್ಲಿ ಮೇನ್ ಮೇನ್ ಟೀಮ್ಗಳೇ ಮಕಾಡೆ ಮಲ್ಕೊಳ್ಳುತ್ತಿವೆ. ಮೊನ್ನೆಯಷ್ಟೇ ಬಲಿಷ್ಠ ಅರ್ಜೆಂಟೀನಾವನ್ನು ಸೌದಿ ಅರೇಬಿಯಾ ಟೂರ್ನಿಯಿಂದಲೇ ಹೊರ ದಬ್ಬಿತ್ತು. ಈಗ ಬೆಲ್ಜಿಯಂ ಅನ್ನು ಸೋಲಿಸಿದ ಮೊರಾಕೊ ವಿಜಯಿಭವ ಆಗಿದೆ.
ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್ ನಗರದಲ್ಲಿ ಸಿಕ್ಕಾ ಸಿಕ್ಕಲ್ಲಿ ಬೆಂಕಿ ಹಚ್ಚಿದ್ದಾರೆ. ರಸ್ತೆ ಮೇಲಿದ್ದ ವಾಹನಗಳನ್ನ ತಳ್ಳಿ ಪಲ್ಟಿ ಹೊಡೆಸಿದ್ದಾರೆ. ಕಾರುಗಳಿಗೆ ಹಾಗೂ ಕೆಲ ಎಲೆಕ್ಟ್ರಿಕಲ್ ಬೈಕ್ಗಳಿಗೂ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. ರಸ್ತೆ ಬದಿ ಇರೋ ಅಂಗಡಿ ಮುಗ್ಗಟ್ಟುಗಳ ವಸ್ತುಗಳನ್ನ ಮನಬಂದಂತೆ ರಸ್ತೆಯಲ್ಲಿ ಬಿಸಾಡಿ ದುರ್ವರ್ತನೆ ಮೆರೆದಿದ್ದಾರೆ. ಪಟಾಕಿಗಳನ್ನ ಸಿಡಿಸಿ ತೀವ್ರ ಗಲಭೆಯನ್ನ ಸೃಷ್ಟಿಸಿದ್ದಾರೆ. ಇದರಲ್ಲಿ ಕೆಲವ್ರು ಮೊರಾಕೊ ಟೀಮ್ನಂತೆ ಡ್ರೆಸ್ ಹಾಕಿದ್ದರು ಎನ್ನಲಾಗಿದೆ.
ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಿಂಸಾಚಾರವನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಮೇಲೂ ಹಲ್ಲೆ ಮಾಡಲಾಗಿದೆ. ದಾಳಿಕೋರರನ್ನ ತಡೆಯಲು ಪೊಲೀಸರು ಟೀಯರ್ ಗ್ಯಾಸ್ ಮತ್ತು ಜಲ ಫಿರಂಗಿಯನ್ನ ಬಳಸಿದ್ದಾರೆ. ಇಲ್ಲಿಯವರೆಗೆ 12 ದಾಳಿಕೋರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮೊರಾಕೊ ವಿನ್ ಆಗಿದ್ದೆ ಇತಿಹಾಸ
ಕತಾರ್ನಲ್ಲಿ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಮೊರಾಕೊ ಟೀಮ್ ವಿರುದ್ಧ ಬಲಿಷ್ಠವಾದ ಬೆಲ್ಜಿಯಂ ಟೀಮ್ 2-0 ಅಂತರದಲ್ಲಿ ಸೋತು ಹೋಗಿದೆ. ಮೊರಾಕೊವು ಇಡೀ ವಿಶ್ವಕಪ್ ಪುಟ್ಬಾಲ್ ಇತಿಹಾಸದಲ್ಲಿ ಈ ಗೆಲುವು ಸೇರಿ ಒಟ್ಟು 3 ಬಾರಿ ಅಷ್ಟೇ ವಿನ್ ಆಗಿದೆ. ಆದ್ರೆ ಬೆಲ್ಜಿಯಂ ಈ ಸೋಲನ್ನು ಅರಗಿಸಿಕೊಳ್ಳಲಾಗದೇ ಕೆಲ ಪುಟ್ಬಾಲ್ ಅಭಿಮಾನಿಗಳು ಭಾರೀ ಹಿಂಸಾಚಾರಕ್ಕೆ ಮಾಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Morroco fans in Brussels after their win against Belgium…
This is what they’re doing after a win, imagine if they’d lost… 😳pic.twitter.com/i2G8azJRiQ
— The Away Fans (@theawayfans) November 27, 2022
Tensions in #Brussels after the Belgium – Morocco match. 🇲🇦🇧🇪 pic.twitter.com/g2txDyurRP
— Yassin Akouh (@Yassin_Akouh) November 27, 2022
Moroccans riots in the capital of Belgium, Brussels pic.twitter.com/JIP6YpKYF1
— 𝐷𝑧𝑖𝑟𝑖𝑦𝑎۞ (@dz132alg) November 27, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post