ವಿಜಯ್ ಹಜಾರೆ ಟ್ರೋಪಿಯಲ್ಲಿ ಟೀಂ ಇಂಡಿಯಾದ ಭವಿಷ್ಯದ ಬರವಸೆಯ ಬ್ಯಾಟರ್ ಹಾಗೂ ಮಹಾರಾಷ್ಟ್ರ ತಂಡದ ಕ್ಯಾಪ್ಟನ್, ಒಂದೇ ಓವರ್ನಲ್ಲಿ ಬರೋಬ್ಬರಿ 7 ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಒಂದು ಓವರ್ನಲ್ಲಿ 43 ರನ್ ಕಲೆ ಹಾಕಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಗುಜರಾತ್ನ ಅಹ್ಮದಾಬಾದ್ನಲ್ಲಿರುವ ಶ್ರೀ ನರೇಂದ್ರ ಮೋದಿ ಸ್ಟೇಡಿಯಂ ಈ ದಾಖಲೆಗಳಿಗೆ ಸಾಕ್ಷಿಯಾಯಿತು. ವಿಜಯ್ ಹಜಾರೆ ಟ್ರೋಪಿಯ ಬಿ ಟೀಂನಲ್ಲಿರುವ ಮಹಾರಾಷ್ಟ್ರ ತಂಡವು ಉತ್ತರ ಪ್ರದೇಶವನ್ನ ಎದುರಿಸುತ್ತಿದೆ.
ಫಸ್ಟ್ ಟೈಂ ದ್ವಿಶತಕ..!
ಚೆನ್ನೈ ಸೂಪರ್ ಕಿಂಗ್ನ ಈ ಬ್ಯಾಟ್ಸ್ಮನ್, ಓವರ್ನಲ್ಲಿ ಒಂದು ನೋ-ಬಾಲ್ ಆದ ಕಾರಣ 7 ಸಿಕ್ಸರ್ ಬಾರಿಸಲು ಸಾಧ್ಯವಾಗಿದೆ. ಮತ್ತೊಂದು ವಿಚಾರ ಅಂದ್ರೆ ಒಟ್ಟು 159 ಬಾಲ್ಗಳನ್ನ ಎದುರಿಸಿ 220 ರನ್ ಬಾರಿಸಿದ್ದಾರೆ. ಜೊತೆಗೆ ಗಾಯಗ್ವಾಡ್ ಇದೇ ಮೊದಲ ಬಾರಿಗೆ ದ್ವಿಶತಕ ಬಾರಿಸಿದರು. ಗಾಯಕ್ವಾಡ್ ಅವರ ಈ ಅಮೋಘ ಆಟದ ಪರಿಣಾಮ ನಿಗಧಿತ 50 ಓವರ್ರಗಳಲ್ಲಿ ಮಹಾರಾಷ್ಟ್ರ ತಂಡವು ಐದು ವಿಕೆಟ್ ಕಳೆದುಕೊಂಡು 330 ರನ್ಗಳನ್ನ ಕಲೆ ಹಾಕಿದೆ.
ಸರ್ ಗಾರ್ಫೀಲ್ಡ್ ಸೋಬೇರ್, ರವಿ ಶಾಸ್ತ್ರಿ, ಹೆರ್ಷ್ಚೆಲ್ ಗಿಬ್ಸ್, ಯುವರಾಜ್ ಸಿಂಗ್, ರಾಸ್ ವೈಟೆಲಿ, ಹಝರತುಲ್ಲಾ ಜಾಝೈ, ಲಿಯೋ ಕಾರ್ಟೆರ್, ಪೊಲಾರ್ಡ್ ಮತ್ತು ತಿಸರಾ ಪೆರೆರಾ ಒಂದೇ ಓವರ್ನಲ್ಲಿ 6 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಅವರೆಲ್ಲರ ದಾಖಲೆಗಳನ್ನ ಮುರಿದು ಗಾಯಕ್ವಾಡ್ ಹೊಸ ದಾಖಲೆ ಬರೆದುಕೊಂಡಿದ್ದಾರೆ.
DOUBLE-CENTURY!
Ruturaj Gaikwad finishes with an unbeaten 2⃣2⃣0⃣* off just 159 balls! 👏
Follow the match ▶️ https://t.co/cIJsS7QVxK#VijayHazareTrophy | #QF2 | #MAHvUP | @mastercardindia pic.twitter.com/pVRYh4duLk
— BCCI Domestic (@BCCIdomestic) November 28, 2022
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post