ಬಾಲಿವುಡ್‌ನ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಡ್ಯಾನ್ಸ್ಗೆ ಕನ್ನಡ ಇಂಡಸ್ಟ್ರಿಯಲ್ಲಿ ಸಖತ್ ಡಿಮ್ಯಾಂಡ್ ಇದೆ. ಅವತ್ತು ಸೇಸಮ್ಮ ಸೇಸಮ್ಮ ಬಾಗಿಲು ತೆಗಿಯಮ್ಮ ಅಂತ ಪಡ್ಡೆ ಹೈಕ್ಳ ಹೃದಯದಲ್ಲಿ ಚಿಟ್ಟೆ ಹಾರಿಸಿ ಹೋಗಿದ್ರು. ಅದಾದ ಮೇಲೆ ಲವ್ ಯೂ ಆಲಿಯಾ ಚಿತ್ರದಲ್ಲಿ ಕಾಮಾಕ್ಷಿ ಕಾಮಾಕ್ಷಿ ಅಂತ ಕಣ್ ಹೊಡೆದು ಹೋಗಿದ್ರು. ಈಗ ಮತ್ತೊಮ್ಮೆ ಕನ್ನಡಿಗರ ದಿಲ್ ಕದಿಯೋಕೆ ಸನ್ನಿ ಲಿಯೋನ್ ಬೆಂಗಳೂರು ಕಡೆ ಬಂದಿದ್ದಾರಂತೆ.
ಯು/ಐ ಚಿತ್ರಕ್ಕೆ ಸನ್ನಿ ಲಿಯೋನ್ ಎಂಟ್ರಿ
ಸನ್ನಿ ಡ್ಯಾನ್ಸ್ ಜೊತೆ ಆ್ಯಕ್ಟಿಂಗ್ ಧಮಾಕ
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶನ ಮಾಡ್ತಿರೋ ಯು/ಐ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರಂತೆ. ಉಪ್ಪಿ ಚಿತ್ರಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿದ್ದ ಸೇಸಮ್ಮ ಎರಡು ದಿನ ದಿನಗಳ ಕಾಲ ಚಿತ್ರೀಕರಣ ಮಾಡಿ ಹೋಗಿದ್ದಾರಂತೆ. ಯಾವಾಗಲೂ ಡಿಫ್ರೆಂಟ್ ಆಗಿ ಯೋಚಿಸೋ ಉಪೇಂದ್ರ ಸನ್ನಿ ಲಿಯೋನ್ ಅವರಿಂದ ಬರೀ ಡ್ಯಾನ್ಸ್ ಮಾತ್ರವಲ್ಲ, ಇಂಪಾರ್ಟೆಂಟ್ ಪಾತ್ರವೊಂದನ್ನ ಮಾಡಿಸಿದ್ದಾರಂತೆ. ಸಖತ್ ಆಗಿರೋ ಡ್ಯಾನ್ಸ್ ಧಮಾಕ ಜೊತೆ ಒಂದಿಷ್ಟೊತ್ತು ಸ್ಕ್ರೀನ್ ಮೇಲೆ ನಟನೆ ಮಾಡಿ ಮೋಡಿನೂ ಮಾಡ್ತಾರಂತೆ.
ಸನ್ನಿ ಲಿಯೋನ್ ಈಗಾಗಲೇ ಉಪ್ಪಿ ಸಿನಿಮಾದ ಶೂಟಿಂಗ್ ಮುಗಿಸಿದ ಮುಂಬೈ ಫ್ಲೈಟ್ ಹತ್ತಿದ್ದಾರಂತೆ. ಈ ಕಡೆ ಸನ್ನಿ ಆಗಮನದ ಬಗ್ಗೆ ಸಣ್ಣ ಸುಳಿವು ಬಿಟ್ಟು ಕೊಡದ ಉಪ್ಪಿ, ಅವರ ಪಾತ್ರದ ಬಗ್ಗೆಯೂ ಅಷ್ಟೇ ಸೀಕ್ರೆಟ್ ಮೈನ್ಟೈನ್ ಮಾಡಿದ್ದಾರೆ. ಉಪೇಂದ್ರ ಅವರು ನಾನ್ಸ್ಟಾಪ್ ಯು/ಐ ಚಿತ್ರದ ಶೂಟಿಂಗ್ ಮಾಡ್ತಿದ್ದಾರೆ. ರಾಜ್ಯದ ಹಲವು ಕಡೆ ಚಿತ್ರೀಕರಣ ಮಾಡಿ ಬಂದಿರೋ ರಿಯಲ್ ಸ್ಟಾರ್, ಸದ್ಯ ನೆಲಮಂಗಲದಲ್ಲಿರೋ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಸ್ಟಂಟ್ ಸೀನ್ ಚಿತ್ರೀಕರಿಸ್ತಿದ್ದಾರೆ. ಉಪ್ಪಿ 2 ಚಿತ್ರದ ನಂತರ ಉಪ್ಪಿ ಡೈರೆಕ್ಷನ್ ಮಾಡ್ತಿದ್ದು, ಮೇಕಿಂಗ್ ಹಂತದಲ್ಲೇ ಕುತೂಹಲ ಹೆಚ್ಚಿಸುತ್ತಾ ಸಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post