ಮುಂದಿನ ವರ್ಷ ತವರಿನಲ್ಲಿ ನಡೆಯೋ ಏಕದಿನ ವಿಶ್ವಕಪ್ ಸದ್ಯ ಎಲ್ಲರ ಟಾರ್ಗೆಟ್. ಒಂದೆಡೆ ಬಿಸಿಸಿಐ ಬಾಸ್ಗಳು, ಮ್ಯಾನೇಜ್ಮೆಂಟ್ ಟ್ರೋಫಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ರೆ, ಇನ್ನೊಂದೆಡೆ ಯುವ ಆಟಗಾರರು ಸ್ಥಾನ ಗಿಟ್ಟಿಸಿಕೊಳ್ಳೋ ಸರ್ಕಸ್ನಲ್ಲಿದ್ದಾರೆ. ಅದರಲ್ಲೂ ಈ ಯಂಗ್ಸ್ಟರ್ ಅಂತೂ ತನಗೇ ಸ್ಥಾನ ಫಿಕ್ಸ್ ಅಂತಿದ್ದಾನೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮುಖಭಂಗ ಅನುಭವಿಸಿದ ಟೀಮ್ ಇಂಡಿಯಾ ಇದೀಗ ಏಕದಿನ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕೋ ಲೆಕ್ಕಾಚಾರದಲ್ಲಿದೆ. ತವರಿನಲ್ಲಿ ನಡೆಯೋ ಏಕದಿನ ಮಹಾಸಮರವನ್ನ ಬಿಸಿಸಿಐ ಬಾಸ್ಗಳಂತೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಗೆದ್ದೂ ಐಸಿಸಿ ಟ್ರೋಫಿಗೆ ಮುತ್ತಿಕ್ಕಲೇ ಬೇಕು ಅನ್ನೋದು ಪರಮೋಚ್ಚ ಗುರಿಯಾಗಿದೆ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ಭರದಿಂದ ಸಾಗಿವೆ. ಆಟಗಾರರು ಕೂಡ ತಮ್ಮ ಪರ್ಫಾಮೆನ್ಸ್ ಮೂಲಕ ಸ್ಥಾನಕ್ಕೆ ಅರ್ಜಿ ಹಾಕ್ತಿದ್ದಾರೆ.
ವಿಶ್ವಕಪ್ ಆಯ್ಕೆ ರೇಸ್ನಲ್ಲಿ ಶುಭ್ಮನ್ ಗಿಲ್..!
ವಿಶ್ವಕಪ್ ಟೂರ್ನಿಯಲ್ಲಾಡಬೇಕು ಅನ್ನೋದು ಎಲ್ಲಾ ಆಟಗಾರರ ಅಲ್ಟಿಮೇಟ್ ಕನಸು.. ಟೀಮ್ ಇಂಡಿಯಾದ ಯಂಗ್ಸ್ಟರ್ ಶುಭಮನ್ ಗಿಲ್ ಕೂಡ ಇದೇ ಕನವರಿಕೆಯಲ್ಲಿದ್ದಾರೆ. ಮುಂದಿನ ವರ್ಷ ತವರಿನಲ್ಲಿ ನಡೆಯೋ ಏಕದಿನ ವಿಶ್ವಕಪ್ನಲ್ಲಿ ದೇಶವನ್ನ ಪ್ರತಿನಿಧಿಸಬೇಕು ಅನ್ನೋ ಹಂಬಲ ಗಿಲ್ದ್ದಾಗಿದೆ. ಗಿಲ್ ಮಾತ್ರವಲ್ಲ. ಎಲ್ಲಾ ಯುವ ಕ್ರಿಕೆಟಿಗರಿಗೂ ಈ ಹಂಬಲ, ಆಸೆಯಿರುತ್ತೆ. ಆದ್ರೆ, ಗಿಲ್ ಈ ವಿಚಾರದಲ್ಲಿ ಡಿಫರೆಂಟ್.. ತನ್ನ ಕನಸನ್ನ ಮಾತಿನಿಂದಲೂ, ಲಾಬಿ ನಡೆಸಿಯೋ ಗಿಲ್ ವ್ಯಕ್ತಪಡಿಸ್ತಾ ಇಲ್ಲ.. ತನ್ನ ಪರ್ಫಾಮೆನ್ಸ್ನಿಂದಲೇ ನನಗೆ ಸ್ಥಾನ ನೀಡಿ ಅಂತಾ ಡಿಮ್ಯಾಂಡ್ ಮಾಡ್ತಿದ್ದಾರೆ.
ಒನ್ ಡೇ ಫಾರ್ಮೆಟ್ನಲ್ಲಿ ಪಂಜಾಬ್ ಪುತ್ತರ್ ಆರ್ಭಟ.!
ಸದ್ಯ ನ್ಯೂಜಿಲೆಂಡ್ನಲ್ಲಿ ಶುಭಮನ್ ಗಿಲ್ ಪರಾಕ್ರಮ ಮೆರೆಯುತ್ತಿದ್ದಾರೆ. ತವರಿನಲ್ಲೇ ಕಿವೀಸ್ ಬೌಲರ್ಗಳನ್ನ ಧೂಳಿಪಟ ಮಾಡಿ ರನ್ ಕೊಳ್ಳೆ ಹೊಡೆದಿದ್ದಾರೆ. ಅಗ್ರೆಸ್ಸೀವ್ ಇಂಟೆಂಟ್, ಟಾಪ್ ಕ್ಲಾಸ್ ಶಾಟ್ಸ್ಗಳ ಮೂಲಕ ದಿಗ್ಗಜರೂ ವ್ಹಾ ಅನ್ನುವಂತೆ ಆಡ್ತಿದ್ದಾರೆ. ಈ ಒಂದು ಟೂರ್ ಮಾತ್ರವಲ್ಲ.. ಈ ಇಡೀ ವರ್ಷದಲ್ಲಿ ಪಂಜಾಬ್ ಪುತ್ತರ್ ಆರ್ಭಟಿಸಿದ್ದಾರೆ.
ಶುಭ್ಮನ್ ರನ್ಗಳಿಕೆ ಸರಾಸರಿ ಕೇಳಿ ಶಾಕ್ ಆಗ್ಬೇಡಿ..!
ಯೆಸ್, ಈ ವರ್ಷದಲ್ಲಿ ಶುಭ್ಮನ್ ಗಿಲ್ ಗಳಿಸಿರೋ ರನ್ ಸರಾಸರಿ ಕೇಳಿದ್ರೆ ನೀವು ಶಾಕ್ಗೆ ಒಳಗಾಗದೇ ಇರಲ್ಲ.. ಒಂದು ಇಡೀ ವರ್ಷದಲ್ಲಿ 50+ ಸರಾಸರಿಯ ಮೆಂಟೇನ್ ಮಾಡೋಕೆ ಸೂಪರ್ ಸ್ಟಾರ್ ಬ್ಯಾಟ್ಸ್ಮನ್ಗಳೇ ಒದ್ದಾಡ್ತಾರೆ. ಅಂತಾದ್ದರಲ್ಲಿ ಶುಭ್ಮನ್ಗಿಲ್ 72.12ರ ಸರಾಸರಿ ಹೊಂದಿದ್ದಾರೆ ಅಂದ್ರೆ, ಶಾಕ್ ಆಗದೇ ಇರುತ್ತಾ..?
- 2022ರಲ್ಲಿ ಶುಭ್ಮನ್ ಗಿಲ್ ODI ಪ್ರದರ್ಶನ
2022ರ ಕ್ಯಾಲೆಂಡರ್ ವರ್ಷದಲ್ಲಿ 11 ಇನ್ನಿಂಗ್ಸ್ಗಳನ್ನಾಡಿರುವ ಶುಭ್ಮನ್ ಗಿಲ್ 625 ರನ್ಗಳಿಸಿದ್ದಾರೆ. 72.12ರ ಸರಾಸರಿಯಲ್ಲಿ ರನ್ಗಳಿಸಿರೋ ಶುಭ್ಮನ್ 1 ಸೆಂಚುರಿ, 4 ಹಾಫ್ ಸೆಂಚುರಿ ಸಿಡಿಸಿದ್ದಾರೆ.
ಟೀಮ್ ಇಂಡಿಯಾಗೆ ಶುಭ್ಮನ್ ಗಿಲ್ ಟಾಪರ್..
ಈ ವರ್ಷ ಏಕದಿನದಲ್ಲಿ ಕನಿಷ್ಠ 400 ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಹೈಯೆಸ್ಟ್ ಸ್ಟ್ರೈಕ್ರೇಟ್ ಇರೋ ಟಾಪ್ ಇಂಡಿಯನ್ ಪ್ಲೇಯರ್ ಶುಭ್ಮನ್ ಗಿಲ್. ಇಂಗ್ಲೆಂಡ್ನ ಜೋಸ್ ಬಟ್ಲರ್, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಬಿಟ್ರೆ 3ನೇ ಸ್ಥಾನದಲ್ಲಿರೋದೆ ಗಿಲ್. 104.16ರ ಸ್ಟ್ರೇಕ್ರೇಟ್ನಲ್ಲಿ ಕನ್ಸಿಸ್ಟೆಂಟ್ ಆಗಿ ರನ್ಗಳಿಸಿದ ಹೆಗ್ಗಳಿಕೆ ಪಂಜಾಬ್ ಪುತ್ತರ್ದು.
ವರ್ಷವಿಡೀ ಅಬ್ಬರಿಸಿದ್ರೂ ಬಾಂಗ್ಲಾ ಟೂರ್ನಿಂದ ಔಟ್.!
ಹೌದು, ಇಡೀ ವರ್ಷದಲ್ಲಿ ಶುಭ್ಮನ್ ಗಿಲ್ ಎಂತಾ ಸಾಲಿಡ್ ಪರ್ಫಾಮೆನ್ಸ್ ನೀಡಿದ್ದಾರೆ ಅನ್ನೋದಕ್ಕೆ ಅಂಕಿ-ಅಂಶಗಳೇ ಸಾಕ್ಷಿಯಾಗಿ ನಿಂತಿವೆ. ಹಾಗಿದ್ರೂ, ಆಶ್ಚರ್ಯಕರ ರೀತಿಯಲ್ಲಿ ಬಾಂಗ್ಲಾದೇಶ ಪ್ರವಾಸದ ತಂಡದಿಂದ ಶುಭ್ಮನ್ ಗಿಲ್ಗೆ ಕೊಕ್ ಕೊಡಲಾಗಿದೆ. ಸಾಲಿಡ್ ಫಾರ್ಮ್ನಲ್ಲಿರೋ ಆಟಗಾರನನ್ನ ಏಕದಿನ ತಂಡದಿಂದ ದಿಢೀರ್ ಕೈ ಬಿಟ್ಟಿದ್ಯಾಕೆ ಅನ್ನೋ ಪ್ರಶ್ನೆಗೆ ಉತ್ತರವೇ ಸಿಕ್ಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post