ಕಾಲ ಕಾಲಕ್ಕೆ ಎಷ್ಟೋ ಆಟಗಾರರು, ಬರ್ತಾರೆ, ಹೋಗ್ತಾರೆ. ಆದ್ರೆ, ಕೆಲವ್ರು ಮಾತ್ರ ಆಡಲಿ. ಆಡದಿರಲಿ ಎಂದಿಗೂ ಜೀವಂತ.. ಇವರ ಆಟದ ಗತ್ತೇ ಅಂತದ್ದು.. ನೀವು ಯಾವ ಕಾರಣಕ್ಕೂ ಮರೆಯೋಕೆ ಸಾಧ್ಯಾನೇ ಇಲ್ಲ.
2012ರ ಒಲಿಂಪಿಕ್ನಲ್ಲಿ 5000 ಮೀಟರ್ ಓಡಿ ಗೋಲ್ಡ್ ಮೆಡಲ್ ಗೆದ್ದ ಮೋ ಫರಾಹ್ ಯಾರಿಗಾದ್ರೂ ಗೊತ್ತಾ..? ಗೊತ್ತಿಲ್ಲ. ಅದೇ ಒಲಿಂಪಿಕ್ನಲ್ಲಿ ಕೇವಲ 100, 200 ಮೀಟರ್ ಓಡಿದ ಉಸೇನ್ ಬೋಲ್ಟ್, ಜಗತ್ತಿಗೇ ಗೊತ್ತು. ಯಾಕಂದ್ರೆ, ಇದು ವೇಗದ ಪ್ರಪಂಚ.. ವೇಗವಾಗಿ ಕಾಲದ ಜತೆ ಓಡೋ ಜನರನ್ನ ಮಾತ್ರ ಪ್ರಪಂಚ ನೆನಪಿಟ್ಕೊಳ್ಳುತ್ತೆ.. ಈಗ ಕ್ರಿಕೆಟ್ಗೂ ಅದೇ ಗಾಳಿ ಬೀಸ್ತಿದೆ.
ಟಿ20 ಕ್ರಿಕೆಟ್ ಫೇಮಸ್ ಆಗಿರೋದೆ ಎಂಟರ್ಟೈನ್ಮೆಂಟ್ ಕಾರಣಕ್ಕೆ. ಈಗೇನಿದ್ರೂ ಫ್ಯಾನ್ಸ್ಗೆ ಬೇಕಿರೋದು ಫೈಸಾ ವಸೂಲ್ ಪರ್ಫಾಮೆನ್ಸ್ ಅಷ್ಟೇ. ಇನ್ನೋವೇಟಿವ್ ಶಾಟ್ಸ್ ಫ್ಯಾನ್ಸ್ ಫೇವರಿಟ್. ದಿಲ್ಸ್ಕೂಪ್, ರಿವರ್ಸ್ ಸ್ವೀಪ್. ಹೀಗೆ 360 ಡಿಗ್ರಿ ಬ್ಯಾಟಿಂಗ್ ನಡೆಸೋರು ಅಂದ್ರೆ ಫ್ಯಾನ್ಸ್ಗೆ ಫೇವರಿಟ್. ಅದರಲ್ಲೂ ಈ ನಾಲ್ವರು ಕ್ರಿಕೆಟ್ಗೆ ಹೊಸ ಮೆರಗು ತಂದು ಕೊಟ್ಟಿದ್ದಾರೆ.
- ನಂಬರ್ 4-ಸೂರ್ಯಕುಮಾರ್ ಯಾದವ್
ಇನ್ನೋವೇಟಿವ್ ಸೂರ್ಯ. ಈ ಹೆಸರು, ಹಳ್ಳಿಯಲ್ಲಿರೋ ಸಣ್ಣ ಸಣ್ಣ ಹುಡ್ಗರಿಗೂ ಗೊತ್ತು. ತನ್ನ ಡಿಫರೆಂಟ್ ಬ್ಯಾಟಿಂಗ್ನಿಂದಲೇ ಹಳ್ಳಿಯಿಂದ ದಿಲ್ಲಿವರೆಗೆ. ವಿದೇಶದ ಮೂಲೆಗೂ ಪ್ರಜ್ವಲಿಸಿದ್ದಾನೆ ಈ ಸೂರ್ಯ. ಕ್ರಿಕೆಟ್ ಲೋಕಕ್ಕೆ ಸಿಕ್ಕ ನಯಾ 360 ಸೂರ್ಯ ಕುಮಾರ. ಬಾಲರ್ ಯಾರೇ ಆಗಿರಲಿ. ಎಂತಾ ಟಫೆಸ್ಟ್ ಕಂಡೀಷನ್ ಇರಲಿ. ಅಬ್ಬರಿಸಿ ಬೊಬ್ಬಿರಿಯೋದೆ ಸೂರ್ಯ ಡೀಲ್ ಮಾಡೋದೆ ಡಿಫರೆಂಟ್ ಸ್ಟೈಲ್ನಲ್ಲಿ.
- ನಂಬರ್ 3- ಗ್ಲೇನ್ ಮ್ಯಾಕ್ಸ್ವೆಲ್
ಸೂರ್ಯ ಕುಮಾರ್ ಬಿಟ್ರೆ, ಆ ತರ ಡೇರ್ ಡೆವಿಲ್ ಆಟ ಆಡೋದು ಗ್ಲೇನ್ ಮ್ಯಾಕ್ಸ್ವೆಲ್.! ಸ್ವಿಚ್ ಹಿಟ್ ಹೊಡೆಯೋದ್ರಲ್ಲಂತೂ ಮ್ಯಾಕ್ಸ್ವೆಲ್ನ ಮೀರಿಸೋರೆ ಇಲ್ಲ.. ಒಂದೊಂದು ಹೊಡೆತವೂ ಮನ ಮೋಹಕ..ಬೌಲರ್ ಯಾರೇ ಇರಲಿ, ಫಿಚ್ ಯಾವ್ದೇ ಇರಲಿ ದಂಡಂ ದಶಗುಣಂ ಅಷ್ಟೆ.
- ನಂಬರ್ 2- ಮಾರ್ಟಿನ್ ಗಪ್ಟಿಲ್
ನ್ಯೂಜಿಲೆಂಡ್ ತಂಡದ ಓಪನರ್, ಮಾರ್ಟಿನ್ ಗಪ್ಟಿಲ್ ಆಟವನ್ನ ಹೇಗೆ ಮರೆಯೋಕೆ ಸಾಧ್ಯ. Nataraj shot, NO LOOKING SIX, UPPAR CUT.. ಇವೆಲ್ಲದರಲ್ಲೂ ಪಂಟರ್..! ಇದೇ ಕಾರಣಕ್ಕೆ, ಮಾರ್ಟಿನ್ ಗಪ್ಟಿಲ್ ಹೆಸರು ವರ್ಲ್ಡ್ ಫೇಮಸ್ ಆಗಿದ್ದು ಅಂದ್ರೂ ತಪ್ಪಾಗಲ್ಲ. ಒಂದರ್ಥದಲ್ಲಿ 360ಡಿಗ್ರಿ ಆಟಕ್ಕೆ ಈತ ಪ್ರೋಫೆಸರ್.
- ನಂಬರ್ 1- ಎಬಿ ಡಿ ವಿಲಿಯರ್ಸ್..
ಕ್ರಿಕೆಟ್ ಪ್ರಪಂಚಕ್ಕೆ ಎಬಿಡಿ ಗತ್ತು ಏನು ಅಂತ ಗೊತ್ತು. 360 ಡಿಗ್ರಿ ಬ್ಯಾಟಿಂಗ್ ಮೂಲಕ 100% ಮನರಂಜನೆ ನೀಡ್ತಾರೆ ಅನ್ನೋದು ಸದಾ ಹಾಕ್ತಿದ್ದ ಲೆಕ್ಕಾಚಾರ. ಸ್ಟೇಡಿಯಂನ ಮೂಲೆ ಮೂಲೆಗೂ ಬಾಲ್ ದರ್ಶನ ಮಾಡಿಸ್ತಿದ್ದ ಎಬಿಡಿ ಆಟಕ್ಕೆ ಫ್ಯಾನ್ಸ್, ಸ್ಟೇಡಿಯಂನಲ್ಲಿ ಹುಚ್ಚೆದ್ದು ಕುಣಿತಿದ್ರು. ಎಬಿ ಗುಡ್ ಬೈ ಹೇಳಿದ್ದಾರೆ ಅನ್ನೋ ಕಾರಣಕ್ಕೆ ಆ ಕ್ರೇಜ್ ಕಡಿಮೆಯಾಗಿಲಿಲ್ಲ. ಹಳೆ ಹೈಲೆಟ್ಸ್ಗಳನ್ನೇ ಫ್ಯಾನ್ಸ್ ಮತ್ತೆ ಮತ್ತೆ ನೋಡ್ತಿದ್ದಾರೆ. ಅಂತಾ ಮೋಡಿಗಾರ ಈ ಎಬಿಡಿ.
ಸದ್ಯ ಕ್ರಿಕೆಟ್ ಜಗತ್ತು ಬದಲಾಗ್ತಿದೆ. ಈ ಜಮಾನ, ತುಂಬಾ ಫಾಸ್ಟ್.! ಜನರಿಗೆ ಡಿಫರೆಂಟ್ ಅಪ್ರೋಚ್ ಬೇಕೆ ಬೇಕು. ಕ್ರಿಕೆಟ್ನಲ್ಲೂ ಅಷ್ಟೇ ರೊಟಿನ್ ಬ್ಯಾಟಿಂಗ್ ಮಾಡಿದ್ರೆ, ನೋ ಒನ್ ಕೇರ್ಸ್. ಫಾಸ್ಟ್ ಜನರೇಷನ್ನಲ್ಲಿ ಫಾಸ್ಟಾಗಿ ಬ್ಯಾಟಿಂಗ್ ನಡೆಸೋನೇ ದರ್ಬಾರ್ ನಡೆಸ್ತಾನೆ.. ಇಲ್ಲಾಂದ್ರೆ, ಚಾಂಪಿಯನ್ ಆದ್ರೂ ಮೋ ಫರಾಹ್ ತರಾನೇ, ಮೂಲೆಗುಂಪಾಗ್ತಾರೆ ಅಷ್ಟೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post