ಯೋಗ ಗುರು ಬಾಬಾ ರಾಮ್ ದೇವ್ಗೂ, ವಿವಾದಕ್ಕೂ ಎಲ್ಲಿಲ್ಲದ ನಂಟು ಇರಬೇಕು ಅಂತ ಕಾಣಿಸುತ್ತೆ. ವಿವಾದ ಆಗಲೆಂದು ಮಾತಗಳನ್ನಾ ಆಡ್ತಾರೇನೋ ಗೊತ್ತಿಲ್ಲ.. ಯೋಗ ವಿಜ್ಞಾನ ಶಿಬಿರದಲ್ಲಿ ಬಾಬಾ ರಾಮ್ದೇವ್, ಮಹಿಳೆಯ ಉಡುಪಿನ ತಮಾಷೆ ಮಾಡಲು ಹೋಗಿ, ಮಹಿಳೆ ಮಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ತಮ್ಮ ಹೇಳಿಕೆ ಸಂಬಂಧಿಸಿ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ: ‘ಮಹಿಳೆಯರು ಏನೂ ಧರಿಸದಿದ್ರೂ ಚೆನ್ನಾಗಿ ಕಾಣ್ತಾರೆ’-ಮಹಾ DCM ಪತ್ನಿ ಎದುರೇ ರಾಮ್ದೇವ್ ವಿವಾದಾತ್ಮಕ ಹೇಳಿಕೆ.
ದೆಹಲಿ ಮಹಿಳಾ ಆಯೋಗ ನೋಟಿಸ್ ನೀಡಿದ ಬೆನ್ನಲ್ಲೇ ಕ್ಷಮಾಪಣಾ ಪತ್ರವನ್ನ ರವಾನಿಸಿದ್ದಾರೆ. ಯಾರಿಗಾದರೂ ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ಬೇಷರತ್ ಕ್ಷಮೆ ಕೋರುವೆ. ಮಹಿಳೆಯರಿಗೂ ಅಗೌರವ ತೋರುವ ಉದ್ದೇಶ ಇರಲಿಲ್ಲ. ನಾನು ಯಾವಾಗಲೂ ಮಹಿಳಾ ಸಶಕ್ತೀಕರಣಕ್ಕಾಗಿ ಕೆಲಸ ಮಾಡಿದ್ದೇನೆ ಎಂದು ದೆಹಲಿ ಮಹಿಳಾ ಆಯೋಗಕ್ಕೆ ಕ್ಷಮಾಪಣೆ ಪತ್ರ ಕಳಿಸಿದ್ದಾರೆ ಎಂದು ವರದಿಯಾಗಿದೆ.
ಏನ್ ಹೇಳಿದ್ದರು ಬಾಬಾ..?
ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್ ಸೂಟ್‌ನಲ್ಲಿಯೂ ಅಮೃತಾಜೀ ರೀತಿ ಚೆನ್ನಾಗಿ ಕಾಣುತ್ತಾರೆ. ನನ್ನ ಪ್ರಕಾರ ಮಹಿಳೆಯರು ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣುತ್ತಾರೆ.
ಬಾಬಾ ರಾಮ್ದೇವ್, ಯೋಗ ಗುರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post