ಏಷ್ಯಾಕಪ್, ವಿಶ್ವಕಪ್ ಮಾತ್ರವಲ್ಲ. ಪ್ರತಿಷ್ಠೆಯ ಕದನಗಳಲೆಲ್ಲಾ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದೆ. ಈ ಹೀನಾಯ ಮುಖಭಂಗಗಳಿಗೆ ಕ್ಯಾಪ್ಟನ್-ಕೋಚ್, ಸೆಲೆಕ್ಷನ್ ಕಮಿಟಿ, ಟೀಮ್ ಮ್ಯಾನೇಜ್ಮೆಂಟ್ ಅನ್ನೇ ದೂರಲಾಗ್ತಿದೆ. ಅಸಲಿಗೆ ಟೀಮ್ ಇಂಡಿಯಾ ಹಿನ್ನಡೆಗೆ ಕಾರಣವಾಗಿದ್ದೇ ಬೇರೆ.
ಈ ವರ್ಷ ಟೀಮ್ ಇಂಡಿಯಾ ಗೆದ್ದು ಬೀಗಿದ್ದಕ್ಕಿಂತ ಸೋತು ಅವಮಾನಕ್ಕೆ ಒಳಗಾಗಿದ್ದೇ ಹೆಚ್ಚು. ಅದರಲ್ಲೂ ಪ್ರತಿಷ್ಠೆಯ ಕದನಗಳಲ್ಲಿ ಮುಗ್ಗರಿಸಿದ್ದು, ಅಭಿಮಾನಿಗಳನ್ನ ಬಿಡದೇ ಕಾಡ್ತಿದೆ. ಈ ಸೋಲುಗಳಿಗೆಲ್ಲಾ ಬಲವಾದ ಒಂದು ಕಾರಣ ಇದೆ. ಅದೇ ಬೌಲಿಂಗ್ ಯುನಿಟ್.
ಈ ವರ್ಷ ಟೀಮ್ ಇಂಡಿಯಾ ಬೌಲರ್ಸ್ಗಳ ಪಾಲಿಗೆ, ಕರಾಳ ಚಾಪ್ಟರ್ ಅಂದ್ರೂ ತಪ್ಪಾಗಲ್ಲ.. ಒಂದಲ್ಲ.., ಎರಡಲ್ಲ.., ಸಾಲು ಸಾಲು ಸೋಲುಗಳಿಗೆ ಬೌಲಿಂಗ್ ಯುನಿಟ್ ನೇರ ಹೊಣೆ. ಅದರಲ್ಲೂ ಈ ಪ್ರತಿಷ್ಠೆಯ ಕದನದಲ್ಲಿ ಹೀನಾಯವಾಗಿ ಸೋಲುಂಡ ಕಹಿಯನ್ನ, ಅಭಿಮಾನಿಗಳು ಎಂದಿಗೂ ಮರೆಯಲ್ಲ.
ಆಂಗ್ಲರ ನಾಡಲ್ಲಿ ಮಣ್ಣು ಪಾಲಾದ ಚಿನ್ನದಂತಾ ಅವಕಾಶ..
ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸೋ ಚಿನ್ನದಂತಾ ಅವಕಾಶ, ಈ ಬಾರಿ ಟೀಮ್ ಇಂಡಿಯಾ ಮುಂದಿತ್ತು. ಪಂದ್ಯದಲ್ಲಿ ಭರ್ಜರಿ ಆಟವಾಡಿದ ಬ್ಯಾಟ್ಸ್ಮನ್ಗಳೂ, ಇಂಗ್ಲೆಂಡ್ ಗೆಲುವಿಗೆ 378 ರನ್ಗಳ ಬೃಹತ್ ಟಾರ್ಗೆಟ್ ನೀಡಿದ್ರು. ಆದ್ರೆ ಬೌಲರ್ಗಳು ಇದನ್ನ ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿದ್ರು. ಜಾನಿ ಬೇರ್ಸ್ಟೋ, ಜೋ ರೂಟ್ ಇಬ್ಬರಿಂದ ದಂಡನೆಗೆ ಒಳಗಾದ ಟೀಮ್ ಇಂಡಿಯಾ ಬೌಲರ್ಸ್, ಸೋಲಿಗೆ ಕಾರಣರಾದ್ರು.
ಏಷ್ಯಾಕಪ್ ಕೈ ತಪ್ಪಿದ್ದೆ ಡೆತ್ ಓವರ್ ಬೌಲಿಂಗ್ನಿಂದ..
ಏಷ್ಯನ್ ರಾಷ್ಟ್ರಗಳನ್ನೇ ಒಳಗೊಂಡ ಏಷ್ಯಾಕಪ್, ಟೀಮ್ ಇಂಡಿಯಾ ಪಾಲಿಗೆ ಪ್ರತಿಷ್ಟೆಯ ಕದನ. ಇಂತಾ ಪ್ರತಿಷ್ಠೆಯ ಕದನದಲ್ಲೂ ರೋಹಿತ್ ಪಡೆ ಸೋತು, ಬರಿಗೈಯಲ್ಲಿ ತವರಿಗೆ ವಾಪಾಸ್ಸಾಯ್ತು. ಈ ಹೀನಾಯ ಮುಖಭಂಗಕ್ಕೆ ನೇರವಾದ ಕಾರಣ, ಒನ್ಸ್ ಅಗೇನ್ ಬೌಲಿಂಗ್ ಯುನಿಟ್. ಅದರಲ್ಲೂ ಡೆತ್ ಓವರ್ಗಳಲ್ಲಿ ನೀಡಿದ ಅಟ್ಟರ್ಫ್ಲಾಪ್ ಪರ್ಫಾಮೆನ್ಸ್, ಸೋಲಿನ ಅವಮಾನಕ್ಕೆ ಕಾರಣವಾಯ್ತು.
ವಿಶ್ವಕಪ್ ಸೆಮಿಫೈನಲ್ನಲ್ಲಿ ಹೀನಾಯ ಮುಖಭಂಗ..
ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ಹೀನಾಯ ಮುಖಭಂಗ ಅನುಭವಿಸಿದ್ದನ್ನ, ಯಾರೂ ಮರೆಯೋಕೆ ಸಾಧ್ಯವಿಲ್ಲ.. ಅಡಿಲೇಡ್ನಲ್ಲಿ ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್ ಆರ್ಭಟದ ಮುಂದೆ, ಟೀಮ್ ಇಂಡಿಯಾ ಬೌಲರ್ಸ್ ಕಳೆದೆ ಹೋದ್ರು. ವಿಕೆಟ್ ಬಿಡಿ.., ಒಂದೇ ಒಂದು ಡಿಆರ್ಎಸ್ ತೆಗೆದುಕೊಳ್ಳೋ ಅವಕಾಶವನ್ನೂ, ಬೌಲರ್ಸ್ ಕ್ರಿಯೇಟ್ ಮಾಡ್ಲಿಲ್ಲ.. 10 ವಿಕೆಟ್ಗಳ ಹೀನಾಯ ಸೋಲಿಗೆ ಬೌಲಿಂಗ್ ಯುನಿಟ್ ನೇರವಾದ ಹೊಣೆ.
ವಿಲಿಯಮ್ಸನ್-ಲಾಥಮ್ ಅಬ್ಬರ, ಬೌಲರ್ಸ್ ಥಂಡಾ..
ಸದ್ಯ ನಡೀತಾ ಇರೋ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ, ಬೌಲರ್ಗಳ ವೈಫಲ್ಯ ಮುಂದುವರೆದಿದೆ. ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 306 ರನ್ಗಳ ಬಿಗ್ ಸ್ಕೋರ್ ಕಲೆ ಹಾಕಿತ್ತು. ಆದ್ರೆ, ಬೌಲರ್ ಇದನ್ನ ಡಿಫೆಂಡ್ ಮಾಡಿಕೊಳ್ಳಲಿಲ್ಲ. ಭಾರತೀಯ ಬೌಲರ್ಗಳ ಮೇಲೆ ಸವಾರಿ ಮಾಡಿದ ಕೇನ್ ವಿಲಿಯಮ್ಸನ್, ಟಾಮ್ ಲಾಥಮ್.. ಕಿವೀಸ್ ಪಡೆಗೆ ಗೆಲುವಿನ ಕಿರೀಟ ತೊಡಿಸಿದ್ರು.
ಏಕದಿನ, T20 ಱಂಕಿಂಗ್ – ಟಾಪ್ 10ರಲ್ಲಿ ಒಬ್ಬ ಬೌಲರ್ ಇಲ್ಲ..
ಆಶ್ಚರ್ಯ ಅನಿಸಿದ್ರೂ ಇದು ಸತ್ಯ. ಏಕದಿನ ಹಾಗೂ ಟಿ20 ಮಾದರಿಯ ಱಂಕಿಂಗ್ ಪಟ್ಟಿಯಲ್ಲಿ, ಭಾರತದ ಒಬ್ಬೇ ಒಬ್ಬ ಬೌಲರ್ ಟಾಪ್ ಟೆನ್ನಲ್ಲಿ ಇಲ್ಲ. ಟೀಮ್ ಇಂಡಿಯಾ ಬೌಲಿಂಗ್ ಯುನಿಟ್ ನೀಡಿರೋ ಕಳಪೆ ಪರ್ಫಾಮೆನ್ಸ್ಗೆ, ಇದಕ್ಕಿಂತ ಸಾಕ್ಷಿ ಬೇಕಾ..? ಸದ್ಯ ಏಕದಿನ ಱಂಕಿಂಗ್ನಲ್ಲಿ ಬೂಮ್ರಾ, ಟಿ20ಯಲ್ಲಿ ಭುವನೇಶ್ವರ್ ಕುಮಾರ್, 11ನೇ ಸ್ಥಾನದಲ್ಲಿರೋದೇ ಟೀಮ್ ಇಂಡಿಯಾ ವೇಗಿಗಳ ಸದ್ಯದ, ದಿ ಬೆಸ್ಟ್ ಸಾಧನೆಯಾಗಿದೆ.
ಬೌಲರ್ಗಳ ಕಳಪೆ ಪರ್ಫಾಮೆನ್ಸ್, ಪ್ರತಿಷ್ಠೆಯ ಪಂದ್ಯಗಳಲ್ಲಿ ಹೀನಾಯ ಮುಖಭಂಗವಾಗುವಂತೆ ಮಾಡಿದೆ. ಟ್ಯಾಲೆಂಟೆಡ್ ಕ್ರಿಕೆಟರ್ಸ್ ದಂಡೇ ಭಾರತದಲ್ಲಿದ್ರೂ, ಟೀಮ್ ಮ್ಯಾನೇಜ್ಮೆಂಟ್, ಬಿಸಿಸಿಐ ಈ ಸಮಸ್ಯಗೆ ಪರಿಹಾರ ಹುಡುಕೋ ಗೋಜಿಗೆ ಯಾಕೆ ಹೋಗ್ತಿಲ್ಲ ಅನ್ನೋದೇ, ಸದ್ಯದ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post