ಚಾಮುಂಡೇಶ್ವರಿ: ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ನಿಲ್ ಬನ್ನಿ ಎಂದು ಕಾಂಗ್ರೆಸ್ ಶಾಸಕರು ಬಹಿರಂಗವಾಗಿಯೇ ಹೇಳಿಕೆ ನೀಡ್ತಿದ್ದಾರೆ. ಆದ್ರೆ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ನ ಬಂಡಾಯ ನಾಯಕರು ಸಿದ್ದರಾಮಯ್ಯಗೆ ಬಂಪರ್ ಆಫರ್ ನೀಡಿದ್ದಾರೆ.
ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರವನ್ನ ಒಂದು ರೀತಿ ಚಕ್ರವ್ಯೂಹ ಅಂದ್ರು ತಪ್ಪಾಗಲ್ಲ. ರಾಜ್ಯ ರಾಜಕೀಯ ಅಖಾಡದಲ್ಲಿ ಇದು ಹೈವೋಲ್ಟೇಜ್ ಕ್ಷೇತ್ರ.. ಮಾಜಿ ಸಿಎಂ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಜನರೇ, ಕಳೆದು ಚುನಾವಣೆಯಲ್ಲಿ ಚಕ್ರವ್ಯೂಹ ರಚಿಸಿ, ಸೋಲಿನ ರುಚಿ ತೋರಿಸಿದ್ರು. ಈ ಸೋಲಿನಿಂದ ಬೇಸತ್ತ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಗುಡ್ಬೈ ಹೇಳುವ ಮಾತುಗಳನ್ನಾಡಿದ್ರು.. ಆದ್ರೀಗ ಸೋತ ಕ್ಷೇತ್ರದಲ್ಲೇ ಫಿನಿಕ್ಸ್ನಂತೆ ಪುಟಿದೇಳಲು ಸಿದ್ದರಾಮಯ್ಯ ಮನಸ್ಸು ಮಾಡಿದ್ರಾ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಚಾಮುಂಡೇಶ್ವರಿಯಿಂದ ಸ್ಪರ್ಧಿಸುವಂತೆ ಸಿದ್ದುಗೆ ಒತ್ತಾಯ
ಪಕ್ಷ ತೊರೆಯಲು ಜೆಡಿಎಸ್ ಬಂಡಾಯ ಮುಖಂಡರ ನಿರ್ಧಾರ
ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯರನ್ನ ಚಾಮುಂಡೇಶ್ವರಿ ಜನರು ಕೈಬೀಸಿ ಕರೆದಿದ್ದಾರೆ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಜೆಡಿಎಸ್ನಲ್ಲೇ ಅಪಸ್ವರ ಕೇಳಿ ಬಂದಿದ್ದು, ನಮಗೆ ಟಿಕೆಟ್ ಸಿಗದಿದ್ರೆ, ಸಿದ್ದರಾಮಯ್ಯರನ್ನು ಬೆಂಬಲಿಸಲು ಜೆಡಿಎಸ್ನ ಬಂಡಾಯ ನಾಯಕರು ತೀರ್ಮಾನಿಸಿದ್ದಾರೆ. ಅದರಂತೆ, ಚಾಮುಂಡೇಶ್ವರಿ ಕ್ಷೇತ್ರದ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸ್ವಾಭಿಮಾನಿ ಕಾರ್ಯಕರ್ತರು ಸಭೆ ನಡೆಸಿ, ನಿಮ್ಮ ಪರ ನಾವಿದ್ದೀವಿ, ಸ್ಪರ್ಧೆ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಯ ನೀಡಿದ್ದಾರೆ. ಜೊತೆಗೆ ಜೆಡಿಎಸ್ನ ಬಂಡಾಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ರು.
ಬೆಳಗ್ಗೆ ಸಭೆ.. ಮಧ್ಯಾಹ್ನ ನಿರ್ಧಾರ.. ರಾತ್ರಿ ವೇಳೆಗೆ ಕಾರ್ಯರೂಪ..!
ಸಿದ್ದರಾಮಯ್ಯ ಜೊತೆ ಕಾಣಿಸಿಕೊಂಡ ಜೆಡಿಎಸ್ ಅತೃಪ್ತ ನಾಯಕರು
ಜಿ.ಟಿ.ದೇವೇಗೌಡರಿಗೆ ಸೋಲಿನ ಆಘಾತ ನೀಡಲು ತಂತ್ರ ರೂಪಿಸಿರುವ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ನ ಬಂಡಾಯ ನಾಯಕರು, ಸಿದ್ದರಾಮಯ್ಯ ಜೊತೆ ಕಾಣಿಸಿಕೊಂಡಿದ್ದಾರೆ. ಇದು ಚಾಮುಂಡೇಶ್ವರಿ ಕ್ಷೇತ್ರದ ರಾಜಕೀಯದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ರಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್ನ ಬಂಡಾಯ ನಾಯಕರು ಪಾಲ್ಗೊಂಡು, ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿದ್ದಾರೆ.
ಇನ್ನು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಬಂಡಾಯ ನಾಯಕರು, ಪಕ್ಷ ತೊರೆಯುವ ನಿರ್ಧಾರ ಮಾಡುತ್ತಿದ್ದಂತೆ, ಇತ್ತ ಮಾಜಿ ಸಿಎಂ ಸಿದ್ದರಾಮಯ್ಯಗೂ ಆಸೆ ಚಿಗುರೊಡೆದಿದೆ. ಇಷ್ಟು ದಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಬಹುತೇಕ ದೂರ ಉಳಿದಿದ್ದ ಮಾಜಿ ಸಿಎಂ, ರಮ್ಮನಹಳ್ಳಿಯ ಕಾರ್ಯಕ್ರಮದ ಮೂಲಕ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರುಳುವ ಮುನ್ಸೂಚನೆ ನೀಡಿದ್ರೂ, ಇನ್ನೂ ಅಧಿಕೃತವಾಗಿಲ್ಲ. ಇನ್ನೊಂದೆಡೆ, ಜೆಡಿಎಸ್ನ ಬಂಡಾಯ ನಾಯಕರ ನಡೆಯಿಂದ ದಳಪತಿಗಳ ಭದ್ರಕೋಟೆಯಲ್ಲಿ ತಲ್ಲಣ ಶುರುವಾಗಿದೆ. ಒಟ್ಟಾರೆ.. ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯಗೆ ಜೆಡಿಎಸ್ ಬಂಡಾಯ ನಾಯಕರ ನಡೆಯಿಂದ ಲಡ್ಡು ಬಾಯಿಗೆ ಬಂದು ಬಿದ್ದಂತಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post