ದೆಹಲಿಯ ಮದ್ಯ ನೀತಿ ಹಗರಣ ಇದೀಗ ತೆಲಂಗಾಣದಲ್ಲಿ ಭಾರೀ ಸದ್ದು ಮಾಡತೊಡಗಿದೆ. ದೆಹಲಿಯ ಹಗರಣದಲ್ಲಿ ತೆಲಂಗಾಣ ರಾಜಕಾರಣಿಗಳ ಹೆಸರು ಕೇಳಿ ಬಂದಿದೆ. ಜಾರಿ ಇಲಾಖೆ ಬಿಡುಗಡೆ ಮಾಡಿರುವ ಅಮಿತ್ ಅರೋರಾ ರಿಮಾಂಡ್ ವರದಿಯಲ್ಲಿ ತೆಲಂಗಾಣ ಸಿಎಂ ಪುತ್ರಿಯ ಹೆಸರು ಉಲ್ಲೇಖವಾಗಿದ್ದು, ಸಂಚಲನ ಸೃಷ್ಟಿಸಿದೆ.
ದೆಹಲಿ ಅಬಕಾರಿ ಹಗರಣದಲ್ಲಿ ಮಹತ್ವದ ಬೆಳವಣಿಗೆ
ಇ.ಡಿ ರಿಮಾಂಡ್ ವರದಿಯಲ್ಲಿ ತೆಲಂಗಾಣ ಸಿಎಂ ಪುತ್ರಿ ಹೆಸರು
ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ರಾವ್ ಪುತ್ರಿಯ ಹೆಸರು ಕೇಳಿಬಂದಿದೆ. ಇದು ರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ED ವಾಗ್ಯುದ್ಧ ಕಾರಣವಾಗುವ ಸಂಭವವಿದೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ಚುರುಕುಗೊಳಸಿದೆ. ಈ ಕೇಸ್ನಲ್ಲಿ ಮತ್ತೊಬ್ಬ ಉದ್ಯಮಿ ಅಮಿತ್ ಅರೋರಾರನ್ನು ಬಂಧಿಸಿದೆ. ಬಂಧಿತ ಅರೋರಾ, ಗುರುಗ್ರಾಮದ ಬಡ್ಡಿ ರೀಟೇಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯ ಬಂಧಿಸಲಾಗಿದೆ. ಈತನ ವಿಚಾರಣೆ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ರಿಮಾಂಡ್ ವರದಿಯಲ್ಲಿ ತೆಲಂಗಾಣ ಸಿಎಂ ಪುತ್ರಿ ಕಲ್ವಕುಂಟ್ಲ ಕವಿತಾ ಹೆಸರನ್ನು ಸೇರ್ಪಡೆ ಮಾಡಿದೆ.
ಜಾರಿ ನಿರ್ದೇಶನಾಲಯದ ರಿಮಾಂಡ್ ವರದಿಯಲ್ಲಿ ಏನಿದೆ?
ಕಲ್ವಕುಂಟ್ಲ ಕವಿತಾಗೂ, ಹಗರಣಕ್ಕೂ ಸಂಬಂಧವೇನು?
ಇಡಿ ಅಧಿಕಾರಿಗಳು ದೆಹಲಿ ಅಬಕಾರಿ ಹಗರಣದಲ್ಲಿ ಕೋರ್ಟ್ಗೆ ರಿಮಾಂಡ್ ವರದಿಯನ್ನು ಸಲ್ಲಿಸಿದ್ದಾರೆ. ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ರಾಜಕಾರಣಿಗಳು, ಹಾಗೂ ಶಂಕಿತ ಆರೋಪಿಗಳು ಹಲವು ಫೋನ್‌ಗಳನ್ನು ಬಳಸಿದ್ದು, ಮತ್ತು ಅವುಗಳನ್ನು ಬದಲಾಯಿಸುವ ಮೂಲಕ ಸಾಕ್ಷ್ಯ ನಾಶ ಪಡಿಸಿದ್ದಾರೆಂದು ಆರೋಪ ಮಾಡಿದೆ.
- ರಿಮಾಂಡ್ ವರದಿಯಲ್ಲಿ ಏನಿದೆ?
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸೌತ್ ಗ್ರೂಪ್ 100 ಕೋಟಿ ದೇಣಿಗೆ ಪಾವತಿಸಿದೆ. ಈ ಸೌತ್ ಗ್ರೂಪ್ ಅನ್ನು ಶರತ್ ರೆಡ್ಡಿ, ವೈಸಿಪಿ ಸಂಸದ ಮಾಗುಂಟ, ಕೆಸಿಆರ್ ಪುತ್ರಿ ಕಲ್ವಕುಂಟ್ಲ ಕವಿತಾ ಅವರು ನಿಯಂತ್ರಿಸಿದ್ದಾರೆ. ಸೌತ್ ಗ್ರೂಪ್ ಮೂಲಕ ವಿಜಯ್ ನಾಯರ್ಗೆ 100 ಕೋಟಿ ಹೋಗಿದೆ ಎಂದು ವಿಚಾರಣೆ ವೇಳೆ ಬಂಧಿತ ಅಮಿತ್ ಅರೋರಾ ಹೇಳಿಕೆ ನೀಡಿದ್ದಾನೆ. ಇನ್ನು ಈ ಪ್ರಕರಣದಲ್ಲಿ ಡಿಜಿಟಲ್ ಸಾಕ್ಷ್ಯ ಸಿಗಬಾರದೆಂದು, ಮನಿಶ್ ಸಿಸೋಡಿಯಾ ಸೇರಿದಂತೆ 36 ಮಂದಿಯಿಂದ 1.38 ಕೋಟಿ ಮೌಲ್ಯದ 170 ಫೋನ್ ನಾಶ ಮಾಡಲಾಗಿದೆ ಎಂದು ರಿಮಾಂಡ್ ವರದಿಯಲ್ಲಿ ಜಾರಿ ನಿರ್ದೇಶನಾಲಯ ಉಲ್ಲೇಖಿಸಿದೆ. ಅದರಲ್ಲಿ ಕವಿತಾ ಎರಡು ನಂಬರ್, 10 ಫೋನ್‌ಗಳನ್ನು ಬಳಸಿದ್ದಾರೆ. ಕವಿತಾ ಬಳಸುತ್ತಿದ್ದ 10 ಫೋನ್ಗಳನ್ನೂ ನಾಶ ಮಾಡಲಾಗಿದೆ.. ಅವುಗಳ ಐಎಂಇಎ ಸಂಖ್ಯೆ ಮತ್ತು ಫೋನ್ ಬದಲಿಸಿದ ದಿನಾಂಕವನ್ನು ರಿಮಾಂಡ್ ವರದಿಯಲ್ಲಿ ಜಾರಿ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.
ಟಿಆರ್ಎಸ್ ಎಂಎಲ್‌ಸಿ ಕವಿತಾ ಮತ್ತು ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಈ ಹಗರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗಪಡಿಸಿದ್ದರು. ಆದ್ರೀಗ ಇವರಿಬ್ಬರ ಹೆಸರು ಸೇರ್ಪಡೆಯಾಗಿರುವುದು ತೆಲಂಗಾಣ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
TRS MLC @RaoKavitha name surfaces in the Remand report filed by ED. Federal agency says business man Vijay Nair, on behalf of AAP leaders received kickbacks of Rs. 100 Cr from a group, called ‘South Group’ (controlled by Sarath Reddy, Ms.K Kavitha,Sh Magunta Srinivasulu Reddy)👇 pic.twitter.com/Sd0iHZWjuy
— @Coreena Enet Suares (@CoreenaSuares2) November 30, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post