ಪುಟ್ಟಕ್ಕನ ಮಕ್ಕಳು ಸೀರಿಯಲ್ ಪ್ರಮುಖ ಆಕರ್ಷಣೆ ಅಂದ್ರೆ ಕಂಠಿ-ಸ್ನೇಹಾ ಜೋಡಿ. ಕಂಠಿ ಆರ್ಭಟಕ್ಕೆ ಫಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಒಂದೇ ವರ್ಷದಲ್ಲಿ ಕಂಠಿ ಕ್ರೇಜ್ ವೀಕ್ಷಕರನ್ನ ಆವರಿಸಿಕೊಂಡಿದೆ. ಕಂಠಿ ಮೇನಿಯಾ ಶುರುವಾಗಿದೆ. ಕಂಠಿ ಪಾತ್ರವನ್ನ ನಿರ್ವಹಿಸುತ್ತಿರುವ ಧನುಷ್ ಸದ್ಯ ವೀಕ್ಷಕರ ಹಾರ್ಟ್ ಫೇವರೇಟ್ ಆಗಿದ್ದಾರೆ. ಡೆಬ್ಯು ಸೀರಿಯಲ್ನಲ್ಲಿ ಧಮಾಕ ಸೃಷ್ಟಿಸಿದ ಹೀರೋ.
ಕಿರುತೆರೆಯಲ್ಲಿಯೇ ಹೊಸ ಮೈಲುಗಲ್ಲಿಗೆ ಕಾರಣವಾಗಿರೋ ಪುಟ್ಟಕ್ಕನ ಮಕ್ಕಳು ಮಾಸ್ ಹೀರೋ ಆಗಿ ಮಿಂಚ್ತಿದ್ದಾರೆ ಕಂಠಿ ಅಂದರೆ ಧನುಷ್. ಸಾಕಷ್ಟು ಕಲಾವಿದರು ಸೀರಿಯಲ್ನಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡೋ ಕನಸು ಕಾಣುತ್ತಿದ್ದಾರೆ. ಮಾಸ್, ಕ್ಲಾಸ್ ಎರಡನ್ನು ಮಾಡಬೇಕು ಅನ್ನೋ ಹಂಬಲ. ಆದರೆ ಈಗ ಕಾಲ ಬದಲಾಗಿದೆ.
ಸೀರಿಯಲ್ನಲ್ಲಿ ಲವ್, ಆ್ಯಕ್ಷನ್, ಕಾಮಿಡಿ ಬರಪೂರ್ ಆಗಿ ಸಿಗ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕಂಠಿ ಪಾತ್ರ. ಧನುಷ್ ಫೈಟ್ಗೆ, ಆ ಸ್ಟೈಲ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಧನುಷ್ ಎಲ್ಲೇ ಕಾಲಿಟ್ಟರು ಫ್ಯಾನ್ಸ್ ಮುಗಿ ಬಿಳ್ತಾರೆ. ಮೊನ್ನೆ ಧನುಷ್ ನೆಲಮಂಗಲ್ಲದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಗೆಸ್ಟ್ ಆಗಿ ಹೋಗಿದ್ದರು. ಫ್ಯಾನ್ಸ್ ಕ್ರೇಜ್ ಕಂಡು ಸ್ವತಃ ಧನುಷ್ ಶಾಕ್ ಆಗಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post