ನೀವು ಕಿರುತೆರೆಯ ಅಸಲಿ ಪ್ರೇಕ್ಷಕರಾಗಿದ್ರೆ ಬಿಗ್ಬಾಸ್ನಂತಹ ಪ್ರಖ್ಯಾತ ರಿಯಾಲಿಟಿ ಶೋವನ್ನ ತಪ್ಪದೇ ಫಾಲೋ ಮಾಡ್ತಿದ್ರೆ ಸಾನ್ಯಾ ಅಯ್ಯರ್ ಬಗ್ಗೆ ಖಂಡಿತ ಪರಿಚಯವಿರುತ್ತೆ.. ಕ್ಷೀರದಂತಹ ಮೈಬಣ್ಣ, ಪಡ್ಡೆಗಳ ನಿದ್ದೆಗೆಡಿಸುವ ಮೈಮಾಟ, ಮಾತಾಡಿದ್ರೆ ಅದೆಲ್ಲಿ ಮುತ್ತುಗಳು ಉದುರಿಯಾವು ಅಂತಾ ಬೊಗಸೆ ಹಿಡಿಯಲು ಯುವಕರು ಕ್ಯೂ ನಿಲ್ಲುವಂತಹ ಸೌಂದರ್ಯ. ಮಾರ್ಡನ್ ಆದ್ರೂ ಸರಿ, ಟ್ರೆಡಿಷನ್ ಆದ್ರೂ ಓಕೆ.. ಚೆಂದದ ಉಡುಗೆ ತೊಟ್ಟು ನಡೀತಿದ್ರೆ ಅಪ್ಸರೆಯೇ ಧರೆಗಿಳಿದು ಬಂದಳಾ ಎನಿಸುವಷ್ಟು ಮಾದಕತೆಯನ್ನೇ ಹೊದ್ದಿರುವ ಕಿನ್ನರಿ ಸಾನ್ಯಾ ಐಯ್ಯರ್.
ಕರುನಾಡ ಮನೆ ಮನೆ ಮಾತಾದ ಪುಟ್ಟಗೌರಿ ಮದುವೆ ಧಾರಾವಾಹಿ ಯಾರಿಗ್ ತಾನೇ ಗೊತ್ತಿಲ್ಲ ಹೇಳಿ. ಆ ಸೀರಿಯಲ್ನಲ್ಲಿ ಗೌರಿ ಪುಟ್ಟವಳಿದ್ದಾಗಿನ ಪಾತ್ರವನ್ನ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದ ಬೆಡಗಿ ಸಾನ್ಯಾ ಮುಂದಿನ ದಿನಗಳಲ್ಲಿ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾಕೆ. ಅದು ಧಾರಾವಾಹಿ ಆಗಿರಬಹುದು ಅಥವಾ ರಿಯಾಲಿಟಿ ಶೋನೇ ಆಗಿರಬಹುದು, ಕೊಟ್ಟ ಕುದುರೆಯನ್ನ ಏರಿ ಆ ಸವಾರಿಯನ್ನ ಯಶಸ್ವಿಯಾಗಿ ಮುಗಿಸೋ ಚಾಣಾಕ್ಷೆ ಕೂಡ ಈ ಸಾನ್ಯಾ.
ಬಿಗ್ಬಾಸ್ ಓಟಿಟಿ ಸೀಸನ್1 ರಲ್ಲಿ ಮಿಂಚು ಹರಿಸಿದ್ದ ಚೆಲುವೆ ಸದ್ಯ ನಡೀತಿರೋ ಬಿಗ್ಬಾಸ್ ಸೀಸನ್ 9ರಲ್ಲಿಯೂ ಭರ್ಜರಿ ಪ್ರದರ್ಶನ ತೋರಿದ್ದರು. ಸ್ಮಾಲ್ ಸ್ಕ್ರೀನ್ನಲ್ಲಿ ಸಾನ್ಯಾ ಹವಾ ಎಷ್ಟರ ಮಟ್ಟಿಗಿದೆ ಅಂದ್ರೆ, ಸಾನ್ಯಾರನ್ನ ನೋಡೋದಕ್ಕಾಗಿಯೇ ಬಿಗ್ ಬಾಸ್ ನೋಡ್ತೀನಿ ಅಂತಾ ಅದೆಷ್ಟೋ ಮಂದಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಕಮೆಂಟ್ ಮಾಡಿದ್ದಾರೆ. ಇಷ್ಟೆಲ್ಲಾ ಬೋಲ್ಡ್ ಌಂಡ್ ಬ್ಯೂಟಿಫುಲ್, ಮಲ್ಟಿ ಟ್ಯಾಲೆಂಟೆಡ್ ಆಗಿರೋ ಈ ಬೆಡಗಿ ತಮ್ಮ ಒಂದೇ ಒಂದು ಸ್ಟೇಟ್ಮೆಂಟ್ನಿಂದ ಸುದ್ದಿಯಾಗಿದ್ದಾರೆ.
ಕೆಲವು ವರ್ಷಗಳ ಹಿಂದೆ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಡ್ಯಾನ್ಸಿಂಗ್ ಚಾಂಪಿಯನ್ನಲ್ಲಿ ಸಾನ್ಯಾ ಐಯ್ಯರ್ ಮಾಡಿದ್ದ ಈ ಡ್ಯಾನ್ಸ್ ನೋಡುಗರನ್ನ ಶೇಕ್ ಮಾಡಿಬಿಟ್ಟಿತ್ತು ಅಂದ್ರೆ ತಪ್ಪಾಗೋದಿಲ್ಲ. ಅದ್ರಲ್ಲೂ ಕೊನೆ ಕೊನೆಗೆ ಡ್ಯಾನ್ಸ್ ಮುಗಿಯೋ ಹಂತದಲ್ಲಿ ಸಾನ್ಯಾ ಮುಖದಲ್ಲಿ ಕಂಡ ರೋಷಾವೇಶ.. ಆ ಕಡುಕೆಂಪು ಕಣ್ಣುಗಳನ್ನ ನೋಡಿದವ್ರು ಇದೊಂದು ಪಾತ್ರದ ಪರಕಾಯ ಪ್ರವೇಶ ಅಂತಷ್ಟೇ ಅಂದುಕೊಂಡಿದ್ರು. ಬಟ್, ಆವತ್ತು ಇವೆಲ್ಲದಕ್ಕಿಂತ ಮುಂಚೆ ಅಲ್ಲಾಗಿದ್ದೇ ಬೇರೆ.. ಅಸಲಿಗೆ ಅಂದು ನಿಜವಾಗಿಯೂ ದೇವಿ ಸಾನ್ಯಾರ ಮೈಮೇಲೆ ಅವಾಹನೆಯಾಗಿದ್ದಳಂತೆ.
ಬಿಗ್ಬಾಸ್ ಖ್ಯಾತಿಯ ಸಾನ್ಯಾ ಮೇಲೆ ದೇವರು ಬರುತ್ತಾ?
ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿ ಸಾನ್ಯಾ ಮೈ ಮೇಲೆ ದೇವಿ ಬರ್ತಾಳಂತೆ ಎನ್ನುವಷ್ಟೇ ಮಾಹಿತಿ ನಮ್ಮ ಬಳಿ ಇತ್ತು. ಆ ಬಗ್ಗೆ ಖುದ್ದು ಸಾನ್ಯಾ ಐಯ್ಯರ್ಗೆ ಪ್ರಶ್ನೆ ಮಾಡಿತ್ತು ನಮ್ಮ ತಂಡ. ನೀವು ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಪ್ರದರ್ಶನ ನೀಡುವ ಮೊದಲು, ನಿಮ್ಮಲ್ಲಿ ಒಂದು ವೈಬ್ರೇಷನ್ ಕ್ರಿಯೇಟ್ ಆಗಿತ್ತಂತೆ.. ಅಷ್ಟಕ್ಕೂ ಆವತ್ತು ನಿಮ್ಮ ಮೇಲೆ ನೀವು ಆರಾಧಿಸೋ ದೇವಿ ಆವಾಹನೆಯಾಗಿದ್ದಳಾ ಅಂತಾ ಕೇಳಿದ್ವಿ. ಅದಕ್ಕೆ ಸಾನ್ಯಾ ಹೇಳಿದ್ದು ಏನ್ ಗೊತ್ತಾ?
ನನ್ನ ಲೈಫ್ನಲ್ಲೇ ಇದು ಫಸ್ಟ್ ಟೈಂ ಅನ್ಸುತ್ತೆ. ದೇವಿಗೆ ನೀನು ಬರಲೇಬೇಕು ಅಂತಾ ಕೇಳ್ಕೊಂಡಿದ್ದೆ. ನಾನು ಅವಳನ್ನ ತುಂಬಾ ನಂಬೋದ್ರಿಂದ ಅವಳ ಬಳಿ ರಿಕ್ವೆಸ್ಟ್ ಮಾಡಿಕೊಂಡಿದ್ದೆ. ನಾನು ದೇವನ್ನ ಅವಳು ಅಂತಾನೇ ಕರೆಯುತ್ತೇನೆ. ನನ್ನ ಪ್ರಕಾರ ದೇವರು ಅಂದರೆ ಫ್ರೆಂಡ್ಸ್ ಥರಾ. ನಮ್ಮಲ್ಲೂ ದೇವರು ಇದ್ದಾನೆ. ಆದರೆ ಅದನ್ನ ಹೇಗೆ ಹುಡುಕಿಕೊಳ್ತೀವಿ ಅನ್ನೋದು ಮುಖ್ಯ. ರಿಯಾಲಿ ಶೋ ವೇಳೆ ನಾನು ಆ್ಯಕ್ಟ್ ಮಾಡುವಾಗ ಮ್ಯಾನುಫೆಸ್ಟ್ ಮಾಡ್ಕೊಂಡಿದ್ದೆ. ನಾನು ನಿನ್ನ ಪಾತ್ರವನ್ನ ಮಾಡ್ತಿದ್ದೀನಿ. ನೀನು ಬರದೇ ಹೇಗೆ ಹೋಗ್ತಿಯಾ ಅಂತಾ ಹೇಳಿದ್ದೆ. ಅದಕ್ಕಾಗಿ ನಾನು ತುಂಬಾ ಜಪ ಮಾಡ್ತಿದ್ದೆ..
ಸಾನ್ಯಾ ಐಯ್ಯರ್, ಕಿರುತೆರೆ ನಟಿ
ಸಾನ್ಯಾ ಹೇಳಿದ ಈ ಮಾತುಗಳನ್ನ ಕೇಳಿ ನಿಜಕ್ಕೂ ಶಾಕ್ ಆಗಿತ್ತು ನಮ್ಮ ತಂಡ.. ದೇವಿಯನ್ನ ಮೈಮೇಲೆ ಆವಾಹನೆ ಮಾಡಿಕೊಳ್ಳೋದಕ್ಕೆ ಅಂತಲೇ ಆ ದಿನಗಳಲ್ಲಿ ತುಂಬಾನೇ ಜಪ ಮಾಡ್ತಿದ್ರಂತೆ ಸಾನ್ಯಾ.. ಅದೇ ರೀತಿ ದೇವಿಯನ್ನ ಮೈಮೇಲೆ ಬರಲೇಬೇಕು ಅಂತಾ ಅವಳ ಜೊತೆಗೆ ಹಠವಿಡಿದು ಕುಳಿತಿದ್ರಂತೆ.. ಅದೇ ರೀತಿ ಆವತ್ತು, ದುರ್ಗಾ ಮಾತೆ ಸಾನ್ಯಾರನ್ನ ಆವರಿಸಿಕೊಂಡರಂತೆ.
ಅದರಂತೆ ನಾನು ದೇವಿ ಆ್ಯಕ್ಟ್ ಮಾಡಲು ತುಂಬಾ ಜಪ ಮಾಡುತ್ತ ಕೂತಿದ್ದೆ. ಈ ವೇಳೆ ಇದ್ದಕ್ಕಿದ್ದಂತೆ ನನ್ನ ಮನಸ್ಸಲ್ಲಿ ಬದಲಾವಣೆ ಆಗಲು ಶುರುವಾಯ್ತು. ನಾನು ಅಳಲು ಶುರುಮಾಡಿದೆ. ಕೊನೆಗೆ ಡಬಲ್ ಎನರ್ಜಿ ನನಗೆ ದಿಢೀರ್ ಎಂದು ಬಂತು. ನನಗೆ ಪಾಸಿಟಿವ್ ವೈಬ್ರೇಷನ್ ಬಂತು. ಈ ಸಂದರ್ಭದಲ್ಲಿ ನಾನು ನನ್ನ ಕಂಟ್ರೋಲ್ನಲ್ಲಿ ಇರಲಿಲ್ಲ. ಕೊನೆಗೆ ನನ್ನನ್ನ ಯಾರೋ ಸಮಾಧಾನ ಮಾಡಲು ಬರುತ್ತಾರೆ. ಆಗ ನಾನು ಅವರ ಬಳಿ ಮುಟ್ಟಬೇಡಿ ಎಂದು ಹೇಳಿದೆ. ಅದನ್ನ ನಾನು ಹೇಳಿಲ್ಲ. ನನ್ನನ್ನ ಯಾರೋ ಆಪರೇಟ್ ಮಾಡ್ತಿದ್ದಾರೆ ಅನಿಸಿತು. ನನ್ನ ದೇಹದಲ್ಲಿ ಆ ಪಾಸಿಟಿವ್ ಎನರ್ಜಿ ಇರಬೇಕಾದರೆ ಯಾರಿಗೂ ಆಕೆ ನನ್ನನ್ನ ಮುಟ್ಟಲು ಬಿಡೋದಿಲ್ಲ. ಯಾರೋ ಫೋಟೋ ತೆಗೆದುಕೊಳ್ಳಲು ಬಂದಿದ್ದರು. ಅವರ ಫೋನ್ ಕೂಡ ಕಿತ್ಕೊಂಡುಬಿಟ್ಟಿದ್ದೆ.
ಸಾನ್ಯಾ ಐಯ್ಯರ್, ಕಿರುತೆರೆ ನಟಿ
ಆವತ್ತು ಸಾನ್ಯಾರನ್ನ ಯಾರೇ ಸಮಾಧಾನಪಡಿಸಲು ಬಂದ್ರೂ ಅದಕ್ಕೆ ಸುತಾರಾಂ ಒಪ್ಪಿಗೆ ನೀಡ್ತಾ ಇರಲಿಲ್ವಂತೆ ನಟಿ.. ಜೊತೆಗೆ, ಮೈಮೇಲೆ ಬಂದಿರೋ ದೇವಿ ಸಂಪೂರ್ಣವಾಗಿ ಬೇಕೇ ಬೇಕು ಅಂತಾ ಪಟ್ಟು ಹಿಡಿದು ಕುಳಿತಿದ್ರಂತೆ ಸಾನ್ಯಾ.. ಇಷ್ಟೆಲ್ಲಾ ಆದ್ಮೇಲೆ ತ್ರಿಶೂಲ ಕೈಗೆ ಸಿಕ್ಕ ಬಳಿಕ ಏನಾಯ್ತಂತೆ ಗೊತ್ತಾ?
ಬಿಗ್ಬಾಸ್ ಮನೆಯಲ್ಲೂ ಮೈಮೇಲೆ ಬಂದಿದ್ದಳಾ ದೇವಿ?
ಬಿಗ್ಬಾಸ್ ಮನೆಯಲ್ಲೇನಾಯ್ತು? ನಟಿಗೆ ಆಗಿದ್ದೇನು?
ಸಾನ್ಯಾ ಅಯ್ಯರ್ ಮಾತುಗಳನ್ನ ಕೇಳ್ತಿದ್ರೆ ಕೆಲವರಿಗೆ ಕಾಮಿಡಿ ಅನಿಸಬಹುದು, ಬಟ್, ಹಲವರು ಈ ರೀತಿ ಆಗಿದ್ರೂ ಆಗಿರಬಹುದು ಅನ್ನೋದನ್ನ ನಂಬ್ತಾರೆ.. ಅವ್ರೇ ಹೇಳುವ ಪ್ರಕಾರ ಯಾರೂ ದುಡ್ಡಿಗೋಸ್ಕರ ಈ ರೀತಿಯ ನಾಟಕ ಆಡೋದಿಲ್ಲ.. ಆವತ್ತು ಡ್ಯಾನ್ಸಿಂಗ್ ಚಾಂಪಿಯನ್ ಪರ್ಫಾರ್ಮೆನ್ಸ್ಗೂ ಮುನ್ನ ಆ ರೀತಿಯ ಘಟನೆ ಏನೊ ನಡೀತು ಸತ್ಯ.. ಬಟ್, ಇವ್ರು ಆರಾಧಿಸೋ ದೇವಿ ನಟಿ ಬಿಗ್ಬಾಸ್ ಮನೆಯಲ್ಲಿದ್ದಾಗಲೂ ಆವಾಹನೆಯಾಗಿದ್ದಳಂತೆ.
ಅದು ಬಿಗ್ಬಾಸ್ ಮನೆಯಲ್ಲಿ ಕೂಡ ಇತ್ತು. ನಾನು ರೇಕಿಂಗ್ ಕಲಿತಿದ್ದೇನೆ. ಹೀಲಿಂಗ್ಸ್ ಬಗ್ಗೆ ನನಗೆ ಪರಿಚಯ ಇದೆ. ನಂದೇ ಆದ ರೀತಿಯಲ್ಲಿ ಹೀಲಿಂಗ್ ಮಾಡಲು ಟ್ರೈ ಮಾಡ್ತೀನಿ. ಯಾರೋ ಒಬ್ಬರ ಹೀಲಿಂಗ್ ಮಾಡಬೇಕಾದ್ರೆ ನನಗೆ ಅದೇ ಎನರ್ಜಿ ಬಂದ ಹಾಗೆ ಆಗುತ್ತದೆ. ಅದು ಯಾಕೆ ಹಾಗೆ ಆಯಿತೋ ಗೊತ್ತಿಲ್ಲ.
ಸಾನ್ಯಾ ಅಯ್ಯರ್, ಕಿರುತೆರೆ ನಟಿ
ಸಾನ್ಯಾ ಐಯ್ಯರ್ ಕುಟುಂಬದಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಬೇಸಿಕಲಿ ಕಿರುತೆರೆ ನಟಿ ಆಧ್ಯಾತ್ಮದ ಕಡೆ ಹೆಚ್ಚಾಗಿಯೇ ಒಲವನ್ನ ಹೊಂದಿದ್ದಾರೆ.. ದೇವ್ರು ದಿಂಡ್ರು ಅಂದ್ರೆ ಸಾಕಷ್ಟು ಭಕ್ತಿಯಿಂದ ಆರಾಧನೆ ಹಾಗೂ ಪೂಜೆ ಪುನಸ್ಕಾರ ಮಾಡ್ತಾರೆ.. ಅಲ್ಲದೇ, ಯಾರಿಗೂ ಕನಸಲ್ಲೂ ಕೆಡುಕು ಬಯಸದೇ ಪರಿಶುದ್ಧವಾದ ಬದುಕು ನಡೆಸ್ತಾ ಇರೋದಕ್ಕೆ, ಆಕೆಗೆ ದೇವಿ ಒಲಿದಿದ್ದಾಳೆ ಅನ್ನೋದು ಅವರದ್ದೇ ಮಾತು. ನಟಿ ಸಾನ್ಯಾ ಐಯ್ಯರ್ ಮೈಮೇಲೆ ದೇವರು ಬರುತ್ತೆ ಅನ್ನೋದನ್ನ ಯಾರು ನಂಬ್ತಾರೋ ಬಿಡ್ತಾರೋ ಗೊತ್ತಿಲ್ಲ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post