T20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ, ಒಂದು ವಾರದಲ್ಲೇ BCCI ಆಯ್ಕೆ ಸಮಿತಿಯನ್ನ, ಕಿತ್ತುಹಾಕ್ತು. ಆದ್ರೆ ಚೇತನ್ ಶರ್ಮಾ ಆ್ಯಂಡ್ ಟೀಮ್ ಕಿಕ್ಔಟ್ ಆಗಲು, ದೇವರ ಶಾಪವೂ ಕಾರಣ ಎನ್ನಲಾಗ್ತಿದೆ. ಅದೇಗೆ ಅಂತೀರಾ?
ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯೋದು, ಅಷ್ಟು ಸುಲಭವಲ್ಲ. ಅದರಲ್ಲೂ ಈಗಿರೊ ಕಾಂಪಿಟೇಷನ್ನಲ್ಲಿ, ಚಾನ್ಸ್ ಗಿಟ್ಟಿಸಿಕೊಳ್ಳೋದಂತೂ, ಬಿಗ್ ಚಾಲೆಂಜ್.!
IPLನಲ್ಲಿ ಖತರ್ನಾಕ್ ಪ್ರದರ್ಶನ ನೀಡಿದ್ರೂ ಚಾನ್ಸ್ ಸಿಗೋದು ಡೌಟ್
ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಬೇಕಂದ್ರೆ, ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ, ಬೆವರು ಹರಿಸ್ಬೇಕು. ಟನ್ಗಟ್ಟಲೇ ರನ್ಗಳಿಸ್ಬೇಕು. IPLನಲ್ಲಿ ಖತರ್ನಾಕ್ ಪ್ರದರ್ಶನ ನೀಡ್ಬೇಕು. ಆದ್ರೆ ಇಷ್ಟೆಲ್ಲಾ ಮಾಡಿದ್ರೂ, ಚಾನ್ಸ್ ಸಿಗುತ್ತೆ ಅನ್ನೋ ಗ್ಯಾರಂಟಿ ಇರಲ್ಲ. ಆಯ್ಕೆ ಸಮಿತಿಯಂತೂ, ಕೆಲ ಆಟಗಾರರ ಮೇಲೆ ಕೃಪೆಯೇ ತೋರಲ್ಲ.
ಸೀನಿಯರ್ ಪ್ಲೇಯರ್ಸ್ ಆದ್ರೆ ಓಕೆ. ಅವರ ಅನುಭವ ತಂಡಕ್ಕೆ, ಅಗತ್ಯ. ಇಂದಲ್ಲ ನಾಳೆ ಫಾರ್ಮ್ಗೆ ಬರ್ತಾರೆ ಅಂತ ಅನ್ಕೋಬಹುದು. ಆದ್ರೆ ಯುವ ಆಟಗಾರರು ಪದೇ ಪದೇ ವಿಫಲರಾದ್ರೂ, ಅವರಿಗೆ ಮೇಲಿಂದ ಮೇಲೆ ಅವಕಾಶ ನೀಡಲಾಗುತ್ತೆ. ದೇಶೀಯ ಕ್ರಿಕೆಟ್ನಲ್ಲಿ ಮಿಂಚಿದ ಆಟಗಾರರನ್ನ ಕಡೆಗಣಿಸಲಾಗುತ್ತೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಮಾಡಿದ್ದು ಇದನ್ನೇ.
ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಹಲವು ಆಟಗಾರರು, ಅದ್ಭುತ ಪ್ರದರ್ಶನ ನೀಡಿದ್ರು. ಆ ಮೂಲಕ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಗೋ ಕನಸು ಕಂಡಿದ್ರು. ಆದ್ರೆ ಚೇತನ್ ಶರ್ಮಾ ಆ್ಯಂಡ್ ಟೀಮ್, ಅವರ ಕನಸನ್ನ ನುಚ್ಚು ನೂರು ಮಾಡಿತು. ಇದರಿಂದ ಈ ಎಲ್ಲಾ ಆಟಗಾರರು, ಓಪನ್ ಆಗಿಯೇ ಸೆಲೆಕ್ಷನ್ ಕಮಿಟಿ ವಿರುದ್ಧ ಕಿಡಿಕಾರಿದ್ರು. ದೇವರು ನಿಮ್ಮನ್ನ ಸುಮ್ಮನೇ ಬಿಡಲ್ಲ ಅಂತ ಶಾಪ ಹಾಕಿದ್ರು. ಅವರ ಶಾಪವೇನೋ ಎಂಬಂತೆ, ಅವಧಿ ಮುಗಿಯುವ ಮುನ್ನವೇ ಬಿಸಿಸಿಐ, ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನ ಕಿಕ್ಔಟ್ ಮಾಡ್ತು.
ಸಾಯಿಬಾಬಾ ನಿಮ್ಮ ಸುಮ್ಮನೆ ಬಿಡೋದಿಲ್ಲ ಎಂದಿದ್ದ ಪೃಥ್ವಿ.!
ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಪೃಥ್ವಿ ಶಾರನ್ನ ಆಯ್ಕೆ ಮಾಡಿರಲಿಲ್ಲ. ಇದ್ರಿಂದ ಮುಂಬೈಕರ್, ಎಲ್ಲವನ್ನೂ ನೀವು ನೋಡುತ್ತಿದ್ದಿರಿ ಅಂದುಕೊಂಡಿದ್ದೇನೆ ಸಾಯಿಬಾಬಾ ಅಂತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ರು.
ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ..!
ವಿದರ್ಭ ಎಕ್ಸ್ಪ್ರೆಸ್ ಉಮೇಶ್ ಯಾದವ್ ಕೂಡ, ತಮ್ಮನ್ನ ತಂಡದಿಂದ ಕೈ ಬಿಟ್ಟಾಗ ಸೆಲೆಕ್ಟರ್ಸ್ ಶಾಪ ಹಾಕಿದ್ರು. ಇನ್ಸ್ಟಾಗ್ರಾಮ್ನಲ್ಲಿ ನೀವು ನನ್ನನ್ನ Fool ಮಾಡಬಹುದು, ದೇವರು ನೋಡುತ್ತಿರುತ್ತಾನೆ ಅನ್ನೋದು ನೆನಪಿನಲ್ಲಿರಲಿ’ ಅನ್ನೋ ಸ್ಟೋರಿಯನ್ನ ಪೋಸ್ಟ್ ಮಾಡಿದ್ರು.
ತನಗೇ ತಾನೇ ಸಮಾಧಾನ ಮಾಡಿಕೊಂಡಿದ್ದ ರಾಣಾ
IPLನಲ್ಲಿ KKR ಪರ ಮಿಂಚುತ್ತಿರೋ, ಯುವ ಎಡಗೈ ಬ್ಯಾಟ್ಸ್ಮನ್ ನಿತೀಶ್ ರಾಣ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ರು. ಆದ್ರೆ, ರಾಣಾಗೆ ಹೆಚ್ಚಿನ ಅವಕಾಶಗಳೇ ಸಿಗಲಿಲ್ಲ. ಆದ್ರೆ ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆಯ ನಿರೀಕ್ಷೆಯಲ್ಲಿದ್ದ ರಾಣಾಗೆ ನಿರಾಸೆಯಾಗಿತ್ತು. ಇದರಿಂದ ರಾಣಾ, ತಾಳ್ಮೆಯಿಂದಿರು ಈ ನೋವು ಅಂತ್ಯವಾಗಲಿದೆ ಅಂತ ಪೋಸ್ಟ್ ಮಾಡಿ, ತಮ್ಮ ನೋವು ಹೊರಹಾಕಿದ್ರು.
ಒಟ್ಟಿನಲ್ಲಿ ಈ ಎಲ್ಲಾ ಯುವ ಆಟಗಾರರ ಶಾಪ, ಆಯ್ಕೆ ಸಮಿತಯನ್ನ ಸುಮ್ಮನೇ ಬಿಡಲಿಲ್ಲ. ಟಿ20 ವಿಶ್ವಕಪ್ ಸೋಲಿನ ನೆಪದಲ್ಲಿ ಬಿಸಿಸಿಐ ಹೇಳದೇ ಕೇಳದೇ, ಚೇತನ್ ಶರ್ಮಾ ಸೇರಿದಂತೆ ಎಲ್ಲರನ್ನೂ ಆ ಸ್ಥಾನದಿಂದ ಕೆಳಗಿಳಿಸಿ ಮನೆಗೆ ಕಳಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post